More

    ವಿಜಯವಾಣಿ ಪತ್ರಿಕೆ ಹಂಚುವ ಹುಡುಗನ ಸಾಧನೆ

    ಕೊರಟಗೆರೆ : ನನ್ನ ವಿದ್ಯಾಭ್ಯಾಸಕ್ಕೆ ಪುಸ್ತಕದ ಹಣವನ್ನಾದರೂ ಸಂಪಾದನೆ ಮಾಡಿ ಪೋಷಕರಿಗೆ ಆರ್ಥಿಕ ಹೊರೆ ತಪ್ಪಿಸಲು ನಾನು ಮನೆ ಮನೆಗೆ ಪತ್ರಿಕೆ ಹಂಚುವ ಕಾಯಕ ಆಯ್ಕೆ ಮಾಡಿಕೊಂಡೆ ಎನ್ನುವ ವಿಜಯವಾಣಿ ಪತ್ರಿಕಾ ವಿತರಕ ಪಂಕಜ್ ಕುಮಾರ್ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 603 ಅಂಕ ಪಡೆದು ಸಾಧಕರ ಸಾಲಿನಲ್ಲಿ ನಿಂತಿದ್ದಾನೆ.

    ಕನ್ನಡದಲ್ಲಿ 117, ಇಂಗ್ಲೀಷ್ 98, ಹಿಂದಿ 97, ಗಣಿತ 95, ವಿಜ್ಞಾನ 97, ಸಮಾಜ ವಿಜ್ಞಾನ 99 ಅಂಕಗಳನ್ನು ಪಡೆಯುವುದರೊಂದಿಗೆ ಪೋಷಕರಿಗೆ ಮತ್ತು ಚಾಣಕ್ಯ ಶಾಲೆಗೆ ಕೀರ್ತಿ ತಂದಿದ್ದಾನೆ.

    7 ನೇ ತರಗತಿಯಿಂದಲೂ ವಿಜಯವಾಣಿ ಪತ್ರಿಕೆ ವಿತರಣೆ ಮಾಡುತ್ತಿರುವ ಪಂಕಜ್, ವಿದ್ಯಾರ್ಥಿ ಮಿತ್ರ ಪತ್ರಿಕೆ ಮಾರ್ಗದರ್ಶಕ ಸ್ಥಾನ ತುಂಬಿದೆ. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದರ ಜತೆಗೆ ವಿದ್ಯಾರ್ಥಿ ಮಿತ್ರದಲ್ಲಿನ 8, 9ನೇ ತರಗತಿಯಲ್ಲಿ ಪರೀಕ್ಷೆ ತಯಾರಿ ಪಠ್ಯ ವಿಷಯಗಳು ನನ್ನ ಸಾಧನೆಗೆ ಸಹಕಾರಿಯಾಯಿತು ಎಂದು ಹೆಮ್ಮೆಯಿಂದ ಹೇಳುತ್ತಾನೆ.

    ಪ್ರತಿನಿತ್ಯ ಮುಂಜಾನೆ ಎದ್ದು ಪತ್ರಿಕೆ ವಿತರಣೆ ಮಾಡಿ ನಂತರ ಶಾಲೆಗೆ ಗೈರಾಗದೆ ಬರುತ್ತಿದ್ದ ಪಂಕಜ್ ಕುಮಾರ್ ಓದಿನಲ್ಲು ಎಂದೂ ಹಿಂದೆ ಬಿದ್ದವನಲ್ಲ. ಆತನ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಕ್ಕಿದೆ. 603 ಅಂಕ ಪಡೆದು ಇತರ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಿ ನಿಂತಿದ್ದಾನೆ.
    -ನರಸಿಂಹಲು ಬಾಬು, ಕಾರ್ಯದರ್ಶಿ, ಚಾಣಕ್ಯ ಪಬ್ಲಿಕ್ ಶಾಲೆ, ಕೊರಟಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts