More

  ಸಲಾರ್​ ಚಿತ್ರಕ್ಕೆ ಪ್ರಶಾಂತ್​ ನೀಲ್​ ಪಡೆದ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

  ಹೈದರಾಬಾದ್​​: ನಟ ಪ್ರಭಾಸ್​ ಮತ್ತು ಪೃಥ್ವಿರಾಜ್​ ಚೌಹಾಣ್​ ನಟನೆಯ ಹಾಗೂ ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಭಾಗ 1 ಸೀಸ್​ಫೈರ್​ ಬಾಕ್ಸ್​ಆಫೀಸ್​ನಲ್ಲಿ ಸುನಾಮಿ ಎಬ್ಬಿಸಿದ್ದು, ಹಳೆಯ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಡಿ.22ರಂದು ವಿಶ್ವದಾದ್ಯಂತ ಬಿಡುಗಡೆಯಾದ ಆ್ಯಕ್ಸನ್​ ಥ್ರಿಲ್ಲರ್​ ಸಿನಿಮಾ ಎಲ್ಲೆಡೆ ಪಾಸಿಟಿವ್​ ರಿವಿವ್ಯೂ ಪಡೆದುಕೊಳ್ಳುತ್ತಾ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಸಲಾರ್ ಚಿತ್ರದ ನಿರ್ಮಾಪಕರು ಬಾಕ್ಸ್​ಆಫೀಸ್​ ಕಲೆಕ್ಷನ್​ ಅನ್ನು ನಿಯಮಿತವಾಗಿ ಪ್ರಕಟಿಸುತ್ತಿದ್ದು, ಇತ್ತೀಚಿನ ಅಪ್‌ಡೇಟ್ ಪ್ರಕಾರ ಚಿತ್ರವು ನಾಲ್ಕು ದಿನದಲ್ಲಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ.

  ಕನ್ನಡ ಚಿತ್ರರಂಗದ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಪ್ರಶಾಂತ್ ನೀಲ್​ ಅವರು ಸಲಾರ್​ ಚಿತ್ರಕ್ಕೆ ಲಾಭದ ಜೊತೆಗೆ ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇಷ್ಟೊಂದು ಸಂಭಾವನೆ ಪಡೆದ ಕನ್ನಡದ ಮೊದಲ ನಿರ್ದೇಶಕ ಪ್ರಶಾಂತ್ ನೀಲ್ ಎನಿಸಿಕೊಂಡಿದ್ದಾರೆ. ಕೇವಲ ನಾಲ್ಕೇ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿರುವುದು ದೊಡ್ಡ ಸಂಗತಿ. ಪ್ರಶಾಂತ್​ ಅವರ ಸ್ಕ್ರೀನ್​ ಪ್ಲೇ, ನಾಯಕನನ್ನು ತೋರಿಸುವ ರೀತಿ ಹಾಗೂ ಕತೆಯನ್ನು ಹೇಳುವ ರೀತಿ ಜನಕ್ಕೆ ಇಷ್ಟವಾಗಿದ್ದು, ಕೆಲವೇ ಚಿತ್ರಗಳಿಗೆ ಸ್ಟಾರ್​ ನಿರ್ದೇಶಕನೆಂಬ ಪಟ್ಟ ಸಿಕ್ಕಿದೆ.

  ಮತ್ತೊಂದೆಡೆ ನಟ ಪ್ರಭಾಸ್ ಅವರು ಕೂಡ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ವರದರಾಜ ಮನ್ನಾರ್ ಪಾತ್ರದಲ್ಲಿ ನಟಿಸಲು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರಿಗೆ ನಾಲ್ಕು ಕೋಟಿ ರೂ. ನೀಡಲಾಗಿದೆ ಎಂದು ತಿಳಿದುಬಂದಿದೆ.

  ದೇಶಿ ಸಿನಿಮಾ ಮಾರುಕಟ್ಟಯಲ್ಲಿ ಶಾರುಖ್​ ಖಾನ್​ ನಟನೆಯ ಡಂಕಿ ಸಿನಿಮಾವನ್ನು ಹಿಂದಿಕ್ಕಿ ಕೇವಲ 4 ದಿನದಲ್ಲಿ ಬರೋಬ್ಬರಿ 251 ಕೋಟಿ ರೂ.ಗೂ ಅಧಿಕ ಹಣ ಕಲೆಹಾಕಿದೆ. ಐದನೇ ದಿನವೂ ಬಾಕ್ಸ್​ಆಫೀಸ್​ನಲ್ಲಿ ಸಲಾರ್​ ಕಮಾಲ್​ ಮಾಡಲಿದೆ ಎಂದು ಸಿನಿ ವಿಮರ್ಶಕರು ಅಂದಾಜಿಸಿದ್ದಾರೆ. ಈಗಾಗಲೇ ಈ ಚಿತ್ರ ಬಿಡುಗಡೆಗೂ ಮುನ್ನ 20 ಕೋಟಿ ರೂ.ಗೂ ಅಧಿಕ ಹಣ ಗಳಿಸಿದ್ದು, 4 ದಿನಗಳ ಕಲೆಕ್ಷನ್​ ಬಳಿಕ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

  ಪ್ರಶಾಂತ್​ ನೀಲ್​ ನಿರ್ದೇಶನವಿರುವ ಈ ಚಿತ್ರದಲ್ಲಿ ಬರೀ ಆ್ಯಕ್ಷನ್​ ದೃಶ್ಯಗಳೇ ತುಂಬಿಕೊಂಡಿವೆ. ತೆಲುಗು ರಾಜ್ಯದಲ್ಲಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಆ್ಯಕ್ಷನ್ ಡ್ರಾಮಾ ಇಬ್ಬರು ಸ್ನೇಹಿತರು, ಶತ್ರುಗಳಾಗಿ ಬದಲಾಗುವ ಕತೆಯಾಗಿದೆ. ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಮತ್ತು ರಾಮಚಂದ್ರರಾಜು ಪೋಷಕ ಪಾತ್ರಗಳ ಮೂಲಕ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ, ಚಿತ್ರಕ್ಕೆ ಕೆಜಿಎಫ್​ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್​)

  ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ, ಒತ್ತಡಕ್ಕೆ ಹೇಳಿ ಗುಡ್​ಬೈ!

  ರಾರಾ ರಕ್ಕಮ್ಮಂಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ! ಆಗಿದ್ದೇನು ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts