More

    ವಿಮರ್ಶೆ ಎಂಬ ಬಾಂಬ್​ ಸಿನಿರಂಗವನ್ನು ನಾಶ ಮಾಡಬಾರದು: ವ್ಲಾಗರ್​ಗಳಿಗೆ ಹೈಕೋರ್ಟ್​ ಖಡಕ್​ ಎಚ್ಚರಿಕೆ

    ಕೊಚ್ಚಿ: ವಿಮರ್ಶೆಗಳನ್ನು ನೋಡಿ ಸಿನಿಮಾ ವೀಕ್ಷಣೆ ಮಾಡುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಅನೇಕರು ಯೂಟ್ಯೂಬ್​ಗಳನ್ನು ಆಧರಿಸಿದ್ದಾರೆ. ಹೀಗಾಗಿ ಕೆಲ ಯೂಟ್ಯೂಬರ್​ಗಳು ಇದನ್ನೇ ಬಂಡವಾಳ ಮಾಡಿಕೊಂಡು ಸಿನಿ ತಂಡದಿಂದ ಹಣ ವಸೂಲಿ ಮಾಡುತ್ತಿರುವ ಆರೋಪವಿದೆ. ಈ ಸಂಬಂಧ ಕೇರಳ ಹೈಕೋರ್ಟ್​ ಇದೀಗ ಮಹತ್ವದ ತೀರ್ಪೊಂದನ್ನು ನೀಡಿದೆ.

    ವಿಮರ್ಶೆ ಎಂಬ ಬಾಂಬ್​ ಸಿನಿಮಾ ರಂಗವನ್ನು ನಾಶ ಮಾಡಬಾರದು ಎಂದು ಅಭಿಪ್ರಾಯಪಟ್ಟಿರುವ ಕೇರಳ ನ್ಯಾಯಾಲಯ, ಸಿನಿಮಾ ವಿಮರ್ಶೆಗಳ ಹೆಸರಲಿ ಹಣ ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಡಿಜಿಪಿಗೆ ನಿರ್ದೇಶನ ನೀಡಿದೆ. ಇಂದು ಕೈಯಲ್ಲಿ ಫೋನ್ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಪರಿಸ್ಥಿತಿ ಇದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದರು.

    ಸಿನಿಮಾಗಳನ್ನು ನಾಶಪಡಿಸುವ ನೆಗಿಟಿವ್​ ವಿಮರ್ಶೆಗಳನ್ನು ನಿಯಂತ್ರಿಸುವಂತೆ ಕೋರಿ ‘ಆರೋಮಲಿಂಟೆ ಆದ್ಯತೆ ಪ್ರಣಾಯಂ’ ಚಿತ್ರದ ನಿರ್ದೇಶಕ ಮುಬೀನ್ ರೌಫ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​, ವಿಮರ್ಶೆಗಳ ಮೂಲಕ ಚಲನಚಿತ್ರ ನಿರ್ಮಾಪಕರನ್ನು ಬ್ಲ್ಯಾಕ್ ಮೇಲ್ ಮಾಡುವ ವ್ಲಾಗರ್‌ಗಳು ನಮ್ಮ ಆದೇಶಕ್ಕೆ ಹೆದರಬೇಕು ಎಂದಿದೆ.

    ಇದನ್ನೂ ಓದಿ: INDvsAFG: ಏರ್​ಫೋರ್ಸ್​ ಸಮವಸ್ತ್ರ ಧರಿಸಿ ವಿಶ್ವಕಪ್​ ಪ್ರಿ ಶೋಗೆ​ ನಟಿ ಕಂಗನಾ ರಣಾವತ್​ ಎಂಟ್ರಿ!

    ಕೆಲವು ವ್ಲಾಗರ್‌ಗಳು ಸಿನಿಮಾ ನಿರ್ಮಾಪಕರಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಹಣ ಪಾವತಿಸದಿದ್ದರೆ ಕೆಟ್ಟ ವಿಮರ್ಶೆಗಳನ್ನು ಪೋಸ್ಟ್ ಮಾಡುತ್ತಾರೆ. ಇದು ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಬಾರಿ ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸಿದಾಗ, ಈ ಕುರಿತು ಯಾವ ಕ್ರಮ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂಬುದನ್ನು ತಿಳಿಸುವಂತೆ ಡಿಜಿಪಿಯನ್ನು ಕೇಳಿತ್ತು. ಇದೀಗ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಉತ್ತರ ನೀಡಿದ್ದು, ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದ ಇತರರೊಂದಿಗೆ ಸಮಾಲೋಚಿಸಿ ಪ್ರೋಟೋಕಾಲ್ ತಯಾರಿಸಲಾಗುವುದು ಮತ್ತು ಇದಕ್ಕಾಗಿ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆಗೆ ಮುಂದೂಡಲಾಗಿದೆ. (ಏಜೆನ್ಸೀಸ್​)

    INDvsAFG: ಏರ್​ಫೋರ್ಸ್​ ಸಮವಸ್ತ್ರ ಧರಿಸಿ ವಿಶ್ವಕಪ್​ ಪ್ರಿ ಶೋಗೆ​ ನಟಿ ಕಂಗನಾ ರಣಾವತ್​ ಎಂಟ್ರಿ!

    ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಿಎಸ್ಐ; ಕೆಲವೇ ಗಂಟೆಗಳಲ್ಲಿ ಒಂದೂವರೆ ಕೋಟಿಗೆ ಒಡೆಯನಾದ

    ಗ್ಲಾಮರಸ್ ಲುಕ್​​​ನಲ್ಲಿ ಚಿಟ್ಟೆಯಂತೆ ಮಿಂಚಿದ ನಿಶ್ವಿಕಾ ನಾಯ್ಡು, ಈ ಚಿಟ್ಟೆ ಹಾರಿ ಹೋಗುತ್ತಾ ಎಂದು ಪ್ರಶ್ನಿಸಿದ ಪಡ್ಡೆ ಹುಡುಗರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts