More

    75 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

    ಸಾಗರ: ಶ್ರೀ ಅಖಿಲ ಹವ್ಯಕ ಮಹಾಸಭಾ ನಿರಂತರ ಸಂಘಟನೆಯ ತತ್ವವನ್ನು ಅನುಸರಿಸಿ ಸಮಾಜದ ಮೂಲ ಆಶಯಗಳಿಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ ಕೆಕ್ಕಾರು ಹೇಳಿದರು.
    ಶ್ರೀ ರಾಘವೇಶ್ವರ ಸಭಾಭವನದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಸಾಗರ ಪ್ರಾಂತ ಹವ್ಯಕ ಪ್ರತಿಭೆಗಳಿಗಾಗಿ ಏರ್ಪಡಿಸಿದ್ದ ಸಾಂಸಕ್ರತಿಕ ಸ್ಪರ್ಧೆಯ ಪ್ರತಿಬಿಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ವಿವಿಧ ಕ್ಷೇತ್ರದ ಸಾಧಕರಾದ ಮಂಜಣ್ಣ ಕೈತೋಟ, ಡಾ. ಜಿ.ವಿ.ಹೆಗಡೆ, ಮಹಾಬಲಗಿರಿ ರಾವ್ ಅಮಚಿ, ಎಸ್.ಇ.ಗಣಪತಿ, ಸಿ.ಎ.ಸವಿತಾ ಸುಳಗೋಡು, ಎನ್.ವಿ.ಶಿಶಿರ ನೀಚಡಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ 75 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಸಹಕಾರ ರತ್ನ ಎಂ. ಹರನಾಥ್ ರಾವ್ ಪ್ರತಿಬಿಂಬ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ನ್ಯಾಯವಾದಿ ಶ್ರೀಪಾದ, ಸಹಕಾರಿ ಎ.ಒ.ರಾಮಚಂದ್ರರಾವ್, ರಾಮಚಂದ್ರಾಪುರ ಹವ್ಯಕ ಮಂಡಲದ ಅಧ್ಯಕ್ಷ ಪ್ರಕಾಶ್ ಬೇರಾಳ, ವೈದ್ಯ ಎಂ.ಕೆ.ಭಟ್, ರಾಜ್ಯ ಹೊಟೇಲ್ ಮಾಲೀಕರ ಸಂಘದ ಉಪಾಧ್ಯಕ್ಷ ಎಚ್.ಎನ್.ಉಮೇಶ್ ದೊಂಬೆ, ಸಾಗರ ಹವ್ಯಕ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರು, ಹವ್ಯಕ ಸಾಗರದ ಅಧ್ಯಕ್ಷ ರಾಮಚಂದ್ರ ರಾವ್ ಹಕ್ರೆ, ಮಹಾಸಭಾ ಪ್ರಮುಖರಾದ ಕೆ.ಎನ್.ಶ್ರೀಧರ, ನಾರಾಯಣ ಭಟ್ ಹುಳೇಗಾರು, ರಮೇಶ್ ಹಾರೆಗೊಪ್ಪ, ಹು.ಬಾ.ಅಶೋಕ, ರಾಜಲಕ್ಷ್ಮೀ, ಗುರು ಭೀಮನಕೋಣೆ, ಗಣಪತಿ ಜಟ್ಟಿಮನೆ, ಶ್ರೀಧರ ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts