More

    ನರಗಳ – ಮನಸ್ಸಿನ ನಿಯಂತ್ರಣ ಸಾಧಿಸಲು, ಈ ಯೋಗಾಸನ ಸಹಕಾರಿ

    ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿಯಾದ ಯೋಗಾಸನವೆಂದರೆ ‘ಅಷ್ಟವಕ್ರಾಸನ’. ಅಷ್ಟವಕ್ರ ಮುನಿಯ ಹೆಸರನ್ನು ಈ ಯೋಗಾಸನಕ್ಕೆ ಇಡಲಾಗಿದೆ. ಈ ಆಸನವನ್ನು ಮಾಡಲು, ಸೊಂಟ ಮತ್ತು ಕೈಕಾಲುಗಳ ಬಲದ ಅವಶ್ಯಕತೆ ಇರುತ್ತದೆ. ಆರಂಭದಲ್ಲಿ ಸರಳ ಆಸನಗಳನ್ನು ಕಲಿತು ಮಾಡಿ, ನಂತರ ಅಷ್ಟವಕ್ರಾಸನವನ್ನು ಕಲಿಯಬಹುದು.

    ಪ್ರಯೋಜನಗಳು: ದೇಹದ ನರಗಳ ಮೇಲೆ ಹಾಗೂ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಈ ಆಸನ ಸಹಕಾರಿ. ವಿಶೇಷವಾಗಿ, ತೋಳುಗಳ, ಭುಜಗಳ, ಕಾಲುಗಳ ಮತ್ತು ಉದರದ ಸ್ನಾಯುಗಳು ಬಲಗೊಳ್ಳುತ್ತವೆ. ಬೆನ್ನುಮೂಳೆ ಬಲಗೊಳ್ಳುತ್ತದೆ. ದೇಹಕ್ಕೆ ಸಮತೋಲನ ಉಂಟಾಗುವಲ್ಲಿಯೂ ಇದರ ಅಭ್ಯಾಸ ಸಹಕಾರಿ.

    ಇದನ್ನೂ ಓದಿ: ಶರಾವತಿ ಸಂತ್ರಸ್ತರ ಜಮೀನಿಗೆ ಹಕ್ಕುಪತ್ರಕ್ಕೆ ಪ್ರತಿಭಟನೆ

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಕುಳಿತುಕೊಳ್ಳುವುದು. ಮೊದಲಿಗೆ ಎಡಗಾಲನ್ನು ಎಡಗೈ ಮೇಲಿನಿಂದ ತಂದು ಮಡಿಸುವುದು. ಕೈಗಳನ್ನು ಊರಿ ನಿಧಾನವಾಗಿ ಎರಡೂ ಕಾಲುಗಳನ್ನು ಪಕ್ಕಕ್ಕೆ ಚಾಚುವುದು. ಒಂದು ಕೈ ಕಾಲುಗಳ ಮಧ್ಯೆ ಇರಬೇಕು ಮತ್ತು ಅಂಗಾಲುಗಳನ್ನು ಪರಸ್ಪರ ಹೆಣೆಯಬೇಕು. ದೇಹವನ್ನು ಮುಂದಕ್ಕೆ ಬಾಗಿಸಿ ಸಮತೋಲನ ಸಾಧಿಸುವುದು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ಕಾಲುಗಳನ್ನು ವಾಪಸ್​ ತಂದು ನೆಲದ ಮೇಲೆ ವಿಶ್ರಮಿಸಬೇಕು.

    ಇದೊಂದು ಕ್ಲಿಷ್ಟಕರ ಭಂಗಿಯಾಗಿದ್ದು, ಗುರುಮುಖೇನ ಹೆಚ್ಚಿನ ಸಲಹೆಗಳನ್ನು ಪಡೆದು ಅಭ್ಯಾಸ ಮಾಡುವುದು ಒಳ್ಳೆಯದು. ಆರಂಭದಲ್ಲಿ ಕಷ್ಟವೆನಿಸಿದರೂ, ನಿಯಮಿತ ಅಭ್ಯಾಸದಿಂದ ಕರಗತ ಮಾಡಿಕೊಳ್ಳಬಹುದು. ಮಣಿಕಟ್ಟು ನೋವು, ತೋಳಿನ ಗಾಯ, ಸೊಂಟ ಅಥವಾ ಕಾಲಿನ ನೋವು ಇರುವವರು ಈ ಆಸನ ಮಾಡಬಾರದು.

    ಬೆನ್ನು, ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ‘ಸುಪ್ತ ಪದ್ಮಾಸನ’

    ದೇವಾಲಯಗಳ ರಕ್ಷಣೆಗೆ ಮುಂದಾದ ಸರ್ಕಾರ: ವಿಧಾನಸಭೆಯಲ್ಲಿ ವಿಧೇಯಕ

    ‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts