More

    ಮೂರನೇ ಸಲ ಭೂಕಂಪಕ್ಕೆ ನಡುಗಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಟರ್ಕಿ

    ಟರ್ಕಿ: ನಿನ್ನೆ ಬೆಳಗಿನ ಜಾವ ಸುಮಾರು 1,500 ಮಂದಿಯ ಸಾವಿಗೆ ಕಾರಣವಾದಂಥ ಭೀಕರ ಭೂಕಂಪ ಸಂಭವಿಸಿದ್ದ ಟರ್ಕಿಯಲ್ಲಿ ನಿನ್ನೆ ಸಂಜೆಯ ಸುಮಾರಿಗೆ ಇನ್ನೊಂದು ಭಯಂಕರ ಭೂಕಂಪ ಉಂಟಾಗಿದೆ.

    ಕಳೆದ ನೂರು ವರ್ಷಗಳಲ್ಲಿ ಸಂಭವಿಸಿದ ಭೂಕಂಪಗಳಲ್ಲೇ ಭೀಕರ ಎನ್ನಲಾದಂಥದ್ದು ಇಂದ ಬೆಳಗಿನ ಜಾವ ಟರ್ಕಿಯನ್ನು ನಡುಗಿಸಿದ್ದು, ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿತ್ತು. ರಾತ್ರಿ ಬೆಳಗಾಗುವುದರೊಳಗೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಒಂದು ಅಂದಾಜಿನ ಪ್ರಕಾರ 1,500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

    ಟರ್ಕಿಯ ದಕ್ಷಿಣ ಪ್ರಾಂತ್ಯಗಳಲ್ಲಿ ಭೂಕಂಪಗಳು ಸಂಭವಿಸಿದ ನಂತರ ಅಲ್ಲಿನ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಟರ್ಕಿಯ ದಕ್ಷಿಣ ಪ್ರಾಂತ್ಯಗಳಲ್ಲಿ ಸೋಮವಾರ ಎರಡು ಭೂಕಂಪಗಳು ಸಂಭವಿಸಿದಾಗ ಕನಿಷ್ಠ 1,541 ಜನರು ಸಾವನ್ನಪ್ಪಿ 9733 ಜನರು ಗಾಯಗೊಂಡಿದ್ದರು ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಅವರು ಹೇಳಿದ್ದರು.

    ಅನಾಡೋಲು ಏಜೆನ್ಸಿ ವರದಿಯ ಪ್ರಕಾರ, ಪಜಾರ್ಸಿಕ್ ಜಿಲ್ಲೆಯಲ್ಲಿ 7.7 ರ ತೀವ್ರತೆಯ ಭೂಕಂಪ ಸಂಭವಿಸಿದ್ದು ಅದರ ಕೇಂದ್ರ ಕಹಮನ್ಮಾರಾಸ್‌ನಲ್ಲಿ ಇದೆ. ಈ ಭೂಕಂಪ ಗಜಿಯಾಂಟೆಪ್, ಸಾನ್ತಿಯುರ್ಥಾ, ದಿಯಾರ್‌ಬಕಿ‌, ಅದಾನ, ಅಡಿಯಾಮನ್, ಮಲತ್ಯ, ಉಸ್ಮಾನಿಯಾ, ಹಟೇ ಮತ್ತು ಕಿಲಿನ್ ಸೇರಿದಂತೆ ಹಲವಾರು ಪ್ರಾಂತ್ಯಗಳನ್ನು ಘಾಸಿಗೊಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts