More

    ಆನ್​ಲೈನ್​ ಪಾಠ ಮಾಡುತ್ತಿದ್ದೀರಾದರೆ ವಿವರ ನೀಡಿ: ಬೋಧಕರ ಮೇಲೆ ತಾಂತ್ರಿಕ ಶಿಕ್ಷಣ ಇಲಾಖೆ ನಿಗಾ

    ಬೆಂಗಳೂರು: ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಆನ್​ಲೈನ್ ಪಾಠಕ್ಕೆ ಅಥವಾ ಬೋಧನೆಗೆ ಆದ್ಯತೆ ನೀಡುವಂತೆ ಸರ್ಕಾರ ಹಾಗೂ ವಿವಿಧ ಶಿಕ್ಷಣ ಮಂಡಳಿಗಳು ಬೋಧಕರಿಗೆ ಮನವಿ ಮಾಡುತ್ತಿವೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ತಾಂತ್ರಿಕ ಶಿಕ್ಷಣ ಇಲಾಖೆ, ಲಾಕ್​ಡೌನ್​ ಅವಧಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಇಂಜಿನಿಯರಿಂಗ್​ ಹಾಗೂ ಪಾಲಿಟೆಕ್ನಿಕ್​ಗಳು ಕಾಲೇಜುಗಳ ಬೋಧಕರು ನಡೆಸಿದ ಆನ್​ಲೈನ್​ ತರಗತಿಗಳ ವಿವರವನ್ನು ನೀಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಆ ಮೂಲಕ ರಜಾ ಅವಧಿಯಲ್ಲೂ ಅವರ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿದೆ.

    ಉಳಿದ ಶಾಲಾ- ಕಾಲೇಜುಗಳಿಗೆ ಹೋಲಿಸಿದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಆನ್​ಲೈನ್​ ತರಗತಿಗಳನ್ನು ನಡೆಸಲು ಅಗತ್ಯ ಮೂಲಸೌಕರ್ಯ ಹೊಂದಿವೆ. ಜತೆಗೆ, ವಿದ್ಯಾರ್ಥಿಗಳಲ್ಲೂ ಕಂಪ್ಯೂಟರ್​, ಲ್ಯಾಪ್​ಟಾಪ್​ ಹೊಂದಿರುತ್ತಾರೆ. ಇದಲ್ಲದೇ, ರಜೆಯ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕೆಂದು ಈಗಾಗಲೇ ಸರ್ಕಾರವೂ ನಿದೇರ್ಶನಗಳನ್ನು ನೀಡಿದೆ. ಹೀಗಾಗಿ ಆನ್​ಲೈನ್​ ತರಗತಿಗಳನ್ನು ನಡೆಸುವುದು ಅನಿವಾರ್ಯವಾಗಿದೆ.
    ಇಲಾಖೆ ಅಧೀನದಲ್ಲಿ 85 ಸರ್ಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಗಳು, 13 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು 9 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳಿವೆ.

    ಆನ್​ಲೈನ್​ ತರಗತಿ ನಡೆಸಿ ಬೋಧಕರ ಹೆಸರು, ಹುದ್ದೆ, ಕಾಲೇಜು, ಭಾಗವಹಿಸಿದ ವಿದ್ಯಾರ್ಥಿಗಳು, ಕೋರ್ಸ್​, ವಿಷಯ, ಸಮಯ ಹಾಗೂ ಇದಕ್ಕಾಗಿ ಬಳಸಿದ ಮಾಧ್ಯಮ (ಆ್ಯಪ್​) ಮೊದಲಾದವುಗಳ ವಿವರವನ್ನು ಆನ್​ಲೈನ್​ನಲ್ಲಿಯೇ ಪಡೆಯಲು ತಂತ್ರಾಂಶ ರೂಪಿಸಿದೆ. ಅದನ್ನು ಭರ್ತಿ ಮಾಡಿ ಸಲ್ಲಿಸುವಂತೆ ಕಾಲೇಜು ಹಾಗೂ ಬೋಧಕರಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ರಜಾ ಅವಧಿಯಲ್ಲೂ ಬೋಧಕರ ಕಾರ್ಯ ನಿರ್ವಹಣೆಯ ಮೇಲೆ ನಿಗಾ ವಹಿಸುತ್ತಿದೆ.

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಯುಪಿಎಸ್​ಸಿಯಿಂದ ಸಿಎಂಎಸ್​ ನೇಮಕಾತಿ ಅಧಿಸೂಚನೆ ವಿಳಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts