More

    ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಒತ್ತಾಯ

    ತಾವರಗೇರಾ: ವಿವಿಧ ಬೇಡಿಕಗಳ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ತಾಲೂಕು ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಕಂದಾಯ ನೀರಿಕ್ಷಕ ಶರಣಪ್ಪ ದಾಸರಗೆ ಮನವಿ ಸಲ್ಲಿಸಲಾಯಿತು.

    ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಕೊಟ್ಟು ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವುದು. ಎಲ್ಲ ಬಡ ಕುಟುಂಬಗಳಿಗೆ ಮಾಸಿಕ ರೂ.7500 ನಗದು, ತಲಾ 10 ಕೆ.ಜಿ. ಆಹಾರ ಧಾನ್ಯ, ನರೇಗಾ ಯೋಜನೆಯಡಿ ದಿನಕ್ಕೆ 700 ವೇತನದೊಂದಿಗೆ ವಾರ್ಷಿಕ 200 ದಿನಗಳ ಕೆಲಸ ನೀಡಬೇಕು ಮತ್ತು ನರೇಗಾ ಕೆಲಸವನ್ನು ನಗರ ಪ್ರದೇಶಕ್ಕೂ ವಿಸ್ತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

    ತಾಲೂಕು ಸಮಿತಿ ಅಧ್ಯಕ್ಷೆ ಕಲಾವತಿ ಮೆಣೇಧಾಳ, ಖಜಾಂಚಿ ಪುಷ್ಪಾ, ಕಾರ್ಯದರ್ಶಿ ವಿಮಲಾ ಅಂಗಡಿ, ಸದಸ್ಯರಾದ ಗೀತಾ, ಶರಣಮ್ಮ, ವಿಜಯಲಕ್ಷ್ಮೀ ಗದ್ದಿ, ಯಮನಮ್ಮ, ಪರಿಮಳಾ, ಸುಲೋಚನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts