ಲೈಂಗಿಕ ಕಿರುಕುಳ ಪ್ರಕರಣ; ಗುಣತಿಲಕೆ ಮೇಲಿನ ನಿಷೇಧವನ್ನು ಹಿಂಪಡೆದ ಶ್ರೀಲಂಕಾ ಕ್ರಿಕೆಟ್

Dhanushka Gunathilake
Published on

ಕೊಲಂಬೋ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಶ್ರೀಲಂಕಾ ಕ್ರಿಕೆಟ್ ಕಮಿಟಿ (SLC) ಹಿಂಪಡೆದಿದೆ.

ಕಳೆದ ವರ್ಷ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್​ ಟೂರ್ನಿ ವೇಳೆ ಮಹಿಳೆಯೊಬ್ಬರಿಗೆ ಗುಣತಿಲಕೆ ಲೈಂಗಿಕ ಕಿರುಕುಳ ನೀಡಿದ್ಧಾರೆ ಎಂಬ ಆರೋಪ ಕೇಳಿ ಬಂದಿತ್ತು. ಅವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.

ಧನುಷ್ಕಾ ಗುಣತಿಕಲಕ ಅವರನ್ನು ಆಸ್ಟ್ರೇಲಿಯಾದ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದ ಬೆನ್ನಲ್ಲೇ ವಿಶೇಷ ಸಭೆ ನಡೆಸಿದ ಶ್ರೀಲಂಕಾ ಕ್ರಿಕೆಟ್ ಸಮಿತಿ ಅವರ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದಿದೆ. ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಶ್ರೀಲಂಕಾ ಕ್ರಿಕೆಟ್ ಸಮಿತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್​-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ ವೇಳೆ ಡೇಟಿಂಗ್​ ಆ್ಯಪ್​ ಮೂಲಕ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕ್ರಿಕೆಟಿ್ವ ಧನುಷ್ಕಾ ಗುಣತಿಲಕೆರನ್ನು ವಶಕ್ಕೆ ಪಡೆಯಲಾಗಿತ್ತು. ಈ ವರ್ಷ ಸೆಪ್ಟೆಂಬರ್ 28ರವರೆಗೂ ಅವರು ಆಸ್ಟ್ರೇಲಿಯಾದ ಜೈಲಿನಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net