ಬೆನ್ನು, ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ‘ಸುಪ್ತ ಪದ್ಮಾಸನ’

ಬೆನ್ನು ಮತ್ತು ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ಯೋಗಾಸನವೆಂದರೆ, ‘ಸುಪ್ತ ಪದ್ಮಾಸನ’. ಇದಕ್ಕೆ ಮಲಗಿರುವ ಕಮಲದ ಭಂಗಿ ಎಂದು ಕರೆಯಲಾಗುತ್ತದೆ. ಪ್ರಯೋಜನಗಳು: ದೇಹದಲ್ಲಿ ಉತ್ತಮ ಹಿಗ್ಗಿಸುವಿಕೆ ಉಂಟಾಗುತ್ತದೆ. ತೊಡೆಗಳ ಮತ್ತು ಬೆನ್ನುಮೂಳೆಯ ಸ್ನಾಯುಗಳು ಬಲಗೊಳ್ಳುತ್ತವೆ. ಕೆಳಬೆನ್ನು ಬಲಗೊಂಡು, ಸೊಂಟ ನೋವು, ಬೆನ್ನು ನೋವು ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಗೆ ರಕ್ತ ಸಂಚಾರ ಚೆನ್ನಾಗಿ ನಡೆದು ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಹೊಟ್ಟೆಯ ಗ್ಯಾಸ್​, ಗ್ಯಾಸ್ಟ್ರಿಕ್ ಸಮಸ್ಯೆಗಳು ನಿಯಂತ್ರಣವಾಗುತ್ತವೆ. ಹೊಟ್ಟೆಗೆ ಸಂಬಂಧಪಟ್ಟ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳ ನಿವಾರಣೆಯಲ್ಲಿ ಸಹಕಾರಿ. ಎದೆಯು ವಿಸ್ತಾರಗೊಳ್ಳುತ್ತದೆ. ಇದನ್ನೂ … Continue reading ಬೆನ್ನು, ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ‘ಸುಪ್ತ ಪದ್ಮಾಸನ’