More

    ಬೆನ್ನು, ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ‘ಸುಪ್ತ ಪದ್ಮಾಸನ’

    ಬೆನ್ನು ಮತ್ತು ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ಯೋಗಾಸನವೆಂದರೆ, ‘ಸುಪ್ತ ಪದ್ಮಾಸನ’. ಇದಕ್ಕೆ ಮಲಗಿರುವ ಕಮಲದ ಭಂಗಿ ಎಂದು ಕರೆಯಲಾಗುತ್ತದೆ.

    ಪ್ರಯೋಜನಗಳು: ದೇಹದಲ್ಲಿ ಉತ್ತಮ ಹಿಗ್ಗಿಸುವಿಕೆ ಉಂಟಾಗುತ್ತದೆ. ತೊಡೆಗಳ ಮತ್ತು ಬೆನ್ನುಮೂಳೆಯ ಸ್ನಾಯುಗಳು ಬಲಗೊಳ್ಳುತ್ತವೆ. ಕೆಳಬೆನ್ನು ಬಲಗೊಂಡು, ಸೊಂಟ ನೋವು, ಬೆನ್ನು ನೋವು ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಗೆ ರಕ್ತ ಸಂಚಾರ ಚೆನ್ನಾಗಿ ನಡೆದು ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಹೊಟ್ಟೆಯ ಗ್ಯಾಸ್​, ಗ್ಯಾಸ್ಟ್ರಿಕ್ ಸಮಸ್ಯೆಗಳು ನಿಯಂತ್ರಣವಾಗುತ್ತವೆ. ಹೊಟ್ಟೆಗೆ ಸಂಬಂಧಪಟ್ಟ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳ ನಿವಾರಣೆಯಲ್ಲಿ ಸಹಕಾರಿ. ಎದೆಯು ವಿಸ್ತಾರಗೊಳ್ಳುತ್ತದೆ.

    ಇದನ್ನೂ ಓದಿ: ಪ್ಯಾರಾಕ್ಲೈಂಬಿಂಗ್‌ನಲ್ಲಿ ಕಂಚು ಗೆದ್ದ ಸುನೀತಾ

    ಮಾಡುವ ವಿಧಾನ: ಜಮಖಾನದ ಮೇಲೆ ಪದ್ಮಾಸನ ಹಾಕಿಕೊಂಡು, ಮೊಣಕೈಗಳ ಸಹಾಯದಿಂದ ಹಿಂದಕ್ಕೆ ಬೆನ್ನ ಮೇಲೆ ಮಲಗಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಎರಡೂ ಕೈಗಳನ್ನೂ ಶಿರಸ್ಸಿನ ಹಿಂದಕ್ಕೆ ಚಾಚಬೇಕು. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ ವಿರಮಿಸಬೇಕು. ಆಮೇಲೆ ನಿಧಾನವಾಗಿ ಉಸಿರನ್ನು ತೆಗೆದುಕೊಂಡು ಮೊಣಕೈಗಳ ಸಹಾಯದಿಂದ ಮೇಲಕ್ಕೆ ಬರಬೇಕು. ನಂತರ ಕಾಲುಗಳನ್ನು ಬಿಡಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು.

    ಈ ಆಸನವನ್ನು ತುಂಬಾ ಜಾಗರೂಕತೆಯಿಂದ ಅಭ್ಯಾಸ ಮಾಡಬೇಕು. ತೀರಾ ಸೊಂಟ ನೋವು, ಮಂಡಿ ನೋವು ಇರುವವರು ಅಭ್ಯಾಸ ಮಾಡಬಾರದು.

    ಮಲಬದ್ಧತೆ ಮತ್ತು ಪೈಲ್ಸ್​ ನಿಯಂತ್ರಣಕ್ಕೆ ಸಹಕಾರಿ, ಈ ಸರಳ ಯೋಗಾಸನ!

    ಮುಸ್ಲಿಂ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಗೂಸಾ: ಇಬ್ಬರು ಪುಂಡರು ಪೊಲೀಸರ ವಶಕ್ಕೆ

    ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts