More

    ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣಿಸಿದ ಬ್ರಿಟನ್​ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು!

    ಲಂಡನ್​: ಸೀಟ್​ ಬೆಲ್ಟ್​ (Seatbelt) ಧರಿಸದೇ ಕಾರಿನಲ್ಲಿ ಪ್ರಯಾಣ ಬೆಳೆಸುವ ಮೂಲಕ ಸಂಚಾರಿ ನಿಯಮ (Traffic violation) ಉಲ್ಲಂಘನೆ ಮಾಡಿದ ಬ್ರಿಟನ್​ ಪ್ರಧಾನಿ (Britain PM) ರಿಷಿ ಸುನಕ್ (Rishi Sunak)​ ಅವರಿಗೆ ಪೊಲೀಸರು ದಂಡ (Police Fine) ವಿಧಿಸಿದ್ದಾರೆ.

    ಸಾಮಾಜಿಕ ಜಾಲತಾಣಕ್ಕಾಗಿ ವಿಡಿಯೋ ಮಾಡುವಾಗ ಸೀಟ್​ ಬೆಲ್ಟ್ ಧರಿಸದೇ​ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ರಿಷಿ ಪ್ರಯಾಣ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಬ್ರಿಟನ್​ ಪೊಲೀಸರು ದಂಡವನ್ನು ವಿಧಿಸಿದ್ದು, ಇದರಿಂದ ರಿಷಿ ಅವರು ಮುಜುಗರ ಅನುಭವಿಸಿದ್ದಾರೆ.

    ಈ ಬಗ್ಗೆ ರಿಷಿ ಸುನಕ್​ ಪ್ರತಿಕ್ರಿಯೆ ನೀಡಿದ್ದು, ಇದೊಂದು ತಿಳುವಳಿಕೆಯ ಸಣ್ಣ ಪ್ರಮಾದ ಎಂದಿದ್ದಾರೆ. ಉತ್ತರ ಇಂಗ್ಲೆಂಡ್‌ನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಇದು ರಿಷಿ ಅವರು ಪಡೆದ ಎರಡನೇ ದಂಡವಾಗಿದೆ. ಕಳೆದ ವರ್ಷ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಮಂತ್ರಿ ಬೋರಿಸ್​ ಜಾನ್ಸನ್​ ಸೇರಿದಂತೆ ರಿಷಿ ಅವರಿಗೆ ದಂಡ ವಿಧಿಸಲಾಗಿತ್ತು.

    ನಿಜವಾಗಿಯೂ ತಪ್ಪಾಗಿದೆ ಎಂದು ಪ್ರಧಾನಿ ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ. ಅವರು ಖಂಡಿತವಾಗಿಯೂ ನಿಗದಿತ ದಂಡವನ್ನು ಅನುಸರಿಸುತ್ತಾರೆ ಎಂದು ಸುನಕ್‌ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಲಂಕಷೈರ್‌ನ ಉತ್ತರ ಇಂಗ್ಲಿಷ್ ಕೌಂಟಿಯ ಪೊಲೀಸರು ಲಂಡನ್‌ ಮೂಲದ 42 ವರ್ಷದ ವ್ಯಕ್ತಿಗೆ ದಂಡ ವಿಧಿಸಿರುವುದಾಗಿ ದೃಢಪಡಿಸಿದ್ದಾರೆ. (ಏಜೆನ್ಸೀಸ್​)

    ಸದ್ದು ಮಾಡದ ಲೋಕಾಯುಕ್ತ!; 6 ತಿಂಗಳಾದರೂ ಭ್ರಷ್ಟ ತಿಮಿಂಗಿಲಗಳ ಬೇಟೆಯಾಡಲು ಹಿಂದೇಟು

    ಸಿಂದಗಿ ಕ್ಷೇತ್ರದ ಘೋಷಿತ ಜೆಡಿಎಸ್​ ಅಭ್ಯರ್ಥಿ ಶಿವಾನಂದ ಪಾಟೀಲ್ ಹೃದಯಾಘಾತದಿಂದ ನಿಧನ: ಎಚ್​ಡಿಕೆ ಸಂತಾಪ ​

    ಅಧಿಕ ಬೆವರು ಹರಿಸಿದರಷ್ಟೇ ಅಧಿಕಾರ: ಬಿ.ಎಲ್.ಸಂತೋಷ್ ಸೂಚ್ಯ ಸಂದೇಶ; ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಸಮಾರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts