More

    ನ.15 ರಂದು ದೊಡ್ಡ ಘೋಷಣೆಗೆ ಸಿದ್ಧರಾಗಿ ಎಂದ ಟ್ರಂಪ್​; ಎಲಾನ್​ ಮಸ್ಕ್​ ಟ್ವೀಟ್​ನಲ್ಲಿ ಹೇಳಿದ್ದೇನು?

    ನವದೆಹಲಿ: ನಿನ್ನೆ (ನ.7) ರಾತ್ರಿ ನಡೆದ ಪ್ರಚಾರ ಯಾತ್ರೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇಳಿಯುವ ಸೂಚನೆ ನೀಡಿದ್ದಾರೆ.

    ಅವರು ನವೆಂಬರ್ 15 ರಂದು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೊ ಮನೆಯಲ್ಲಿ ‘ದೊಡ್ಡ ಘೋಷಣೆ’ ಮಾಡುವುದಾಗಿ ನೆರೆದಿದ್ದ ಬೆಂಬಲಿಗರಿಗೆ ತಿಳಿಸಿದರು. 2024 ನವೆಂಬರ್ ಮಧ್ಯದಲ್ಲಿ ನಡೆಯಲಿರುವ ಮತ್ತೊಂದು ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಕೇಳಿಬರುತ್ತಿದೆ.

    ಓಹಿಯೋದಲ್ಲಿ ನೀಡಿದ ಪ್ರಕಟಣೆ, ಟ್ರಂಪ್​ ಚುನಾವಣೆಗೆ ಇಳಿಯುವ ಸ್ಪಷ್ಟ ಸೂಚನೆ ಎಂದೇ ಹೇಳಲಾಗುತ್ತಿದೆ. ಅದರ ನಡುವೆ ಎಲಾನ್​ ಮಸ್ಕ್​ ಕೂಡ ತಮ್ಮ ಟ್ವೀಟ್​ನಲ್ಲಿ ಟ್ರಂಪ್​ ಇರುವ ರಿಪಬ್ಲಿಕನ್​ ಪಕ್ಷಕ್ಕೆ ಮತ ಚಲಾಯಿಸಿ ಎಂದು ಜನರಿಗೆ ಸಲಹೆ ನೀಡಿದ್ದಾರೆ. ಬೈಡೆನ್​ ಸರ್ಕಾರದ ವೈಫಲ್ಯಗಳು ಡೆಮಾಕ್ರೆಟಿಕ್​ ಪಕ್ಷವನ್ನು ಮುಂಬರುಬವ ಚುನಾವಣೆಯಲ್ಲಿ ಮುಳುಗಿಸಲಿದೆಯೆ ಎಂಬ ಪ್ರಶ್ನೆ ಎಲ್ಲೆಡೆ ಏಳುತ್ತಿದೆ.

    ಟ್ರಂಪ್​ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಆಗುವ ಲಾಭಗಳು ಅನೇಕ. ಸದ್ಯ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿರುವ ಹಣ ಮತ್ತು ಬೆಂಬಲ ಬಹಳಷ್ಟು ಇಳಿಯಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts