ಜಸಿಂಡಾ ಅಡೆರ್ನ್​ ರಾಜೀನಾಮೆ: ನ್ಯೂಜಿಲೆಂಡ್​ನ​ ನೂತನ ಪ್ರಧಾನಿಯಾಗಲಿದ್ದಾರೆ ಕ್ರಿಸ್​ ಹಿಪ್ಕಿನ್ಸ್​

ವೆಲ್ಲಿಂಗ್ಟನ್​: ಜಸಿಂಡಾ ಅಡೆರ್ನ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲೆಂಡ್​ ಪ್ರಧಾನಿ ಸ್ಥಾನಕ್ಕೆ ಪೊಲೀಸ್​ ಮತ್ತು ಶಿಕ್ಷಣ ಸಚಿವ ಕ್ರಿಸ್​ ಹಿಪ್ಕಿನ್ಸ್​ ಅವರು ಆಯ್ಕೆಯಾಗಲಿದ್ದಾರೆ. ಸಹ ಸಂಸದರಿಂದ ಏಕೈಕ ನಾಮನಿರ್ದೇಶನವನ್ನು ಸ್ವೀಕರಿಸಿದ ನಂತರ ಆಡಳಿತಾರೂಢ ಲೇಬರ್​ ಪಾರ್ಟಿ ಶನಿವಾರ ತಿಳಿಸಿದೆ. 44 ವರ್ಷದ ಹಿರಿಯ ರಾಜಕಾರಣಿಯಾಗಿರುವ ಕ್ರಿಸ್​ ಹಿಪ್ಕಿನ್ಸ್​ ಅವರನ್ನು ಭಾನುವಾರ ನಡೆಯಲಿರುವ ಸಂಸತ್ತಿನ ಸಭೆಯಲ್ಲಿ ಲೇಬರ್​ ಪಕ್ಷದ ಸದಸ್ಯರೆಲ್ಲರು ಬೆಂಬಲಿಸಲಿದ್ದು, ನ್ಯೂಜಿಲೆಂಡ್​ನ 41ನೇ ಪ್ರಧಾನಿಯಾಗಿ ಕ್ರಿಸ್​ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕ್ರಿಸ್​ ಅವರು ಈ ಹಿಂದೆ ಕೋವಿಡ್​ … Continue reading ಜಸಿಂಡಾ ಅಡೆರ್ನ್​ ರಾಜೀನಾಮೆ: ನ್ಯೂಜಿಲೆಂಡ್​ನ​ ನೂತನ ಪ್ರಧಾನಿಯಾಗಲಿದ್ದಾರೆ ಕ್ರಿಸ್​ ಹಿಪ್ಕಿನ್ಸ್​