More

    19 ವಿದೇಶಿಯರ ವಿರುದ್ಧ ಎಫ್​ಐಆರ್: ತಬ್ಲಿಘಿ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗಿ ಹಿನ್ನೆಲೆ ಬೆಂಗಳೂರಿನಲ್ಲಿಯೂ ಪ್ರಚಾರ ಸಭೆ ನಡೆಸಿದ ಆರೋಪ

    ಬೆಂಗಳೂರು: ಇಂಡೋನೇಷ್ಯಾ ಮತ್ತು ಕಜಕಿಸ್ತಾನ್​ನಿಂದ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದ 19 ವಿದೇಶಿಯರು ಬೆಂಗಳೂರು ಸೇರಿ ವಿವಿಧೆಡೆ ಧಾರ್ವಿುಕ ಪ್ರಚಾರದಲ್ಲಿ ತೊಡಗಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ 19 ಜನರ ವಿರುದ್ಧ ಜೆ.ಜೆ. ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

    ಇಂಡೋನೇಷ್ಯಾದ 10 ಮತ್ತು ಕಜಕಿಸ್ತಾನ್ ದೇಶದ 9 ಪ್ರಜೆಗಳ ವಿರುದ್ಧ ದೂರು ದಾಖಲಾಗಿದೆ. ಎಲ್ಲರನ್ನೂ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾ.9ರಂದು ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದರು. ದೆಹಲಿಯಲ್ಲಿ ತಬ್ಲಿಘಿ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಾ. 16ರಂದು ಬೆಂಗಳೂರಿನ ಪಾದರಾಯನಪುರ 1ನೇ ಕ್ರಾಸ್​ನಲ್ಲಿರುವ ಸುಬಾನಿಯ ಮಸೀದಿಗೆ ಬಂದಿದ್ದರು. ಇಲ್ಲಿಯೂ ಕೂಡ ಧರ್ಮ ಪ್ರಚಾರ ನಡೆಸಿದ್ದಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ತಬ್ಲಿಘಿ ಧಾರ್ವಿುಕ ಪ್ರಚಾರದಲ್ಲಿ ಪಾಲ್ಗೊಂಡಿದ್ದವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿತ್ತು.

    ಕರೊನಾ ನೆಗೆಟಿವ್: ಸುಬಾನಿಯ ಮಸೀದಿಯಲ್ಲಿ ವಿದೇಶಿಯರು ಧರ್ಮ ಪ್ರಚಾರ ಮಾಡುತ್ತಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ಮಸೀದಿಗೆ ಹೋಗಿ ಅವರೆಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಂಕು ಶಂಕೆ ಮೇರೆಗೆ ಇಂದಿರಾನಗರದ ಸಿ.ವಿ.ರಾಮನ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದಾರೆ. 19 ಮಂದಿಯಲ್ಲೂ ಕರೊನಾ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಬೆಂಗಳೂರಿನ ಸಾರಾಯಿಪಾಳ್ಯದಲ್ಲಿರುವ ಹಜ್​ಭವನದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

    ಬಿಇಎಂಎಲ್​ ಲೇಔಟ್​ನಲ್ಲಿ ಗೆಳತಿಯ ಹತ್ಯೆಗೆ ಯತ್ನಿಸಿದವ ಅರೆಸ್ಟ್: ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದ !

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts