More

    “ದಿ ಕಾಶ್ಮೀರ್ ಫೈಲ್ಸ್” ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

    ಹೈದರಾಬಾದ್​: ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ವ್ಯಾಕ್ಸಿನ್ ವಾರ್’ ಮೂಲಕ ಹಿಂದಿಯಲ್ಲಿ ಖ್ಯಾತಿ ಗಳಿಸಿದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರ ಹೈದರಾಬಾದ್‌ನ ಕಚೇರಿ ಮತ್ತು ಮನೆಯಲ್ಲಿ ಐಟಿ ಅಧಿಕಾರಿಗಳು ಬುಧವಾರ ಶೋಧ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ವಿಮರ್ಶೆ ಎಂಬ ಬಾಂಬ್​ ಸಿನಿರಂಗವನ್ನು ನಾಶ ಮಾಡಬಾರದು: ವ್ಲಾಗರ್​ಗಳಿಗೆ ಹೈಕೋರ್ಟ್​ ಖಡಕ್​ ಎಚ್ಚರಿಕೆ

    ರವಿತೇಜಾ ಅಭಿನಯದ ಮುಂಬರುವ ತೆಲುಗು ಚಿತ್ರ ‘ಟೈಗರ್ ನಾಗೇಶ್ವರ ರಾವ್’ ಬಿಡುಗಡೆಗೆ ಸಿದ್ಧರಾಗಿದೆ. ಚಿತ್ರದ ಪ್ರಚಾರಕ್ಕಾಗಿ ಮಾಧ್ಯಮದವರನ್ನು ಭೇಟಿ ಮಾಡಲು ಸಜ್ಜಾಗುತ್ತಿದ್ದ ಸಮಯದಲ್ಲಿ ಈ ದಾಳಿ ನಡೆದಿದ್ದು, ಚಿನಿ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.

    ಅವರ ತೆಲುಗು ಚಿತ್ರ “ಟೈಗರ್ ನಾಗೇಶ್ವರ ರಾವ್”ನಲ್ಲಿ ಮಾಸ್​ ಮಹಾರಾಜ ರವಿತೇಜ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಿಸಲಾಗಿದೆ. ತೆಲುಗು, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿಯಲ್ಲಿ ಈ ತಿಂಗಳ 20ರಂದು ಬಿಡುಗಡೆಯಾಗಲಿದೆ. ಹೀಗಾಗಿಯೇ ಬೃಹತ್​ ಮೊತ್ತದ ಹಣವು ಕೇಂದ್ರ ಏಜೆನ್ಸಿಗಳ ಗಮನವನ್ನು ಸೆಳೆದಿರಬಹುದು ಎಂದು ಹೇಳಲಾಗುತ್ತಿದೆ.

    ಇನ್ನು ಅಭಿಷೇಕ್​ ಅಗರ್ವಾಲ್​ ಕಳೆದ ವರ್ಷ ದ ಕಾಶ್ಮೀರ್ ಫೈಲ್ಸ್​, ಕಾರ್ತೀಕೇಯ-2, ಧಮಾಕ ದಂಥ ಸಿನಿಮಾಗಳನ್ನು ನಿರ್ಮಿಸಿದ್ದರು. ಮೂಲಗಳ ಪ್ರಕಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts