More

    ಗೋವಿನ ಹತ್ಯೆ ಖಂಡಿಸಿ ಹಿಂದು ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ

    ಶಿರಸಿ: ತಾಲೂಕಿನ ಹೆಗಡೆಕಟ್ಟಾದಲ್ಲಿ ನಡೆದ ಗೋವಿನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಸಮಸ್ತ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಕಚೇರಿ ಎದುರು ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಶಿರಸಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಾಗರ ಮಾತನಾಡಿ, ಹೆಗಡೆಕಟ್ಟಾ ಸಮೀಪದ ಒಳ ರಸ್ತೆಯಲ್ಲಿ ಹಿಂದುಗಳಿಗೆ ಪವಿತ್ರವಾಗಿರುವ ನಿತ್ಯ ಪೂಜಿಸುವ ಗೋವನ್ನು ಕಡಿದು ಅದರ ರುಂಡವನ್ನು ಸಾರ್ವಜನಿಕವಾಗಿ ರಸ್ತೆಯಲ್ಲಿ ಎಸೆದು ವಿಕೃತಿ ಮೆರೆದಿರುವುದು ಖಂಡನೀಯ. ಗೋವುಗಳು ಸಮಸ್ತ ಹಿಂದುಗಳಿಗೆ ಪೂಜನೀಯವಾಗಿದ್ದು, ಮುಕ್ಕೊಟಿ ದೇವರ ಸ್ವರೂಪವಾಗಿ ನಾವು ಗೋವನ್ನು ಪೂಜಿಸುತ್ತೇವೆ. ದುಷ್ಕರ್ಮಿಗಳು, ಸಮಾಜಘಾತುಕರು ಹಿಂದುಗಳ ಪವಿತ್ರ ದೇವತೆ ಗೋವನ್ನು ವಧಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಅಂತಹ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಕಳೆದ ಒಂದುವರೆ ತಿಂಗಳಿನಿಂದ ಬೆಳಗ್ಗಿನ ಜಾವ ಮಸೀದಿಗಳಲ್ಲಿ ಮೈಕ್ ಶಬ್ದ ಹೆಚ್ಚುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ, ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
    ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಶ್ರೀಧರ ಮಂದಲಮನಿ ಮನವಿ ಸ್ವೀಕರಿಸಿ, ಮಾತನಾಡಿ, ಈಗಾಗಲೇ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಲಾಗುವುದು ಎಂದರು.
    ವಿಶ್ವ ಹಿಂದು ಪರಿಷತ್ ಪ್ರಮುಖ ಕೇಶವ ಮರಾಠೆ, ನಗರಸಭೆ ಮಾಜಿ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪ್ರಮುಖರಾದ ಹರೀಶ ಕರ್ಕಿ, ಚಂದ್ರು ಎಸಳೆ, ದೀಪಾ ಮಾಲಿಂಗಣ್ಣನವರ, ನಾಗರಾಜ ನಾಯ್ಕ, ಉಷಾ ಹೆಗಡೆ, ಪ್ರಿಯಾ ಸಂತೋಷ, ಪ್ರಸನ್ನ ಭಟ್ಟ, ಆರ್.ಡಿ. ಹೆಗಡೆ ಜಾನ್ಮನೆ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ರಾಘವೇಂದ್ರ ನಾಯ್ಕ, ನರಸಿಂಹ ಹೆಗಡೆ ಬಕ್ಕಳ, ಅನಂತ ಅಶೀಸರ, ಸದಾನಂದ ಭಟ್ಟ, ರಾಜೇಶ ಶೆಟ್ಟಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts