More

    ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಿಶೇಷ ತರಗತಿ ನೆಪದಲ್ಲಿ ಕೃತ್ಯ

    ಕಿನ್ನಿಗೋಳಿ: ಕಲ್ಲಮುಂಡ್ಕೂರು ಪ್ರೌಢಶಾಲೆಯ ಶಿಕ್ಷಕ ಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈ ಹೈಸ್ಕೂಲ್‌ನಲ್ಲಿ 73 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಬೆಳ್ತಂಗಡಿ ಮೂಲದ ಶಿಕ್ಷಕ ಗುರುವ ಎಂಬುವವರು ಕಳೆದ ತಿಂಗಳು ವಿಶೇಷ ತರಗತಿ ನಡೆಸುವ ಕಾರಣ ನೀಡಿ 10ನೇ ತರಗತಿಯ 26 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿದ್ದರು. ಶಾಲೆಯ ಜಗುಲಿಯಲ್ಲಿ ಕುಳ್ಳಿರಿಸಿ ತಿಂಡಿ ನೀಡಿ, ಒಬ್ಬಂಟಿ ವಿದ್ಯಾರ್ಥಿನಿಯನ್ನು ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜಗಲಿಯಲ್ಲಿ ಕುಳಿತಿದ್ದ ಮಕ್ಕಳು ಬಾಗಿಲಿನ ಸಂದಿಯಲ್ಲಿ ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೆ ಶಿಕ್ಷಕ ಹೊರಬಂದು ವಿದ್ಯಾರ್ಥಿಗಳನ್ನು ನೀವು ಶೌಚಗೃಹಕ್ಕೆ ಹೋಗಿ ಬನ್ನಿ ಎಂದು ತಿಳಿಸಿದ್ದು, ಆ ಸಂದರ್ಭ ವಿದ್ಯಾರ್ಥಿನಿ ಭಯದಿಂದ ವಿದ್ಯಾರ್ಥಿಗಳನ್ನು ಹೋಗದಂತೆ ವಿನಂತಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಶಿಕ್ಷಕ ಸದಾನಂದ ಪೂಜಾರಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ವಿದ್ಯಾರ್ಥಿನಿಯನ್ನು ಶಿಕ್ಷಕರ ಕೊಠಡಿಯೊಳಗೆ ಕರೆದುಕೊಂಡು ಹೋದ ಸಂದರ್ಭ ಹೊರಭಾಗದಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಚಪ್ಪಲಿಯನ್ನು ಜಗಲಿಗೆ ಬಡಿದು ಶಿಕ್ಷಕ ಹೊರಬರುವಂತೆ ನೋಡಿಕೊಂಡಿದ್ದಾರೆ.

    ಚೈಲ್ಡ್‌ಲೈನ್ ಅಧಿಕಾರಿಗಳು ಭೇಟಿ

    ಮಂಗಳವಾರ ಶಾಲೆಗೆ ಚೈಲ್ಡ್‌ಲೈನ್‌ನ ನಂದಾ ಪಾಯಸ್, ಸಾಮಾಜಿಕ ಕಾರ್ಯಕರ್ತೆ ಪದ್ಮಿನಿ ವಸಂತ್, ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಮತ್ತು ಸದಸ್ಯರು, ಮಂಗಳೂರು ಮಹಿಳಾ ಠಾಣೆ ಸಿಬ್ಬಂದಿ ಭೇಟಿ ನೀಡಿದ್ದು ಮಕ್ಕಳಿಂದ ಹೇಳಿಕೆ ಪಡೆದಿದ್ದಾರೆ. ಈ ವೇಳೆ ಹಲವು ವಿದ್ಯಾರ್ಥಿನಿಯರು ಆ ಶಿಕ್ಷಕ ತಮಗೂ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಐಕಳ ವ್ಯಾಪ್ತಿಯ ವಿದ್ಯಾರ್ಥಿನಿಯೋರ್ವಳು ಎರಡು ತಿಂಗಳಿಂದ ಶಾಲೆಗೆ ಬಾರದೆ ಮನೆಯಲ್ಲೇ ಇದ್ದು, ಈ ಶಿಕ್ಷಕನ ಕಿರುಕುಳದಿಂದ ಶಾಲೆಗೆ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಆರೋಪಿ ಶಿಕ್ಷಕ ಗುರುವ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts