More

    ಸಾವು ಹೆಚ್ಚಲಿದೆ ಎಂದ ಟ್ರಂಪ್

    ವಾಷಿಂಗ್ಟನ್: ಕರೊನಾ ವೈರಸ್​ಗೆ ಹೆಚ್ಚು ಬಾಧಿತವಾಗಿರುವ ಅಮೆರಿಕದಲ್ಲಿ ಲಾಕ್​ಡೌನ್ ಸಡಿಲಿಕೆ ನಂತರ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆರ್ಥಿಕ ಹಿನ್ನಡೆ ಸರಿಪಡಿಸಲು ಲಾಕ್​ಡೌನ್ ಸಡಿಲಿಕೆ ಮಾಡುವುದು ಅಗತ್ಯ ಎಂದು ಟ್ರಂಪ್ ತಿಳಿಸಿದ್ದಾರೆ. ಅರಿಝೋನಾದಲ್ಲಿರುವ ಹನಿಬೆಲ್ ಮಾಸ್ಕ್ ತಯಾರಿಕೆ ಕಂಪನಿಗೆ ಟ್ರಂಪ್ ಭೇಟಿ ನೀಡಿದ ಸಮಯಲ್ಲಿ ಮಧ್ಯಮದವರಿಗೆ ಈ ವಿಚಾರ ತಿಳಿಸಿದ್ದಾರೆ. ಕರೊನಾ ಕಾಣಿಸಿಕೊಂಡಾಗಿನಿಂದ ಟ್ರಂಪ್​ರ ಮೊದಲ ಪ್ರಯಾಣ ಇದಾಗಿದೆ. ದೇಶದಲ್ಲಿ ಕರೊನಾ ಹೆಚ್ಚಿನ ಪರಿಣಾಮವನ್ನು ಬೀರಲಿದೆ. ಆದರೆ ಆರ್ಥಿಕತೆಯನ್ನು ಸರಿಪಡಿಸಲು ಲಾಕ್​ಡೌನ್ ಸಡಿಲಿಕೆ ಮಾಡಲೇಬೇಕಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ:  ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ನಾನು ಮಾಸ್ಕ್ ತೊಡುವುದಿಲ್ಲ: ಹನಿವೆಲ್ ಕಂಪನಿಗೆ ಭೇಟಿ ನೀಡಿದ ಟ್ರಂಪ್ ಮಾಸ್ಕ್ ಧರಿಸದೆ ಇದ್ದದ್ದು ಚರ್ಚೆಗೆ ಕಾರಣವಾಗಿದೆ. ಭೇಟಿಯ ವೇಳೆ ಟ್ರಂಪ್ ಸೇರಿ ಕಂಪನಿಯ ಮುಖ್ಯಸ್ಥರು ಸಹ ಮಾಸ್ಕ್ ತೊಟ್ಟಿರಲಿಲ್ಲ. ಕಂಪನಿಯು ಎಲ್ಲೆಡೆ ಮಾಸ್ಕ್ ಧರಿಸಿ ಎಂದು ಕೇಳಿಕೊಳ್ಳುತ್ತಿದೆ. ಶ್ವೇತಭವನವು ಸಹ ಮಾಸ್ಕ್ ಧರಿಸಿ, ಕರೊನಾದಿಂದ ದೂರವಿರಿ ಎಂದು ಹೇಳುತ್ತಿದೆ. ಆದರೆ ನಿಯಮವನ್ನು ಪಾಲಿಸದ ಅಧ್ಯಕ್ಷನ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕದಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆಂದು ಸ್ಥಾಪಿಸಲಾದ ಟಾಸ್ಕ್ ಫೋರ್ಸ್​ಗಳನ್ನು ವಿಸರ್ಜನೆ ಮಾಡಲಾಗುವುದು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ನಿರ್ಧಾರ ಅನೇಕರ ವಿರೋಧಕ್ಕೆ ಕಾರಣವಾಗಿದೆ. ಟಾಸ್ಕ್ ಫೋರ್ಸ್​ಗಳನ್ನು ವಿಸರ್ಜಿಸಿ ಅವುಗಳ ಕೆಲಸವನ್ನು ಫೆಡರಲ್ ಏಜೆನ್ಸಿಗಳಿಗೆ ನೀಡುವುದಾಗಿ ಟ್ರಂಪ್ ಹೇಳಿದ್ದಾರೆ.

    ಇದನ್ನೂ ಓದಿ:  ಲಾಕ್​ಡೌನ್​ನಲ್ಲಿ ಸಲ್ಮಾನ್​ ಖಾನ್​ ಬಾಡಿ ಶೇಪೇ ಬದಲಾಗೋಯ್ತು!

    ಯುಎಸ್ ಬಳಿಕ ಬ್ರಿಟನ್ ಹೆಚ್ಚು ಗಂಭೀರ: ಬ್ರಿಟನ್​ನಲ್ಲಿ ಕರೊನಾ ತೀವ್ರತೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಅಮೆರಿಕದ ನಂತರದ ಸ್ಥಾನಕ್ಕೇರಿದೆ. ಕಳೆದ 48 ತಾಸಿನಲ್ಲಿ 693 ಜನರು ಬ್ರಿಟನ್​ನಲ್ಲಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 29,400ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕಿ ಬ್ರಿಟನ್ 2ನೇ ಸ್ಥಾನಕ್ಕೆ ಹೋಗಿದೆ. ಆದಾಗ್ಯೂ ಇಟಲಿಯಲ್ಲಿ 29,300 ಜನರು ಈವರೆಗೆ ಕರೊನಾಗೆ ಬಲಿಯಾಗಿದ್ದು, ಬ್ರಿಟನ್ ಮತ್ತು ಇಟಲಿ ಬಹುತೇಕ ಒಂದೇ ಪ್ರಮಾಣದ ಸಾವು ಪ್ರಕರಣಗಳನ್ನು ಹೊಂದಿವೆ. ಬ್ರಿಟನ್ ನಲ್ಲಿ 1 ವಾರದಲ್ಲಿ 7 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ.

    ಇದನ್ನೂ ಓದಿ: ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!

    ಸಿಂಗಾಪುರ್, ಕತಾರ್​ನಲ್ಲಿ ಮರಣ ಪ್ರಮಾಣ ಕಡಿಮೆ: ಸಿಂಗಾಪುರ ಮತ್ತು ಕತಾರ್ ರಾಷ್ಟ್ರಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ 20 ಸಾವಿರದ ಆಸುಪಾಸಿನಲ್ಲಿದೆ. ಆದರೆ ಸಾವಿನ ಸಂಖ್ಯೆ 20 ಮೀರಿಲ್ಲ! ಕತಾರ್​ನಲ್ಲಿ ಈವರೆಗೆ 17,142 ಜನರಲ್ಲಿ ಕರೊನಾ ಸೊಂಕು ಕಾಣಿಸಿಕೊಂಡಿದೆ. ಅದರಲ್ಲಿ ಸಾವನ್ನಪ್ಪಿರುವವರು ಕೇವಲ 12. ಸಿಂಗಾಪುರದಲ್ಲಿ 20,198 ಸೋಂಕಿತರಲ್ಲಿ ಕೇವಲ 18 ಸೋಂಕಿತರು ಮೃತರಾಗಿದ್ದಾರೆ. ಕತಾರ್​ದಲ್ಲಿ ಶೇ.0.07 ಮತ್ತು ಸಿಂಗಾಪುರದಲ್ಲಿ ಶೇ. 0.093 ಮರಣ ಪ್ರಮಾಣ ದಾಖಲಾಗಿದೆ.

    ಅಂತೂ ಸಿಕ್ತು ಕಿಮ್ ಜಾಂಗ್​ ಉನ್​ ಕಣ್ಮರೆಯಾಗಿದ್ದಕ್ಕೆ ನಿಜವಾದ ಕಾರಣ; ಸಿಯೋಲ್​ನ ಎನ್​​ಐಎಸ್ ಹೇಳಿದ್ದು ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts