More

    ರೈಲು ಹಳಿಯ ಪವರ್​ ಕೇಬಲ್​ಗೆ ಸಿಲುಕಿ ಸತ್ತ ಒಡನಾಡಿಗಾಗಿ ರೋಧಿಸಿದ ಹಂಸ: 23 ರೈಲುಗಳ ವಿಳಂಬ!

    ಬರ್ಲಿನ್​: ಜರ್ಮಿನಿಯ ಹೈಸ್ಪೀಡ್​ ರೈಲ್ವೇ ಹಳಿಗೆ ದಾರಿ ತಪ್ಪಿ ಬಂದ ಶ್ವೇತವರ್ಣದ ಎರಡು ಬಾತುಕೋಳಿಗಳಲ್ಲಿ ಒಂದು ಪವರ್​ ಕೇಬಲ್​ ಸಿಲುಕಿ ಮೃತಪಟ್ಟರೆ, ಇನ್ನೊಂದು ಸತ್ತ ಬಾತುಕೋಳಿಯ ಮುಂದೆ ಕುಳಿತು ದುಃಖಿಸುವ ಮೂಲಕ ನಿರ್ಮಲ ಪ್ರೀತಿ ಏನೆಂಬುದನ್ನು ತೋರಿಸಿಕೊಟ್ಟಿದೆ.

    ರೈಲು ಹಳಿಯ ಮೇಲೆ ಕುಳಿತು ದುಃಖಿಸುತ್ತಿದ್ದ ಬಾತುಕೋಳಿಯಿಂದಾಗ ಸುಮಾರು 23 ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬವಾದ ಪ್ರಸಂಗವೂ ಜರುಗಿದೆ. ಅಧಿಕಾರಿಗಳು ಬಾತುಕೋಳಿಯನ್ನು ಕಳುಹಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಹ ತನ್ನ ಒಡನಾಡಿಯನ್ನು ಬಿಟ್ಟು ಹೋಗುವ ಮನಸ್ಸು ಮಾಡಲೇ ಇಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಬಾತುಕೋಳಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವವರೆಗೂ ಅದು ಮಾತ್ರ ಒಂದಿಂಚು ಅಲುಗಾಡದೇ ಸತ್ತ ತನ್ನ ಒಡನಾಡಿಯ ಮುಂದೆಯೇ ಕುಳಿತು ರೋಧಿಸುತ್ತಿತ್ತು.

    ಇದನ್ನೂ ಓದಿ: ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!

    ಬಾತುಕೋಳಿಯ ಈ ಒಂದು ವರ್ತನೆಯಿಂದ ಪ್ರಾಣಿ ಮತ್ತು ಪಕ್ಷಿಗಳಲ್ಲಿಯೂ ಭಾವನೆ ಮತ್ತು ಸೂಕ್ಷ್ಮತೆ ಇದೆ ಎಂಬುದು ಅರ್ಥವಾಗಿದೆ. ಅವುಗಳು ಸಹ ನೋವು ಅನುಭವಿಸುತ್ತವೆ ಎಂಬುದು ಗೊತ್ತಾದಂತಿದೆ.

    ಇನ್ನು ಅಗ್ನಿಶಾಮಕ ಸಿಬ್ಬಂದಿಯ ಗಂಟೆಗಳ ಕಾಲದ ರಕ್ಷಣಾ ಕಾರ್ಯಾಚರಣೆಯಿಂದಾಗಿ 23 ರೈಲುಗಳ ಸಮಯದಲ್ಲಿ ವಿಳಂಬವಾಗಿದೆ. ಸತ್ತ ಬಾತುಕೋಳಿಯ ಕಳೇಬರಹವನ್ನು ತೆಗೆಯಲು ಅಧಿಕಾರಿಗಳು ಸುಮಾರು 50 ನಿಮಿಷಗಳ ಕಾಯಬೇಕಾಯಿತು. ಜೀವಂತ ಬಾತುಕೋಳಿಯನ್ನು ರಕ್ಷಿಸಿ ಪಕ್ಕದ ನದಿಯಲ್ಲಿ ಬಿಡಲಾಯಿತು. (ಏಜೆನ್ಸೀಸ್​)

    ಇದನ್ನೂ ಓದಿ: ಅತ್ತೆ ಮಾವ ವ್ಯಂಗ್ಯವಾಡಿದರೆ ಅದು ತಪ್ಪಲ್ಲ! ಗಂಡನ ಮನೆಯವರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ!

    VIDEO| ಈ ವರ್ಷದ ಅತ್ಯಂತ ಕೆಟ್ಟ ಬೌಲಿಂಗ್​ ಇದಂತೆ: ವೈರಲ್​ ವಿಡಿಯೋ ನೋಡಿದ್ರೆ ನಿಜ ಅಂತಿರಾ!

    56 ವರ್ಷದ ವ್ಯಕ್ತಿಗೆ 16 ವರ್ಷದ ಬಾಲಕಿ ಜತೆ ಮದುವೆ! ಮದುವೆಯ ಹಿಂದಿತ್ತು ಬಲವಾದ ಕಾರಣ

    ಭಾರತದಲ್ಲೂ ಪತ್ತೆಯಾಯ್ತು ನಿಗೂಢ ಏಕಶಿಲೆ: ಬೆಳಗಾಗುವಷ್ಟರಲ್ಲಿ ಪಾರ್ಕಿನಲ್ಲಿ ಪ್ರತ್ಯಕ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts