More

    ಯೂಟ್ಯೂಬ್​ ಹಣದಲ್ಲಿ ದುಬಾರಿ ಆಡಿ ಕಾರು ಖರೀದಿಸಿದ ಯುವಕ: 1 ತಿಂಗಳ ಸಂಪಾದನೆ ಕೇಳಿದ್ರೆ ಬೆರಗಾಗ್ತೀರಾ!

    ಪಟನಾ: ಯೂಟ್ಯೂಬ್ (YouTube)​ ಅನೇಕರ ಜೀವನವನ್ನೇ ಬದಲಾಯಿಸಿದೆ. ಯೂಟ್ಯೂಬ್​ ವಿಡಿಯೋಗಳನ್ನು ಮಾಡುವ ಜನರು ಉದ್ಯೋಗಿಗಳಿಗಿಂತ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೆ, ಖ್ಯಾತಿಯನ್ನು ತಂದುಕೊಡುತ್ತಿದೆ. ಬಿಹಾರ ಮೂಲದ ಯುವಕನೊಬ್ಬ ಯೂಟ್ಯೂಬ್​ ಸಂಪಾದನೆಯಲ್ಲಿ ದುಬಾರಿ ಆಡಿ ಕಾರು ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

    ಕೊಟ್ಟಿಗೆಯ ಪಕ್ಕದಲ್ಲಿ ಆಡಿ ಕಾರನ್ನು ಪಾರ್ಕ್​ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಆ ಯುವಕನ ಹೆಸರು ಹರ್ಷ ರಜಪೂತ್​ (27). ಬಿಹಾರದ ಔರಂಗಬಾದ್​ನ ಜಸೋಯಾ ಗ್ರಾಮದ ನಿವಾಸಿ. ಮೂಲಗಳ ಪ್ರಕಾರ ಯೂಟ್ಯೂಬ್​ ವಿಡಿಯೋಗಳಿಂದ 8 ಲಕ್ಷ ರೂ. ಸಂಪಾದನೆ ಮಾಡುತ್ತಾನಂತೆ.

    ಕರೊನಾ ಲಾಕ್‌ಡೌನ್ ಸಮಯದಲ್ಲಿ ಕಾಮಿಡಿ ವಿಡಿಯೊಗಳನ್ನು ಮಾಡಲು ಮತ್ತು ಅವುಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಅವರ ಕಾಮಿಡಿ ಟೈಮಿಂಗ್ ಅನೇಕ ಜನರನ್ನು ಆಕರ್ಷಿಸಿತು. ಕೆಲವು ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್​ ಆಗಿವೆ. 10 ನಿಮಿಷದ ಕಾಮಿಡಿ ವಿಡಿಯೋ 20 ಮಿಲಿಯನ್ ವೀಕ್ಷಣೆ ಪಡೆದಿರುವುದು ಗಮನಾರ್ಹ. ಯೂಟ್ಯೂಬ್​ ಚಾನಲ್‌ ಗಳಿಕೆಯೊಂದಿಗೆ ಸುಮಾರು 50 ಲಕ್ಷ ರೂ. ಮೌಲ್ಯದ ಆಡಿ ಕಾರನ್ನು ಖರೀದಿಸಿದ್ದಾರೆ.

    ವಿವಿಧ ವಿಷಯಗಳ ಕುರಿತು ಕಾಮಿಡಿ ವಿಡಿಯೋಗಳನ್ನು ಮಾಡುವುದು ಹರ್ಷ ರಜಪೂತ್ ಅವರ ವಿಶೇಷತೆಯಾಗಿದೆ. ಪ್ರಸ್ತುತ, ಹರ್ಷ ರಜಪೂತ್ ಅವರ ಯೂಟ್ಯೂಬ್ ಚಾನೆಲ್ 33 ಲಕ್ಷ ಚಂದಾದಾರರನ್ನು ಹೊಂದಿದೆ. ಜೂನ್ 2022 ರಿಂದ ಅಕ್ಟೋಬರ್ 2022ರವರೆಗೆ ಹರ್ಷ ಸರಾಸರಿ 4.5 ಲಕ್ಷ ರೂ. ಗಳಿಸಿದ್ದಾರೆ.

    ಹರ್ಷ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬಿಹಾರ ಪೊಲೀಸರಿಗೆ ಹೋಮ್ ಗಾರ್ಡ್ ಆಗಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ದೆಹಲಿಯಲ್ಲಿ ಥಿಯೇಟರ್ ಕೋರ್ಸ್ ಮಾಡಿದ್ದ ಹರ್ಷ, ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಅವಕಾಶಕ್ಕಾಗಿ ಮುಂಬೈಗೆ ಹೋಗಿದ್ದರು. ಆದರೆ, ಕೋವಿಡ್ ಲಾಕ್‌ಡೌನ್ ಅವರ ಭರವಸೆಯನ್ನು ಹಾಳುಮಾಡಿತು. ಆದರೆ, ಆ ಸಮಯ ಅವರಿಗೆ ಹೊಸ ಬದುಕನ್ನೇ ನೀಡಿತು. ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ತಮ್ಮದೇ ಆದ ಹಾಸ್ಯದೊಂದಿಗೆ ವಿಡಿಯೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು.

    ಒಂದು ದಿನ ಬ್ಯಾಂಕ್ ಸಾಲ ಮರುಪಾವತಿಯಾಗದ ಕಾರಣ ಹರ್ಷನ ಮನೆಯನ್ನು ಹರಾಜು ಹಾಕಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಹರ್ಷ ಕೂಡ ತನ್ನ ಯೂಟ್ಯೂಬ್ ಗಳಿಕೆಯ ಮೂಲಕ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಂದು ವೇಳೆ ನಟನಾಗಿ ಅವಕಾಶಗಳು ಬಂದಿದ್ದರೂ ಇಷ್ಟು ಕಡಿಮೆ ಅವಧಿಯಲ್ಲಿ ಈ ಮಟ್ಟದಲ್ಲಿ ಹಣ ಗಳಿಸುತ್ತಿರಲಿಲ್ಲ ಎಂದೆನಿಸುತ್ತದೆ. ಇದೀಗ ಹರ್ಷ ಎಲ್ಲರಿಗೂ ಮಾದರಿಯಾಗಿದ್ದಾರೆ. (ಏಜೆನ್ಸೀಸ್​)

    ಜಸಿಂಡಾ ಅಡೆರ್ನ್​ ರಾಜೀನಾಮೆ: ನ್ಯೂಜಿಲೆಂಡ್​ನ​ ನೂತನ ಪ್ರಧಾನಿಯಾಗಲಿದ್ದಾರೆ ಕ್ರಿಸ್​ ಹಿಪ್ಕಿನ್ಸ್​

    ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣಿಸಿದ ಬ್ರಿಟನ್​ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು!

    ಸದ್ದು ಮಾಡದ ಲೋಕಾಯುಕ್ತ!; 6 ತಿಂಗಳಾದರೂ ಭ್ರಷ್ಟ ತಿಮಿಂಗಿಲಗಳ ಬೇಟೆಯಾಡಲು ಹಿಂದೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts