More

    ‘ಭಾಗ್ಯ ನಿಧಿ ತುಂಬಿ ತುಳುಕತಲೇ ಪರಾಕ್’ ಎಂದ ಮೈಲಾರದ ಗೊರವಯ್ಯ!

    ವಿಜಯನಗರ: ಹರಪನಹಳ್ಳಿ ಪಟ್ಟಣದ ಹೊರವಲಯದ ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನು ಏರಿ ಪ್ರತೀ ವರ್ಷ ಕಾರ್ಣಿಕ ನುಡಿಯುತ್ತಾರೆ. ಈ ಕಾರ್ಣಿಕದಲ್ಲಿ ರಾಜ್ಯದ ದೇಶದ ಒಟ್ಟಾರೆ ಭವಿಷ್ಯವನ್ನು ನುಡಿಯಲಾಗುತ್ತದೆ. ಪ್ರತೀ ವರ್ಷದಂತೆ ಈ ಬಾರಿಯೂ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದು ಈ ಬಾರಿ ಚುನಾವಣೆ ಹೊಸ್ತಿಲಲ್ಲೇ ಜಾತ್ರೆ ಬಂದಿರುವುದರಿಂದ ಭಕ್ತಾದಿಗಳು ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದರು.

    ಈ ಬಾರಿ ಬಿಲ್ಲನ್ನು ಏರಿದ್ದ ಗೊರವಯ್ಯ, ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಅಂದಹಾಗೆ ಈ ಮೈಲಾರ ಇರುವುದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹುಲಿಕಟ್ಟಿ ರಸ್ತೆಗೆ ಹೊಂದಿಕೊಂಡು.

    ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರೋ ಮೈಲಾರಲಿಂಗೇಶ್ವರ ದೇಗುಲದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ಕೊಟೆಪ್ಪ ಬಿಲ್ಲನ್ನೂ ಏರಿ, ಸದ್ದಲೇ ಅಂತ ಹೇಳಿದ ಕೂಡಲೇ, ಎಲ್ಲರೂ ಮೌನವಹಿಸುತ್ತಾರೆ. ಆ ಬಳಿಕ ಗೊರವಪ್ಪ ಭವಿಷ್ಯ ನುಡಿದು ಗೊರವಯ್ಯ ಬಿಲ್ಲಿನಿಂದ ಕೆಳಗೆ ಬೀಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts