More

    ಮೂರು ದಿನ ತಮಿಳುನಾಡಿನಲ್ಲಿ ರೆಡ್ ಅಲರ್ಟ್: 12 ಜಿಲ್ಲೆಗಳಲ್ಲಿ ರಜೆ ಘೋಷಣೆ

    ಚೆನ್ನೈ: ಕಳೆದ ಕೆಲವು ದಿನಗಳಿಂದ ತಮಿಳುನಾಡು ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ನವೆಂಬರ್ 11 ರವರೆಗೆ ಅಂದರೆ ಮುಂದಿನ ಮೂರು ದಿನಗಳವರೆಗೆ ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

    ತಮಿಳುನಾಡು ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜಧಾನಿ ಚೆನ್ನೈ ಹೆಚ್ಚು ಹಾನಿಗೊಳಗಾಗಿದೆ. ನವೆಂಬರ್ 11 ರವರೆಗೆ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ ಮತ್ತು ಆಳ ಸಮುದ್ರದಲ್ಲಿರುವವರು ತಕ್ಷಣ ಕರಾವಳಿಗೆ ಮರಳಲು ಸೂಚಿಸಲಾಗಿದೆ.

    ಮಳೆ ಸಂಬಂಧಿತ ಅನಾಹುತದಲ್ಲಿ ಈವರೆಗೆ ಐವರು ಸಾವಿಗೀಡಾಗಿದ್ದಾರೆ. ಚೆನ್ನೈ, ಕಾಂಚೀಪುರಂ, ಚೆಂಗಲ್‌ಪಟ್ಟು, ತಿರುವಳ್ಳೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮೈಲಾಡುತುರೈ, ಕಡಲೂರು ಸೇರಿದಂತೆ ಒಟ್ಟು ಒಂಬತ್ತು ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ (ನವೆಂಬರ್ 10,11) ರಜೆ ಘೋಷಣೆ ಮಾಡಲಾಗಿದೆ.

    ಪುದುಕೊಟ್ಟೈ, ಶಿವಗಂಗೈ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ, ತಿರುಚ್ಚಿ ಜಿಲ್ಲಾಡಳಿತ ಬುಧವಾರ ಶಾಲೆಗೆ ಮಾತ್ರ ರಜೆ ಘೋಷಿಸಿದೆ. ಮಳೆಯ ಪ್ರಮಾಣ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

    VIDEO: ಅಫ್ಘಾನ್‌ ತಾಲಿಬಾನಿಗಳ ವಶವಾದಾಗ ಅಸಂಖ್ಯ ಜನರಿಗೆ ಕಣ್ಣೀರು ತರಿಸಿದ್ದ ಮುದ್ದುಕಂದ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts