More

    VIDEO| ಯುವ ರೈತರಿಗೆ ಹೆಣ್ಣು ಕೊಡ್ತಿಲ್ಲ: ಸರ್ಕಾರದ ಮುಂದೆ ವಿಚಿತ್ರ ಬೇಡಿಕೆ ಇಟ್ಟ ರೈತ ಸಂಘ!

    ತುಮಕೂರು: ಅವಿವಾಹಿತ ಅಥವಾ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಆರ್ಥಿಕ ನೆರವು ಘೋಷಿಸಿ ಎಂದು ತುಮಕೂರಿನ ರೈತರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

    ನಾವು ರೈತರು ಅನ್ನೋ ಒಂದೇ ಕಾರಣಕ್ಕೆ ಹುಡುಗಿರು ಮದುವೆ ಆಗಲ್ಲ ಅಂತಿರಾ? ನಾನು ಕೂಡ 20 ಲಕ್ಷ ರೂ. ಸಂಪಾದನೆ ಮಾಡ್ತೀನಪ್ಪಾ. ಅಂತಹದರಲ್ಲಿ ನಮ್ಮನ್ನು ಮದುವೆಗೆ ಆಗಲ್ಲ ಅಂತಾರೆ. ಹೀಗಾಗಿ ರೈತನ ನೆರವಿಗೆ ಸರ್ಕಾರ ಬರಬೇಕೆಂದು ರೈತ ಕೇಳಿಕೊಂಡಿದ್ದಾರೆ.

    ಸರ್ಕಾರ ಅಂತರ್ಜಾತಿ ವಿವಾಹ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ. ಕೆಲ ಯೋಜನೆಗಳ ಬದಲಿಗೆ ಯುವ ರೈತರನ್ನು ಮದುವೆಯಾದರೆ ಯುವತಿಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆಂದು ಸರ್ಕಾರ ಘೋಷಣೆ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ ಎಂದಿದ್ದಾರೆ.

    ನಾವು ಸಹ ಎಂಎನ್​ಸಿ ಕಂಪನಿಗಳಿಗಿಂತಲೂ ಕಮ್ಮಿ ಏನಿಲ್ಲಾ. ನಮ್ಮ ಜಮೀನಿನಲ್ಲಿ 20 ರಿಂದ 25 ಲಕ್ಷ ರೂ. ಆದಾಯ ತೆಗೆಯುತ್ತೇನೆ. ಶುಂಠಿ, ಮುಸುಕಿನ ಜೋಳ ಸೇರಿದಂತೆ ಎಲ್ಲಾ ರೀತಿಯ ಬೆಳೆ ಬೆಳೆದು ಲಕ್ಷ ಲಕ್ಷ ಸಂಪಾದಿಸುವ ನಮಗೆ ಹೆಣ್ಣು ಸಿಗುತ್ತಿಲ್ಲ. ಇದರ ಬಗ್ಗೆ ನಾವೇನು ತಲೆ ಕೆಡಿಸಿಕೊಳ್ಳಲ್ಲ. ನಾವು ಪಾಸಿಟಿವ್​ ವ್ಯಕ್ತಿಗಳು. ಇವತ್ತಲ್ಲ, ನಾಳೆ ಹೆಣ್ಣು ಸಿಕ್ಕೆ ಸಿಕ್ತಾರೆ. ಆದರೆ, ಸೂಕ್ಷ್ಮ ಮನಸ್ಸಿನ ಯುವ ರೈತ ಗತಿ ಏನಾಗಬಾರದು ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಸರ್ಕಾರವೇ ಪರಿಹಾರ ನೀಡಬೇಕೆಂದಿದ್ದಾರೆ.

    ಸುಮಾರು ಎರಡರಿಂದ ಮೂರು ಲಕ್ಷದವರೆಗೂ ಪ್ಯಾಕೇಜ್ ಘೋಷಣೆ ಮಾಡಿ. ಗ್ರಾಮದಲ್ಲಿ ಅವಿವಾಹಿತ ರೈತರ ಸಂಖ್ಯೆ ಹೆಚ್ಚುತ್ತಿದೆ. 35 ವರ್ಷ ದಾಟಿದ ಯುವ ರೈತರಿದ್ದಾರೆ. ರೈತನಿಗೆ ರೈತ ಕುಟುಂಬದಲ್ಲೇ ಹೆಣ್ಣು ಸಿಕ್ತಿಲ್ಲ. ಸರ್ಕಾರ ಆರ್ಥಿಕ ನೆರವು ಘೋಷಣೆ ಮೂಲಕ ಯು ರೈತರನ್ನು ವಿವಾಹಿತರನ್ನಾಗಿ ಮಾಡಬೇಕು. ಸರ್ಕಾರ ಕೂಡಲೇ ‘ಕೃಷಿ ಲಕ್ಷ್ಮಿ’ ಯೋಜನೆ ಆರಂಭಿಸಬೇಕೆಂದು ರಾಜ್ಯ ರೈತ ಸಂಘ, ಕೃಷಿಕ ಸಮಾಜ ಸೇರಿದಂತೆ ರೈತರು ಹಾಗೂ ಯುವ ರೈತರ ಸಂಘ ಆಗ್ರಹಿಸಿದೆ. (ದಿಗ್ವಿಜಯ ನ್ಯೂಸ್​)

    ನಿರ್ಮಾಣ ಹಂತದ ಫ್ಲೈಓವರ್​ ಕುಸಿತ: ಕಾರುಗಳು ಜಖಂ, ಇಬ್ಬರ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts