More

  VIDEO| ಈ ಸ್ಟಾರ್ ನಟ ನನಗೆ ಮಾಡಿದ ದ್ರೋಹ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸಂಗೀತ ನಿರ್ದೇಶಕ ಇಮ್ಮಾನ್

  ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್​ ಟನ ಶಿವಕಾರ್ತಿಕೇಯನ್​ ಅವರೊಂದಿಗೆ ನಾನು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಅವರು ಯಾವುದೋ ಒಂದು ರೀತಿಯಲ್ಲಿ ನನಗೆ ದ್ರೋಹ ಎಸಗಿದ್ದಾರೆ ಎಂದು ಸಂಗೀತ ನಿರ್ದೇಶಕ ಡಿ. ಇಮ್ಮಾನ್​ ಹೇಳಿದ್ದಾರೆ.

  ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದ್ದು, ಕೆಲವು ವಿಚಾರಗಳನ್ನು ನಾವು ಯಾವುದೇ ಕಾರಣಕ್ಕೂ ಜೀವನದಲ್ಲಿ ಮರೆಯಬಾರದು ಎಂದಿದ್ದಾರೆ. ಕಾಲಿವುಡ್​ನ ಈ ಇಬ್ಬರು ಸ್ಟಾರ್ಸ್​ ನಡುವಿನ ಮುನಿಸು

  ಖಾಸಗಿ ಸುದ್ದಿ ಸಂಸ್ಥೆಯ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ಮಾನ್, ಮುಂಬರುವ ಚಿತ್ರಗಳ ಕುರಿತು ಮಾತನಾಡುವ ವೇಳೆ ಶಿವಕಾರ್ತಿಕೇಯನ್​ ಅವರ ಜತೆ ಯಾವುದಾದರೂ ಚಿತ್ರ ಮಾಡುತ್ತಿದ್ದೀರಾ ಎಂಬ ಪ್ರಶ್ನೆಯನ್ನು ಆ್ಯಂಕರ್​ ಕೇಳಿದ್ದರು. ಈ ವೇಳೆ ಇದಕ್ಕೆ ಉತ್ತರಿಸಿದ ಇಮ್ಮಾನ್ ಯಾವುದೇ ಕಾರಣಕ್ಕೂ ನಾನು ಇನ್ನು ಮುಂದೆ ಶಿವಕಾರ್ತಿಕೇಯನ್​ ಒಟ್ಟಾಗಿ ಕೆಲಸ ಮಾಡುವುದಿಲ್ಲ.

  ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

  ಆತ ಮಾಡಿದ ಒಂದು ಕೆಲಸ ನನ್ನ ಇಡೀ ಜೀವನದ ದಿಕ್ಕನ್ನು ಬದಲಿಸಿತ್ತು ಮತ್ತು ಅವನು ನನಗೆ ಮಾಡಿರುವ ದ್ರೋಹ ಜೀವನದಲ್ಲಿ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಮತ್ತೆ ಅವನೊಂದಿಗೆ ಎಂದಿಗೂ ಕೆಲಸ ಮಾಡುವುದಿಲ್ಲ. ಕೆಲವರು ಮಾಡುವ ಕೆಲಸಗಳು ಒಬ್ಬ ಮನುಷ್ಯನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಆ ವಿಚಾರಗಳನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಅವನು ಮಾಡಿದ ದ್ರೋಹವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಂಗೀತ ನಿರ್ದೇಶಕ ಇಮ್ಮಾನ್​ ಹೇಳಿದ್ದಾರೆ.

  ಇತ್ತ ಇಮ್ಮಾನ್​ ಹೇಳಿಕೆಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಹಲವರು ಯಾವ ಕಾರಣಕ್ಕೆ ಇವರಿಬ್ಬರ ನಡುವ ಜಗಳವಾಗಿರಬಹುದು ಎಂದು ಕಮೆಂಟ್​ ಮೂಲಕ ಪ್ರಶ್ನಿಸಿದ್ದಾರೆ. ಕೆಲವರು ಶಿವಕಾರ್ತಿಕೇಯನ್​ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಸಂಗೀತ ನಿರ್ದೇಶಕ ಇಮ್ಮಾನ್ ಪರ ಬ್ಯಾಟ್ ಬೀಸಿದ್ದಾರೆ.

  SHivakarthikeyan

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts