More

    ‘ಕೆಲವರು ಟೀಕಿಸುತ್ತಲೇ ಇರ್ತಾರೆ, ತಲೆ ಕೆಡಿಸಿಕೊಳ್ಳಬೇಡಿ’: ಪುತ್ರಿ, ಅಳಿಯಗೆ ಸುಧಾ ಮೂರ್ತಿ ಸಲಹೆ

    ನವದೆಹಲಿ: ಮಗಳು ಅಕ್ಷತಾ ಮೂರ್ತಿ ಮತ್ತು ಅವರ ಪತಿ, ಯುಕೆ ಪ್ರಧಾನಿ ರಿಷಿ ಸುನಕ್‌ಗೆ ಟೀಕೆಗಳ ಕುರಿತು ಸುಧಾ ಮೂರ್ತಿ ಅವರು ನೀಡಿದ್ದದಾರೆ. ಹಾಗೆ ಅವರು ನೀಡಿದ ಸಲಹೆ ಏನು ಎಂಬುದನ್ನು ಇಲ್ಲಿ ತಿಳಿಯಿರಿ.

    ಇದನ್ನೂ ಓದಿ: ಸಿಯೋಲ್‌ಗೆ ಪ್ರಚೋದನೆ ನೀಡಿದ ಕಿಮ್.. ಪೂರ್ವ ಕರಾವಳಿಯತ್ತ ಕ್ರೂಸ್ ಕ್ಷಿಪಣಿಗಳ ಉಡಾವಣೆ!

    ‘ಕೆಲವು ಜನ ಟೀಕಿಸುತ್ತಲೇ ಇರುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಕೆಲಸದಲ್ಲಿ ಪ್ರಾಮಾಣಿಕವಾಗಿರಬೇಕು. ರಾಷ್ಟ್ರ ಮತ್ತು ಜನರಿಗೆ ನಮ್ಮಿಂದ ಗರಿಷ್ಟ ಮಟ್ಟದಲ್ಲಿ ಯಾವರೀತಿಯಲ್ಲಿ ಸೇವೆ ಮಾಡಬಹುದು? ನಮ್ಮ ಬಳಿ ಬರುವ ಬಡವರಿಗೆ ಯಾವ ಸಹಾಯ ಮಾಡಬಹುದು ಎಂಬುದರತ್ತ ಚಿತ್ತವಿರಬೇಕು’ ಎಂದು ಅಳಿಯ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಹಾಗೂ ಪುತ್ರಿ ಅಕ್ಷತಾ ಮೂರ್ತಿ(ರಿಷಿ ಸುನಕ್)ಗೆ ಸಲಹೆ ನೀಡಿದ್ದಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಲೇಖಕಿ ಸುಧಾ ಮೂರ್ತಿ ತಿಳಿಸಿದ್ದಾರೆ.

    ಅಳಿಯ ಒಂದು ದೇಶದ ಪ್ರಧಾನಿಯಾದಾಗ ಒತ್ತಡ ಹೆಚ್ಚಾಗಿರುತ್ತದೆ. ಇಡೀ ದೇಶದ ಜನರ ಕಣ್ಣು ಅವರು ಮತ್ತು ಅವರು ಮಾಡುವ ಕೆಲಸದ ಮೇಲಿರುತ್ತದೆ. ಅವರು ಪ್ರಧಾನಿಯಾದಾಗ ಕೆಲಸದಲ್ಲಿ ಪ್ರಾಮಾಣಿಕವಾಗಿರಲು ಮತ್ತು ಅವರ ರಾಷ್ಟ್ರಕ್ಕೆ ಸಹಾಯ ಮಾಡಲು ಸಲಹೆ ನೀಡಿದ್ದೆ. ಕೆಲವು ಜನರು ಟೀಕಿಸುವುದನ್ನೇ ವೃತ್ತಿಮಾಡಿಕೊಂಡಿರುತ್ತಾರೆ. ಅಂತಹವರು ಹೇಳುವುದನ್ನು ನಿರ್ಲಕ್ಷಿಸುವಂತೆಯೂ ತಿಳಿಸಿದ್ದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    “ನಾನು ಯಾವಾಗಲೂ ಅವರಿಗೆ [ಅಕ್ಷತಾ ಮತ್ತು ರಿಷಿ] ಹೇಳುತ್ತೇನೆ, ಜನರು ನಿಮ್ಮ ಸ್ಥಾನದ ಕಾರಣದಿಂದ ಮಾತನಾಡುತ್ತಾರೆ. ನೀವು ಪ್ರಾಮಾಣಿಕರಾಗಿದ್ದರೆ, ನೀವು ನಿಮ್ಮ ದೇಶಕ್ಕೆ ಸಹಾಯ ಮಾಡುತ್ತಿದ್ದರೆ, ನಿಮ್ಮ ಕೆಲಸ ಶ್ರದ್ಧೆಯಿಂದ ಮಾಡುತ್ತಿದ್ದರೆ ಯಾರಿಗೂ ಅಂಜುವ ಮತ್ತು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂದು ಜನರು ಯಾವಾಗಲೂ ಮಾತನಾಡುತ್ತಾರೆ. ‘ಕುಚ್ ತೋಹ್ ಲಾಗ್ ಕಹೆಂಗೆ, ಲೋಗೋನ್ ಕಾ ಕಾಮ್ ಹೈ ಕೆಹನಾ’. ಹಾಗಾಗಿ ಅದನ್ನು ನಿರ್ಲಕ್ಷಿಸಿ” ಎಂದು ಈ ಹಿಂದೆ ಸಲಹೆ ನೀಡಿದ್ದೆ ಎಂದು ತಿಳಿಸಿದ್ದಾರೆ.

    “ನೀವು ಮಾಡುವ ಕೆಲಸವು ನೈತಿಕ ಮತ್ತು ಕಾನೂನುಬದ್ಧವಾಗಿರುವವರೆಗೆ ಅದನ್ನು ಮಾಡಿ. ನಿಮಗೆ ಸಾಕ್ಷಿಯಾಗಿ ಯಾರೂ ಅಗತ್ಯವಿಲ್ಲ. ದೇವರೇ ಸಾಕ್ಷಿ. ನಿಮ್ಮ ಕೆಲಸವನ್ನು ಮಾಡಿ, ಅವರು(ವಿರೋಧಿಗಳು) ಮಾತನಾಡಲು ಬಿಡಿ. ಇದು ಸ್ವಲ್ಪ ಸಮಯದವರೆಗೆ ನಿಮ್ಮ ಮೇಲೆ ಪರಿಣಾಮ ಬೀರಬಹುದು, ಆದರೆ ದೀರ್ಘಾವಧಿಯಲ್ಲಿ ನಿಮ್ಮ ಕೆಲಸವೇನೆಂದು ಟೀಕಿಸುವವರು ಮತ್ತು ಇದನ್ನು ಕೇಳಿದ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಮನವರಿಕೆ ಮಾಡಿದ್ದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

    ಕ್ಯಾಟಮರನ್ ವೆಂಚರ್ಸ್ ಅನ್ನು ಮುಚ್ಚುವ ಬಗ್ಗೆ ಯುಕೆಯಲ್ಲಿ ವಿರೋಧ ಪಕ್ಷಗಳಿಂದ ರಿಷಿ ಸುನಕ್ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮೂರ್ತಿ ಅವರ ಹೇಳಿಕೆ ಬಂದಿದೆ. ಕ್ಯಾಟಮಾರನ್ ವೆಂಚರ್ಸ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಕೆಲವು ಬೆಂಬಲದೊಂದಿಗೆ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರು ಸಹ-ಸ್ಥಾಪಿತವಾದ ಕಂಪನಿಯಾಗಿದೆ. ಕ್ಯಾಟಮಾರನ್ ವೆಂಚರ್ಸ್‌ನಿಂದ ಬೆಂಬಲಿತವಾದ ಅನೇಕ ಸ್ಟಾರ್ಟ್‌ಅಪ್‌ಗಳು ಸರ್ಕಾರದ ಬೆಂಬಲಿತ ಕಾರ್ಯಕ್ರಮಗಳ ಮೂಲಕ ಹಣಕಾಸಿನ ನೆರವನ್ನು ಪಡೆದಿವೆ ಎಂದು ಟೀಕೆಗಳು ವ್ಯಕ್ತವಾದ ನಂತರ ಕಂಪನಿಯ ಕಾರ್ಯಾಚರಣೆ ಪರಿಶೀಲನೆಗೆ ಒಳಪಡುವಂತೆ ಮಾಡಿದೆ.

    ಶಿಷ್ಯನನ್ನು ಬೂಟ್​ನಿಂದ ಹೊಡೆದ ಸಿಂಗರ್​..ಬಳಿಕ ನಡೆದಿದ್ದೇನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts