More

    ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ

    ಸ್ತ್ರೀಯರಿಗೆ ಸಂಬಂಧಿಸಿದ ಮುಟ್ಟಿನ ದೋಷ ಮತ್ತು ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತವಾದ ಯೋಗಾಸನವೆಂದರೆ ಪರಿವೃತ್ತ ಜಾನುಶೀರ್ಷಾಸನ. ಲಿವರ್​ ಮತ್ತು ಕಿಡ್ನಿಯ ಆರೋಗ್ಯಕ್ಕೆ ಉತ್ತಮವಾದ ಈ ಆಸನವು ಕುಳಿತುಕೊಂಡು ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ.

    ಪ್ರಯೋಜನಗಳು: ಲಿವರ್​ ಮತ್ತು ಕಿಡ್ನಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ಮೂತ್ರಕೋಶ ಸುಸ್ಥಿತಿಯಲ್ಲಿರುತ್ತದೆ. ವಿಶೇಷವಾಗಿ, ಕಶೇರುಕಗಳ ಭಾಗ, ಭುಜಗಳ, ಮಂಡಿಗಚ್ಚು ಮತ್ತು ತೊಡೆಗಳ ಭಾಗಗಳು ಎಳೆತಕ್ಕೊಳಗಾಗಿ ಸ್ನಾಯುಗಳು ಬಲಗೊಳ್ಳುತ್ತವೆ. ತೊಡೆಯ ಕೀಲುಗಳು ಬಲಗೊಳ್ಳುತ್ತವೆ. ಮಹಿಳೆಯರ ಮೆನೋಪಾಸ್​ ಸಮಯದ ಸಮಸ್ಯೆಗಳ ನಿಯಂತ್ರಣಕ್ಕೆ ಈ ಯೋಗಾಸನದ ಅಭ್ಯಾಸ ಸಹಕಾರಿಯಾಗಿದೆ.

    ಇದನ್ನೂ ಓದಿ: ಚೌತಿ ನೆಪ ಮಾತ್ರ.. ಇವರು ಖರ್ಗೆಯನ್ನು ಭೇಟಿ ಮಾಡಲಿಕ್ಕೆಂದು ಬಂದ ವಿಷಯವೇ ಬೇರೆ..!

    ಅಭ್ಯಾಸಕ್ರಮ: ಜಮಖಾನದ ಮೇಲೆ ಕಾಲು ಚಾಚಿ ಕುಳಿತುಕೊಳ್ಳಬೇಕು. ಕಾಲುಗಳನ್ನು ಜೋಡಿಸಿ, ನಂತರ ಬಲಗಾಲನ್ನು ಮಡಿಸಿಕೊಂಡು ಎಡತೊಡೆಯ ಮೂಲಕ್ಕೆ ಸೇರಿಸಬೇಕು. ಮುಂದಕ್ಕೆ ಬಾಗಿಕೊಂಡು ಎಡಗೈನಿಂದ ಎಡಗಾಲಿನ ಹೆಬ್ಬೆಟ್ಟನ್ನು ಹಿಡಿದುಕೊಳ್ಳಬೇಕು. ನಿಧಾನವಾಗಿ ಪಾರ್ಶ್ವಕ್ಕೆ ಬಾಗಿ ಬಲಗೈಯನ್ನು ಮೇಲಿನಿಂದ ತಂದು ಎಡಗಾಲಿನ ಹೆಬ್ಬೆರಳನ್ನೇ ಹಿಡಿದುಕೊಳ್ಳಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲೆ ಬರಬೇಕು. ಈಗ ಎಡಗಾಲನ್ನು ಮಡಿಸಿಕೊಂಡು ಮತ್ತೊಂದು ಪಾರ್ಶ್ವಕ್ಕೆ ಇದೇ ರೀತಿಯಾಗಿ ಅಭ್ಯಾಸ ಮಾಡಬೇಕು.

    ಆರಂಭದಲ್ಲಿ ಕೆಲವು ಸರಳ ಆಸನಗಳನ್ನು ಮಾಡಿಕೊಂಡು ನಂತರ ಈ ಆಸನ ಮಾಡಿದರೆ ಒಳ್ಳೆಯದು. ತೀರಾ ಸೊಂಟ ನೋವು ಇರುವವರು ಮಾಡಬಾರದು.

    ಗಣಪ ಮೂರ್ತಿ ಎತ್ತರ: ಸರ್ಕಾರಿ ಆದೇಶಕ್ಕೆ ಸೆಡ್ಡು ಹೊಡೆದ ವಿಶ್ವ ಹಿಂದೂ ಪರಿಷತ್!

    ದೈವಿಕ ಭಾವ ಮೂಡಿಸುವ ‘ಪದ್ಮಾಸನದಲ್ಲಿ ನಮಸ್ಕಾರ ಮುದ್ರೆ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts