More

  ಆರ್‌ಸಿಬಿ-ಸಿಎಸ್‌ಕೆ ನಡುವೆ ಉದ್ಘಾಟನ ಕದನ: ಐಪಿಎಲ್‌ನಲ್ಲಿ ಕೊನೇ ಬಾರಿ ಧೋನಿ-ಕೊಹ್ಲಿ ಮುಖಾಮುಖಿ?

  ಚೆನ್ನೈ: ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ 17ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪ್ರಶಸ್ತಿ ಬರ ನೀಗಿಸುವ ಹಂಬಲದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಡಲ ತೀರದ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಕೊನೇಕ್ಷಣದಲ್ಲಿ ಎಂಎಸ್ ಧೋನಿ ಪದತ್ಯಾಗದಿಂದ, ಸಿಎಸ್‌ಕೆ ತಂಡ ನೂತನ ನಾಯಕ ಋತುರಾಜ್ ಗಾಯಕ್ವಾಡ್‌ಗೆ ಪ್ರಶಸ್ತಿ ಉಳಿಸಿಕೊಳ್ಳುವ ಹೊಸ ಜವಾಬ್ದಾರಿ ಒಪ್ಪಿಸಿದೆ. ಇತ್ತ ಹೊಸ ಲಾಂಛನ, ಜೆರ್ಸಿ, ಹೆಸರು ಬದಲಾವಣೆ ಜತೆಗೆ ನೂತನ ಕೋಚ್ ಮಾರ್ಗದರ್ಶನದಲ್ಲಿ ಹೊಸ ಅಧ್ಯಾಯ ಆರಂಭಿಸಲು ್ಾ ಡು ಪ್ಲೆಸಿಸ್ ಬಳಗ ಸಜ್ಜಾಗಿದೆ.

  ದಕ್ಷಿಣ ಭಾರತದ ಡರ್ಬಿಯ ಸಾಂಪ್ರದಾಯಿಕ ಎದುರಾಳಿಗಳ ಹಣಾಹಣಿಯಲ್ಲಿ ಆಪ್ತಮಿತ್ರರಾದ ವಿರಾಟ್ ಕೊಹ್ಲಿ-ಎಂಎಸ್ ಧೋನಿ ನಡುವಿನ ಮುಖಾಮುಖಿ ಕುತೂಹಲ ಕೆರಳಿಸಿದೆ. ಉಭಯ ತಂಡಗಳಲ್ಲಿ ಯಾವುದಾದರು ಒಂದು ತಂಡ ಪ್ಲೇಆ್ಗೇರದಿದ್ದರೆ, ಇದು ಐಪಿಎಲ್‌ನಲ್ಲಿ ಸ್ಟಾರ್ ಆಟಗಾರರ ಕೊನೇ ಮುಖಾಮುಖಿ ಎನಿಸಲಿದೆ. ಎರಡೂ ತಂಡಗಳು ಪ್ಲೇಆ್ಗೇರಿದರೆ ಮಾತ್ರ ಟೂರ್ನಿಯಲ್ಲಿ ಮತ್ತೆ ಎದುರಾಗುವ ಸಾಧ್ಯತೆಗಳಿವೆ. ಜತೆಗೆ ಸಿಎಸ್‌ಕೆ ತಂಡದಲ್ಲಿ ಆತ್ಮೀಯರಾಗಿದ್ದ ್ಾ ಡು ಪ್ಲೆಸಿಸ್-ಋತುರಾಜ್ ಗಾಯಕ್ವಾಡ್ ಮೊದಲ ಬಾರಿ ಎದುರಾಳಿ ನಾಯಕರಾಗಿ ಎದುರಾಗಲಿದ್ದಾರೆ.
  ಡಬ್ಲುೃಪಿಎಲ್‌ನಲ್ಲಿ ಮಹಿಳಾ ತಂಡ ಪ್ರಶಸ್ತಿ ಗೆದ್ದಿರುವುದನ್ನು ಸ್ಫೂರ್ತಿಯಾಗಿಸಿಕೊಂಡು ಆರ್‌ಸಿಬಿ ಪುರುಷರ ತಂಡ ಸಿಎಸ್‌ಕೆ ಎದುರು ಶುಭಾರಂಭ ಮಾಡುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಅಭಿಮಾನಿಗಳೂ ಪಂದ್ಯದ ಬಗ್ಗೆ ಭಾರಿ ಕಾತರಗೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts