ಯುಪಿಎಸ್​ಸಿಯಿಂದ ಸಿಎಂಎಸ್​ ನೇಮಕಾತಿ ಅಧಿಸೂಚನೆ ವಿಳಂಬ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಕಂಬೈನ್ಡ್​ ಮೆಡಿಕಲ್​ ಸರ್ವೀಸ್​ ಪರೀಕ್ಷೆಗಾಗಿ ಅಧಿಸೂಚನೆ ಹೊರಡಿಸುವುದನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ಯುಪಿಎಸ್​ಸಿಯ ನಿಗದಿತ ವೇಳಾಪಟ್ಟಿಯಂತೆ ಏಪ್ರಿಲ್​ 8ರಂದು ಅಧಿಸೂಚನೆ ಹೊರಡಿಸಬೇಕಾಗಿತ್ತು. ಅರ್ಜಿ ಸಲ್ಲಿಸಲು ಏಪ್ರಿಲ್​ 28 ಕೊನೆಯ ದಿನವಾಗಿತ್ತು. ಆದರೆ, ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸುವುದನ್ನು ಮುಂದಕ್ಕೆ ಹಾಕಿದೆ. ಯುಪಿಎಸ್​ಸಿ ಈಗಾಗಲೇ ರಾಷ್ಟ್ರೀಯ ಸೇನಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸುವುದನ್ನು ಮುಂದೂಡಿದೆ. ಇದಲ್ಲದೇ, ಹಲವು ನೇರ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ. ಅಖಿಲ ಭಾರತ ನಾಗರಿಕ … Continue reading ಯುಪಿಎಸ್​ಸಿಯಿಂದ ಸಿಎಂಎಸ್​ ನೇಮಕಾತಿ ಅಧಿಸೂಚನೆ ವಿಳಂಬ