More

    ಆರ್​ಸಿಬಿ ಸೋತಿದ್ದು ನನಗೆ… ಟೀಕಾ ಪ್ರಹಾರದ ನಡುವೆ ಆಸ್ಟ್ರೇಲಿಯಾದ ಮಾಜಿ ಆಟಗಾರನ ಹೇಳಿಕೆ ವೈರಲ್

    ನವದೆಹಲಿ: ಕಳೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸೋತ ಬೆನ್ನಲ್ಲೇ ತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ಕಿಡಿಗೇಡಿಗಳು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಅಪಹಾಸ್ಯ, ಟೀಕೆಗಳನ್ನು ವ್ಯಕ್ತಪಡಿಸಿದರು. ಸತತ 16 ಸೀಸನ್​ಗಳಿಂದಲೂ ಐಪಿಎಲ್ ಟ್ರೋಫಿ ಗೆಲ್ಲದ ಆರ್​ಸಿಬಿ, ಈ ಬಾರಿ ನೀಡಿದ ಅತ್ಯದ್ಭುತ ಪ್ರದರ್ಶನಕ್ಕಾದರೂ ಕಪ್ ಗೆಲ್ಲೋದು ಖಚಿತ ಎಂದೇ ಎಲ್ಲರು ನಿರೀಕ್ಷಿಸಿದ್ದರು. ಆದ್ರೆ, ಲೆಕ್ಕಾಚಾರಗಳು ತಲೆಕೆಳಗಾದವು.

    ಇದನ್ನೂ ಓದಿ: ಯತೀಂದ್ರಗೆ ಎಂಎಲ್​​ಸಿ ಟಿಕೆಟ್;​​ ಕ್ಲ್ಯಾರಿಟ ಕೊಟ್ಟ ಸಿದ್ದರಾಮಯ್ಯ

    ನಾಕೌಟ್ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಹೀನಾಯವಾಗಿ ಮಣಿಸಿದ ಆರ್​ಸಿಬಿ, ಅಲ್ಲಿಂದ ನೇರ ಪ್ಲೇಆಫ್ ಪ್ರವೇಶ ಪಡೆಯಿತು. ಇದರಿಂದ ತೀವ್ರ ಕಂಗೆಟ್ಟಿದ್ದ ಸಿಎಸ್​ಕೆ ತಂಡದ ಕೆಲವು ಅಭಿಮಾನಿಗಳು, ವಿರಾಟ್​ ಕೊಹ್ಲಿ ಮತ್ತು ಟೀಮ್​ನ ಸಹ ಆಟಗಾರರನ್ನು ವ್ಯಾಪಕವಾಗಿ ಟೀಕಿಸಿ, ತಮ್ಮ ಅಸಭ್ಯ ವರ್ತನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿದರು. ಟೀಕೆ, ಟಿಪ್ಪಣಿಗಳ ಮಧ್ಯೆಯೂ ವಿರಾಟ್​ ಕೊಹ್ಲಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಯುತ್ತಿದ್ದು, ಆರ್​ಸಿಬಿ ತಂಡಕ್ಕೆ ಅಭೂತಪೂರ್ವ ಬೆಂಬಲ ಲಭಿಸಿದೆ.

    ಸದ್ಯ ಐಪಿಎಲ್​ನ ಫೈನಲ್​ಗೆ ನೇರ ಪ್ರವೇಶ ಪಡೆದಿರುವ ಕೆಕೆಆರ್​ ಒಂದೆಡೆಯಾದರೆ, ಕ್ವಾಲಿಫೈರ್​ 2ನಲ್ಲಿ ಸೆಣಸಾಡಲು ರಾಜಸ್ಥಾನ ರಾಯಲ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮತ್ತೊಂದೆಡೆ. ಇನ್ನು ಐಪಿಎಲ್​ ಬಗ್ಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ, “ಈ ಸೀಸನ್​ನ ಆರಂಭದಿಂದಲೂ ನಾನು ಆರ್​ಸಿಬಿ ತಂಡದ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದ್ದೆ. ಆದರೆ, ಕಳೆದ ಎಲಿಮಿನೇಟರ್ ಪಂದ್ಯದಲ್ಲಿ ಅವರು ರಾಯಲ್ಸ್​ ವಿರುದ್ಧ ಸೋತಾಗ ಭಾರೀ ಬೇಸರವಾಯ್ತು” ಎಂದಿದ್ದಾರೆ.

    ಇದನ್ನೂ ಓದಿ: ಸತೀಶ್ ರೈತ ಮೋರ್ಚಾ ತಾಲೂಕು ಅಧ್ಯಕ್ಷ: ನಗರದಲ್ಲಿ ಪದಗ್ರಹಣ ಸಮಾರಂಭ

    “ಪ್ರಸ್ತುತ ಪ್ರದರ್ಶನವನ್ನು ಆಧರಿಸಿ ಹೇಳುವುದಾದರೆ, ಕೆಕೆಆರ್ ಪ್ರಬಲ ಸ್ಪರ್ಧಿಯಾಗಿದೆ. ನನ್ನ ಪ್ರಕಾರ, ಕೆಕೆಆರ್ ಅಗ್ರ ಸ್ಥಾನಕ್ಕೆ ಹೆಚ್ಚು ಅರ್ಹವಾದ ಟೀಮ್. ಏಕೆಂದರೆ, ತಮ್ಮನ್ನು ಸೋಲಿಸಲು ಅತ್ಯಂತ ಕಠಿಣ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ” ಎಂದರು.

    “ಸತತ ಯಶಸ್ವಿ ಪ್ರದರ್ಶನ ನೀಡಿರುವ ಕೆಕೆಆರ್​ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಈ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಎಲ್ಲರಿಗೂ ಅರ್ಥೈಸಿದ್ದಾರೆ. ಟಾಪ್ ಕ್ಲಾಸ್ ಪ್ರದರ್ಶನ ನೀಡುತ್ತಾ ಬಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್​, ಐಪಿಎಲ್​ 17ನೇ ಸೀಸನ್​ ಗೆದ್ದು, ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಬಹುದು” ಎಂದು ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts