More

    ಪಾಲಕರ ವಿರೋಧ ಲೆಕ್ಕಿಸದೇ ಪಾರ್ಶ್ವವಾಯು ಪೀಡಿತ ಪ್ರಿಯಕರನ್ನು ಮದ್ವೆಯಾಗಿದ್ದ ಸಹನಾಗೆ ಭಾರೀ ಆಘಾತ

    ತ್ರಿಸ್ಸೂರ್​: ಅಪಘಾತದ ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದ ಕೇರಳ ಮೂಲದ ಪ್ರಣವ್ ನಿನ್ನೆ (ಫೆ.17) ಕೊನೆಯುಸಿರೆಳೆದಿದ್ದಾರೆ. ಪ್ರಣವ್​ಗೆ 31 ವರ್ಷ ವಯಸ್ಸಾಗಿತ್ತು. ತನ್ನ ಪ್ರೇಮ ವಿವಾಹದಿಂದಲೇ ಕೇರಳದಲ್ಲಿ ಮಾತ್ರವಲ್ಲದೆ, ಎಲ್ಲಡೆ ಸುದ್ದಿ ಮಾಡಿದ್ದರು.

    ಪ್ರಣವ್​, ತ್ರಿಸ್ಸೂರ್​ನ ಕನ್ನಿಕ್ಕರ ಮೂಲದ ನಿವಾಸಿ. ಶುಕ್ರವಾರ ಬೆಳಗ್ಗೆ ರಕ್ತ ವಾಂತಿ ಮಾಡಿಕೊಂಡ ಪ್ರಣವ್​​ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಪ್ರಣವ್​ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದರು. ತಿರುವನಂತಪುರದ ಸಹನಾ ಎಂಬಾಕೆಯನ್ನು 2020ರ ಮಾರ್ಚ್​ ತಿಂಗಳಲ್ಲಿ ಮದುವೆಯಾಗಿದ್ದರು. ಇವರಿಬ್ಬರ ಮದುವೆ ರಾಷ್ಟ್ರದಾದ್ಯಂತ ಸುದ್ದಿಯಾಗಿ, ಸಹನಾಳನ್ನು ಎಲ್ಲರು ಮೆಚ್ಚಿಕೊಂಡು ಕೊಂಡಾಡಿದ್ದರು. ಇಬ್ಬರು ಪ್ರಣವ್​-ಸಹನಾ ಎಂದು ಖ್ಯಾತಿಯಾಗಿದ್ದರು. ಮನೆಯವರ ಭಾರೀ ವಿರೋಧದ ನಡುವೆಯೂ ಸಹನಾ, ಪ್ರಣವ್​​ನನ್ನು ಮದುವೆಯಾಗಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಬೆಳೆದ ಸ್ನೇಹ, ಪ್ರೀತಿಗೆ ತಿರುಗಿ, ಮದುವೆಯಲ್ಲಿ ಅಂತ್ಯವಾಗಿತ್ತು.

    8 ವರ್ಷಗಳ ಹಿಂದೆ ನಡೆದ ಅಪಘಾತವೊಂದರಲ್ಲಿ ಪ್ರಣವ್​ ಗಂಭೀರವಾಗಿ ಗಾಯಗೊಂಡಿದ್ದ. ಇದಾದ ಬಳಿಕ ಆತನಿಗೆ ಸೊಂಟದಿಂದ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ಒಳಗಾಗಿತ್ತು. ನಿಯಂತ್ರಣ ಕಳೆದುಕೊಂಡ ಬೈಕ್​ ಗೋಡೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಣವ್​ ಹಂಚಿಕೊಂಡಿದ್ದರು. ಅಲ್ಲದೆ, ರಸ್ತೆ ಸುರಕ್ಷತೆ ಬಗ್ಗೆ ಜಾಲತಾಣದಲ್ಲಿ ಸದಾ ಜಾಗೃತಿ ಮೂಡಿಸುತ್ತಿದ್ದರು.

    ಇಬ್ಬರ ಪ್ರೀತಿಗೆ ಅಪಘಾತವು ಬರ ಸಿಡಿಲಂತೆ ಬಂದೆರಗಿದರು ಧೃತಿಗೆಡದ ಸಹನಾ ತನ್ನ ಮನೆಯವರ ವಿರೋಧದ ನಡುವೆಯೂ ಪ್ರಣವ್​ ಕೈಹಿಡಿಯುವ ಮೂಲಕ ನಿಜವಾದ ಪ್ರೀತಿಗೆ ಜ್ವಲಂತ ಉದಾಹರಣೆಯಾದರು. ಇಬ್ಬರು ಸಂತೋಷದ ಜೀವನವನ್ನೂ ನಡೆಸುತ್ತಿದ್ದರು. ಆದರೆ, ವಿಧಿಯಾಟ ಇಂದು ಇಬ್ಬರನ್ನು ಬೇರೆ ಮಾಡಿದೆ. ನಿನ್ನೆ ರಕ್ತ ವಾಂತಿ ಮಾಡಿಕೊಂಡು ಪ್ರಣವ್​ ಕೊನೆಯುಸಿರೆಳೆದಿದ್ದಾರೆ.

    ಸಹನಾ ಜೊತೆಗಿನ ಸಂತಸದ ಕ್ಷಣಗಳನ್ನು ಪ್ರಣವ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಸಹನಾ ಮುಖವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು ಮತ್ತು ಅದನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. (ಏಜೆನ್ಸೀಸ್​)

    ಕುರ್ಚಿ ಆಸೆ ಇನ್ನೂ ಬಂದಿಲ್ಲ; ಪ್ರಧಾನಿ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ!

    ಕಡಲ ತೀರದಲ್ಲಿ ರೋಚಕ ಸಾಹಸ; ಸೈಕಲಾಜಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ

    ಪತ್ನಿಯಿಂದ ರಹಸ್ಯ ಮುಚ್ಚಿಟ್ಟ ಪತಿಗೆ ಕಾದಿತ್ತು ಬಿಗ್​ ಶಾಕ್​! ಭಾರೀ ಸಂಚಲನ ಮೂಡಿಸಿದ ಕೋರ್ಟ್​ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts