More

    ‘ಜಿಟಿ ವೇಗಿಗಳಿಗೆ ಶುಭಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಸ್ವಾತಂತ್ರ್ಯವಿದೆ’: ಹಾರ್ದಿಕ್​ಗೆ ಟಾಂಗ್ ಕೊಟ್ರಾ ಶ್ರೀಶಾಂತ್?

    ಮುಂಬೈ: ಐಪಿಎಲ್ 2024ರ ಆವೃತ್ತಿ ಪ್ರಾರಂಭಕ್ಕೂ ಮುನ್ನವೇ ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್​ ತಂಡವನ್ನು ಕೈಬಿಟ್ಟು ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡರು. ಕೇವಲ ಆಲ್​-ರೌಂಡರ್ ಆಗಿ ಕಣಕ್ಕಿಳಿಯದ ಹಾರ್ದಿಕ್​, ನಾಯಕನ ಸ್ಥಾನದಿಂದ ರೋಹಿತ್​ನ ಕೆಳಗಿಳಿಸಿ ನೂತನ ಕ್ಯಾಪ್ಟನ್ ಆಗಿ ಬಂದರು. ಈ ಬೆಳವಣಿಗೆ ಆದಾಗಿನಿಂದಲೂ ಕ್ರಿಕೆಟ್ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕೊನೆಯಿಲ್ಲದಂತೆ ಕಾಣುತ್ತಿದೆ.

    ಇದನ್ನೂ ಓದಿ: ಸಿಎಸ್​ಕೆ ವಿರುದ್ಧ ಸೋಲಿನ ಬೆನ್ನಲ್ಲೇ ಗುಜಾರತ್​ಗೆ ಶಾಕ್​; ನಾಯಕನಿಗೆ 12 ಲಕ್ಷ ರೂ. ದಂಡ

    ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮೊದಲ ಪಂದ್ಯವನ್ನೇ ಸೋತ ಮುಂಬೈ ಇಂಡಿಯನ್ಸ್​ ಮೊದಲ ಪಂದ್ಯದಲ್ಲೇ 6 ರನ್​ಗಳ ಸೋಲನ್ನು ಅನುಭವಿಸಿತು. ಪಾಂಡ್ಯ ನಾಯಕತ್ವ ಕುರಿತು ಹಲವು ಕ್ರಿಕೆಟಿಗರು, ಕ್ರಿಕೆಟ್ ಫ್ಯಾನ್ಸ್ ಒಂದಲ್ಲ ಒಂದು ರೀತಿ ಮಾತನಾಡುತ್ತಲೇ ಇದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಎಸ್​. ಶ್ರೀಶಾಂತ್ ಸಹ ತಮ್ಮದೊಂದು ಅಭಿಪ್ರಾಯವನ್ನು ಹೊರಹಾಕಿದ್ದಾರೆ.

    “​ಮುಂಬೈಗೆ ಹಾರ್ದಿಕ್​ ಹೋಗಿದ್ದು ಗುಜರಾತ್ ಟೈಟನ್ಸ್​ಗೆ ಒಳ್ಳೆಯದೇ ಆಗಿದೆ. ಕಾರಣ, ಜಿಟಿ ನೂತನ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಈಗ ಜಿಟಿ ಬೌಲರ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ಬೌಲರ್‌ಗಳಿಗೆ ಹೇಗೆ ಬೌಲ್ ಮಾಡಬೇಕೆಂದು ಹೇಳಲು ಹಾರ್ದಿಕ್ ಇಲ್ಲ. ಕೆಲವೊಮ್ಮೆ ನೀವು ಬೌಲರ್‌ಗೆ ಬೌಲಿಂಗ್ ಮಾಡಲು ಸ್ವಾತಂತ್ರ್ಯವನ್ನು ನೀಡಬೇಕಾಗುತ್ತದೆ. ಈ ಬಾರಿ ನಾಯಕ ಗಿಲ್ ಆದ್ದರಿಂದ ಬೋಲಿಂಗ್ ಕೋಚ್ ಆಶಿಶ್ ಆಶಿಶ್ ನೆಹ್ರಾ ವೇಗಿಗಳಿಗೆ ಬೌಲ್ ಮಾಡಲು ಹೆಚ್ಚಿನ ಮನ್ನಣೆ ನೀಡುವುದು ಖಚಿತ” ಎಂದರು.

    ಇದನ್ನೂ ಓದಿ: ವಿಧಾನಪರಿಷತ್​ ಸದಸ್ಯತ್ವಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ; ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಶಾಕ್

    ಸದ್ಯ ಶ್ರೀಶಾಂತ್ ಹೇಳಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿರುವ ಹಾರ್ದಿಕ್ ಮೇಲಿನ ಅಸಮಾಧಾನ ಮಾತ್ರ ಯಾಕೋ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೆ ಮುಂಬೈನ ಮೊದಲ ಪಂದ್ಯದಲ್ಲಿ ಆದ ಘಟನೆಗಳು ಕೂಡ ಪ್ರಮುಖ ಕಾರಣ ಎಂದೇ ಹೇಳಬಹುದು,(ಏಜೆನ್ಸೀಸ್).

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts