More

    ಮತಎಣಿಕೆ ನಡುವೆ ತೆಲಂಗಾಣ ಕಾಂಗ್ರೆಸ್​ ಮುಖ್ಯಸ್ಥರ ಭೇಟಿ: ಡಿಜಿಪಿ ಅಂಜನಿ ಕುಮಾರ್​ ಸಸ್ಪೆಂಡ್​

    ಹೈದರಾಬಾದ್​: ಮತಎಣಿಕೆಯ ನಡುವೆಯೇ ತೆಲಂಗಾಣದ ಕಾಂಗ್ರೆಸ್​ ಮುಖ್ಯಸ್ಥ ರೇವಂತ್​ ರೆಡ್ಡಿಯನ್ನು ಭೇಟಿ ಮಾಡಿದ ಉನ್ನತ ಪೊಲೀಸ್​ ಅಧಿಕಾರಿಯನ್ನು ಅಮಾನತು ಮಾಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

    ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್​ ಮತ್ತು ಇನ್ನಿಬ್ಬರು ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ವಿವರಣೆ ನೀಡುವಂತೆ ಆಯೋಗ ಕೇಳಿದೆ.

    ಮತಎಣಿಕೆಯ ನಡುವೆಯೇ ಅಂಜನಿ ಕುಮಾರ್​ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ರೇವಂತ್​ ರೆಡ್ಡಿ ಅವರನ್ನು ಭೇಟಿ ಮಾಡಲು ಹೈದರಾಬಾದ್​ನಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದರು. ರೇವಂತ್​ ರೆಡ್ಡಿಗೆ ಅಂಜನಿ ಕುಮಾರ್​ ಅವರು ಹೂಗುಚ್ಛ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರ ಬೆನ್ನಲ್ಲೇ ಆಯೋಗ ಕ್ರಮ ಕೈಗೊಂಡಿದೆ.

    ಚುನಾವಣಾ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಭೇಟಿ ಮಾಡಲು ಡಿಜಿಪಿ ಆಯ್ಕೆ ಮಾಡಿಕೊಂಡಿರುವುದು ತಮ್ಮ ಮೇಲೆ ಒಲವು ಕೋರುವ ದುರುದ್ದೇಶದ ಸ್ಪಷ್ಟ ಸೂಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಇನ್ನು ಫಲಿತಾಂಶದ ವಿಚಾರಕ್ಕೆ ಬಂದರೆ, ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ. ಚಂದ್ರಶೇಖರ್​ ರಾವ್​ ನೇತೃತ್ವದ ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​)ಗೆ ತೆಲಂಗಾಣ ಮತದಾರರು ಶಾಕ್​ ನೀಡಿದ್ದು, ಈ ಬಾರಿ ಕಾಂಗ್ರೆಸ್​ ಮೇಲೆ ತಮ್ಮ ಒಲವು ತೋರಿದ್ದಾರೆ. ಅಖಂಡ ಆಂಧ್ರಪ್ರದೇಶದಿಂದ ಇಬ್ಭಾಗವಾಗಿ ಸ್ವತಂತ್ರ ತೆಲಂಗಾಣ ರಾಜ್ಯ ರಚನೆಯಾದಾಗಿನಿಂದ ಕೆ. ಚಂದ್ರಶೇಖರ್​ ರಾವ್​ ಅವರ ಬಿಆರ್​ಎಸ್​ ಪಕ್ಷ ಆಡಳಿತದಕಲ್ಲಿತ್ತು. ಎರಡು ದಶಕಗಳ ಆಡಳಿತಕ್ಕೆ ಈ ಬಾರಿ ಬ್ರೇಕ್​ ಬಿದ್ದಿದೆ.

    ಒಟ್ಟು 119 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್​ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೆಲಂಗಾಣದಲ್ಲಿ ಅಧಿಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. ಆಡಳಿತರೂಢ ಬಿಆರ್​ಎಸ್​ ಕೇವಲ 39 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. (ಏಜೆನ್ಸೀಸ್​)

    ಉತ್ತರ ಪ್ರದೇಶದಂತೆ ರಾಜಸ್ಥಾನದಲ್ಲೂ ಮತ್ತೊಬ್ಬ ಯೋಗಿ ಉದಯವಾಗ್ತಾರಾ? ಯಾರು ಈ ಬಾಬಾ ಬಾಲಕನಾಥ್​?

    ಮಾಲ್ಡೀವ್ಸ್​ನಲ್ಲಿ ರಜೆ ಕಳೆದಿದ್ದ ವಿಜಯ್ -ರಶ್ಮಿಕಾ ಫೋಟೋಗಳ ಸಾರ್ವಜನಿಕ ಪ್ರದರ್ಶನ?: ನಟಿ ಮೃಣಾಲ್ ಶಾಕ್​ ಆಗಿದ್ದೇಕೆ?

    ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ, ಆದ್ರೆ ‘ಬಿಜೆಪಿಯ ಸಿಎಂ’; ಈ ಚರ್ಚೆ ಏಕೆ ಹುಟ್ಟಿಕೊಂಡಿತು, ರೇವಂತ್ ರೆಡ್ಡಿ ಹಿನ್ನಲೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts