More

    ಈ ಸವಾಲು ಸ್ವೀಕರಿಸುವ ದಮ್ಮು, ತಾಕತ್ತು ನಿಮಗಿದ್ಯಾ? ಕೇಂದ್ರ ಸಚಿವರ ವಿರುದ್ಧ ಸಿಎಂ ಕಿಡಿ

    ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ, ತೆರಿಗೆ ಸಂಗ್ರಹಿಸುವ ಕೇಂದ್ರದ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಲ್ಹಾದ್ ಜೋಶಿಗೆ ಕೆಲವು ವಿಚಾರಗಳನ್ನು ಮುಂದಿಟ್ಟು ನೇರ ಸವಾಲ್​ವೊಂದನ್ನು ಎಸಗಿದ್ದಾರೆ.

    ಇದನ್ನೂ ಓದಿ: ಹೂಡಿಕೆದಾರರಿಗೆ ಸುವರ್ಣಾವಕಾಶ: ಟಾಟಾ ಗ್ರೂಪ್​ನಿಂದ ಬರಲಿವೆ 8 ಕಂಪನಿಗಳ ಐಪಿಒ

    “ಪ್ರತಿ ವರ್ಷ ಕನ್ನಡಿಗರ ಬೆವರಗಳಿಕೆಯ 4.30 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಮಗೆ ವಾಪಾಸು ಕೊಟ್ಟಿರುವುದು ಕೇವಲ 50,257 ಕೋಟಿ ರೂಪಾಯಿ. ಅಂದರೆ ನಾವು 100 ರೂ. ತೆರಿಗೆ ಪಾವತಿ ಮಾಡಿದ್ರೆ, ನಮಗೆ 12ರಿಂದ 13 ರೂಪಾಯಿ ಮರಳಿ ಬರುತ್ತಿದೆ. ಕರ್ನಾಟಕಕ್ಕೆ ಜಿಎಸ್‌ಟಿಯಲ್ಲಿ, ವಿಶೇಷ ಅನುದಾನದಲ್ಲಿ, ಬರ ಪರಿಹಾರದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಯ ಅನುದಾನದಲ್ಲಿ, ಗೃಹನಿರ್ಮಾಣ ಯೋಜನೆಯಲ್ಲಿ, ಅನ್ನಭಾಗ್ಯದ ಅಕ್ಕಿಯಲ್ಲಿ ಹೀಗೆ ಸಾಲು ಸಾಲು ಅನ್ಯಾಯವಾಗಿದೆ” ಎಂದರು.

    “ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ದನಿ ಎತ್ತಬೇಕಾಗಿದೆ. ಇದು ಕನ್ನಡಿಗರಾದ ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯೂ ಹೌದು. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪ್ರಲ್ಹಾದ್​ ಜೋಶಿ ಅವರೇ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದು ಹಾರಿಕೆ ಉತ್ತರ ನೀಡಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಬಿಡಿ, ನಾನು ಹೇಳಿದ ಇಷ್ಟೂ ವಿಚಾರಗಳಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ನಿಮ್ಮ ಸರ್ಕಾರ ಮಾಡಿದ್ದರೆ ದಾಖಲೆಗಳನ್ನಿಟ್ಟು ಮಾತನಾಡಿ. ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?” ಎಂದು ನೇರ ಸವಾಲು ಎಸಗಿದ್ದಾರೆ.

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts