More

    ಅಲ್ಲಿ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ: ವಿವಾದಕ್ಕೆ ಎಡೆಮಾಡಿಕೊಟ್ಟ ಬಾಂಬೆ ಹೈಕೋರ್ಟ್​ ತೀರ್ಪು!

    ಮುಂಬೈ: ಹುಡುಗಿಯೊಬ್ಬಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್​ ನೀಡಿರುವ ತೀರ್ಪು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸ್ಕಿನ್​ ಟು ಸ್ಕಿನ್​ (ಚರ್ಮ ಚರ್ಮಕ್ಕೂ) ಸಂಪರ್ಕವಿಲ್ಲದೆ ಸ್ಪರ್ಶಿಸುವುದನ್ನು ಲೈಂಗಿಕ ಕಿರುಕುಳ ಎಂದು ಹೇಳಲಾಗದು ಮತ್ತು ಪೊಕ್ಸೊ ಅಡಿಯಲ್ಲಿ ಅದನ್ನು ವ್ಯಾಖ್ಯಾನಿಸಲಾಗದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

    ನ್ಯಾಯಮೂರ್ತಿ ಪುಷ್ಪಾ ಗನೆದಿವಾಲಾ ನೇತೃತ್ವದ ಏಕಸದಸ್ಯ ಪೀಠ ಈ ತೀರ್ಪನ್ನು ಪ್ರಕಟಿಸಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ ನೀಡಿದ್ದ ತೀರ್ಪನ್ನು ಇದೀಗ ಹೈಕೋರ್ಟ್​ ಎತ್ತಿಹಿಡಿದಿದೆ. ಲೈಂಗಿಕ ಉದ್ದೇಶವೆಂದರೆ ಸ್ಕಿನ್​ ಟು ಸ್ಕಿನ್​ ಅಥವಾ ದೈಹಿಕ ಸಂಪರ್ಕವಿರಬೇಕು. ಅದನ್ನು ಬಿಟ್ಟು ನೂಕು ನುಗ್ಗಲಲ್ಲಿ ಕೇವಲ ಸ್ಪರ್ಶಿಸುವುದನ್ನು ಲೈಂಗಿಕ ಕಿರುಕುಳ ಎಂದು ಹೇಳಲಾಗದು ಮತ್ತು ಪೊಕ್ಸೊ ಅಡಿಯಲ್ಲಿ ವ್ಯಾಖ್ಯಾನಿಸಲಾಗದು ಎಂದು ನಾಗ್ಪುರ ಪೀಠ ತೀರ್ಪು ನೀಡಿತ್ತು.

    ಇದನ್ನೂ ಓದಿರಿ: ಸ್ನೇಹಿತರಿಬ್ಬರ ಮಧ್ಯೆ ಎಂಟ್ರಿ ಕೊಟ್ಟ ಯುವತಿ: ಮುಂದೆ ನಡೆದಿದ್ದು ಟಿಕ್​ಟಾಕ್​​ ಸ್ಟಾರ್​ ದುರಂತ ಅಂತ್ಯ!

    ಆರೋಪಿಯು ಅಪ್ರಾಪ್ತೆಯ ಬಟ್ಟೆಯನ್ನು ಬಿಚ್ಚಿ ಅಥವಾ ಬಟ್ಟೆಯೊಳಗೆ ಕೈ ತೂರಿಸುವುದನ್ನು ಹೊರತುಪಡಿಸಿ ಚರ್ಮ ಸಂಪರ್ಕವಿಲ್ಲದೆ ಸುಮ್ಮನೆ ಎದೆಯನ್ನು ಸ್ಪರ್ಶಿಸಿದರೆ, ಅದನ್ನು ಲೈಂಗಿಕ ಕಿರುಕುಳ ಎಂದು ಹೇಳಲಾಗದು ಎಂದು ತೀರ್ಪು ಪ್ರಕಟಿಸಿತ್ತು. ನಾಗ್ಪುರ ತೀರ್ಪನ್ನು ಬಾಂಬೆ ಹೈಕೋರ್ಟ್​ ಎತ್ತಿಹಿಡಿದಿದ್ದು, ಪೊಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಅಪರಾಧಕ್ಕೆ ನೀಡುವ ಶಿಕ್ಷೆಯ ಕಠಿಣ ಸ್ವರೂಪವನ್ನು ಪರಿಗಣಿಸಿ, “ಕಠಿಣ ಪುರಾವೆ ಮತ್ತು ಗಂಭೀರ ಆರೋಪಗಳು ಅಗತ್ಯ” ಎಂದು ಹೇಳಿದೆ.

    ಪೊಕ್ಸೊ ಅಡಿ ಆರೋಪ ಸಾಬೀತಾದರೆ, ಅಪರಾಧಿಗೆ ಪೊಕ್ಸೊ ಕಾಯ್ದೆ ಅಡಿಯಲ್ಲಿ ಕನಿಷ್ಠ ಮೂರು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ, ಆರೋಪಿಯನ್ನು ಪೊಕ್ಸೊ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಖುಲಾಸೆಗೊಳಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ನಮ್ರತೆಯನ್ನು ಮೀರಿಸುವುದು) ಮತ್ತು 342 (ತಪ್ಪಾಗಿ ಬಂಧನ) ಅಡಿಯಲ್ಲಿ ಒಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಇದನ್ನೂ ಓದಿರಿ: ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!

    ಮುಂಬೈ ಮೂಲದ ವ್ಯಕ್ತಿಯೊಬ್ಬ ಇತ್ತೀಚೆಗೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಆರೋಪಿ 12 ವರ್ಷದ ಅಪ್ರಾಪ್ತೆಯ ಎದೆಯನ್ನು ಸ್ಪರ್ಶಿಸಿದಲ್ಲದೆ, ಆಕೆಯ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆತನಿಗೆ ಪೊಕ್ಸೊ ಕಾಯ್ದೆ ಅಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದರು. ಶನಿವಾರ ನಡೆದ ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್​ ಈ ಮೇಲಿನ ತೀರ್ಪನ್ನು ನೀಡಿದೆ.

    ಘಟನೆಯ ವಿವರಣೆಗೆ ಬರುವುದಾದರೆ, 2016ರಲ್ಲಿ ಆರೋಪಿಯೊಬ್ಬ ಸೀಬೆ ಹಣ್ಣು ಕೊಡುವ ನೆಪದಲ್ಲಿ ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ಆಕೆಯ ಎದೆಯನ್ನು ಒತ್ತುವುದು ಮತ್ತು ಸಲ್ವಾರ್​ ಕಳುಚುವ ಪ್ರಯತ್ನ ಮಾಡುತ್ತಿದ್ದ. ಇದೇ ಸಮಯದಲ್ಲಿ ಅಪ್ರಾಪ್ತೆಯ ತಾಯಿ ಸ್ಥಳಕ್ಕೆ ಧಾವಿಸಿ ಮಗಳನ್ನು ರಕ್ಷಿಸಿದ್ದಳು. ತಕ್ಷಣ ಎಫ್​ಐಆರ್​ ದಾಖಲಿಸಲಾಗಿತ್ತು. ಐವರು ಸಾಕ್ಷಿಗಳು ಮತ್ತು ಇಬ್ಬರು ಪೊಲೀಸರು ಹೇಳಿಕೆ ಮತ್ತು ಸಾಕ್ಷ್ಯಾಧಾರ ಪರಿಗಣಿಸಿ ಪೊಕ್ಸೊ ಕಾಯ್ದೆ ಬಿಟ್ಟು ಇತರೆ ಸೆಕ್ಸನ್​ ಅಡಿಯಲ್ಲಿ ಶಿಕ್ಷೆ ವಿಧಿಸಿದೆ.

    ಇದನ್ನೂ ಓದಿರಿ: ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?

    ಹೈಕೋರ್ಟ್​ ತೀರ್ಪಿನ ನಟಿ ತಾಪ್ಸಿ ಪನ್ನು ಮತ್ತು ಗಾಯಕಿ ಚಿನ್ಮಯಿ ಶ್ರೀಪಾದ್​ ಬೇಸರ ವ್ಯಕ್ತಪಡಿಸಿದ್ದು, ತೀರ್ಪನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ಕಿರುಕುಳ ಕೊಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ತಿನ್ನುತ್ತಲೇ ಗಂಟೆಗೆ 1700 ರೂ. ಸಂಪಾದಿಸಿ: ಕೆಲಸಕ್ಕೆ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ!

    VIDEO| ಶ್ರುತಿ ಹಾಸನ್​ ಜತೆ ಲಿಪ್‌ಲಾಕ್ ದೃಶ್ಯದಲ್ಲಿ ಗಾಯಕ ಸಂಜಿತ್ ಹೆಗ್ಡೆ!

    VIDEO| ಇದುವರೆಗೂ ನೋಡಿರದ ವಿಚಿತ್ರ ಔಟ್ ಇದು: ಅತ್ತಿತ್ತಲು ಉರುಳಿತು ವಿಕೆಟ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts