More

    ಪ್ರಭಾಸ್ ‘ಸಲಾರ್’ ಚಿತ್ರದಲ್ಲಿ ನಟಿಸುವ ಆಸೆ ಇದೆಯೇ, ಹಾಗಾದ್ರೆ ಇಲ್ಲಿದೆ ಅವಕಾಶ…

    ಬೆಂಗಳೂರು: ಪ್ರಶಾಂತ್​ ನೀಲ್​ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್​ ಘೋಷಣೆ ಮಾಡಿದೆ. ಈ ಮೂಲಕ ಸಲಾರ್ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್​ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಸದ್ಯ ಪೋಸ್ಟರ್​ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿಕೊಂಡಿರುವ ತಂಡ, ಈ ಚಿತ್ರವನ್ನು ಇಂಡಿಯನ್​ ಸಿನಿಮಾ ಎಂದು ಘೋಷಿಸಿಕೊಂಡಿದೆ. ಇದೀಗ ಇದೇ ಸಿನಿಮಾದ ಭಾಗವಾಗಲು ಕಲಾವಿದರಿಗೆ ಆಡಿಷನ್​ ಕರೆದಿದೆ ತಂಡ.

    ಇದನ್ನೂ ಓದಿ: ಮಕ್ಕಳ ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಾದಬ್ರಹ್ಮ

    ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ತೆರೆಗೆ ಬರಲಿದೆ. 100 ಕೋಟಿಗೂ ಅಧಿಕ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಎಲ್ಲ ಭಾಷಿಕರಿಗೂ ಈ ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಿರ್ಮಾಣ ಸಂಸ್ಥೆ ಮಾಡಿಕೊಡುತ್ತಿದೆ. ಅದರಂತೆ ಇದೀಗ ಹೈದರಾಬಾದ್​ನಲ್ಲಿ ಆಡಿಷನ್​ ಕರೆದಿದ್ದು, ಯಾವುದಾದರೂ ಭಾಷೆಯಲ್ಲಿ ಒಂದು ನಿಮಿಷದ ವಿಡಿಯೋ ಮಾಡಿ ವಾಟ್ಸಾಪ್​ ಮೂಲಕ ಕಳುಹಿಸಿಕೊಡಬೇಕು.

    ಡಿಸೆಂಬರ್ 15ರಂದು ಬೆಳಗ್ಗೆ 9ರಿಂದ 6ರವರೆಗೂ ಆಡಿಷನ್ ಪ್ರಕ್ರಿಯೆ ನಡೆಯಲಿದ್ದು, ಅದಾದ ಬಳಿಕ ಬೆಂಗಳೂರು ಮತ್ತು ಚೆನ್ನೈನಲ್ಲಿಯೂ ಆಡಿಷನ್ ನಡೆಯಲಿದೆ ಎಂದು ತಂಡ ಹೇಳಿಕೊಂಡಿದೆ. ವಿಜಯ್​ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ. ಅವುಗಳಲ್ಲಿ ರಾಧೆ ಶ್ಯಾಮ್​ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ಸಲಾರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ಆದಿಪುರುಷ್ ಮತ್ತು ನಾಗ್​ ಅಶ್ವಿನ್​ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.

    ನಿಹಾರಿಕಾ- ಚೈತನ್ಯ ಕಲ್ಯಾಣ; ಉದಯ್​ಪುರದಲ್ಲಿ ಮೆಗಾ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts