More

    ವ್ಹಾ.. ಸೂಪರ್ ಮೂನ್​: ಎಷ್ಟೊಂದು ಸುಂದರ.. ಇಂದಿನ ಚಂದಿರ..!

    ಬೆಂಗಳೂರು: ಒಂದೆಡೆ ಚಂದ್ರಗ್ರಹಣ ಮತ್ತೊಂದೆಡೆ ಬುದ್ಧ ಪೂರ್ಣಿಮೆ, ರೆಡ್​ ಮೂನ್, ಸೂಪರ್ ಮೂನ್​. ಬಾನಂಗಳದಲ್ಲಿ ಒಂದೇ ದಿನ ಇವೆಲ್ಲವೂ ಮೇಳೈಸಿದ್ದು ಈ ದಿನದ ಚಂದಿರ ಎಂದಿಗಿಂತ ಸುಂದರ ಎಂಬಂತೆ ಕಾಣಿಸುತ್ತಿದ್ದಾನೆ.

    ಇಂದು ಜಗತ್ತಿನಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣದ ಜತೆಗೆ 2021ರಲ್ಲಿ ಇದೇ ಮೊದಲ ಸಲ ಚಂದ್ರ ಇಷ್ಟೊಂದು ಸಮೀಪದಲ್ಲಿ ಗೋಚರಿಸಿಕೊಳ್ಳುವ ಮೂಲಕ ಸೂಪರ್​ ಎನಿಸಿಕೊಂಡಿದ್ದಾನೆ. ಸೂಪರ್ ಮೂನ್ ಎಂದರೆ ಹುಣ್ಣಿಮೆ ದಿನ ಗೋಚರಿಸುವ ಸಾಮಾನ್ಯ ಚಂದ್ರನ ಗಾತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಳ್ಳುವುದು.

    ಇನ್ನು ಚಂದ್ರ ಗ್ರಹಣದ ಪರಿಣಾಮವಾಗಿ ರೆಡ್​ ಮೂನ್​ ಕೂಡ ಕಾಣಿಸಿಕೊಂಡಿದ್ದಾನೆ. ಭೂಮಿಯ ವಿರುದ್ಧ ಬದಿಗಳಲ್ಲಿ ಸೂರ್ಯ ಮತ್ತು ಚಂದ್ರರು ಇರುವಾಗ ಸೂರ್ಯನ ಬೆಳಕು ಭೂಮಿ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣ ಬಿದ್ದಾಗ ಕತ್ತಲಾವರಿಸುವುದಿಲ್ಲ. ಬದಲಾಗಿ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಚಂದ್ರನನ್ನು ರೆಡ್ ಬ್ಲಡ್ ಮೂನ್ ಎನ್ನುತ್ತಾರೆ.

    ಭಾರತದಲ್ಲಿ ಭಾಗಶಃ ಚಂದ್ರ ಗ್ರಹಣ ಅಪರಾಹ್ನ 3.15ರಿಂದ ಸಂಜೆ 6.23ರ ತನಕ ಗೋಚರಿಸಿದೆ. ಭಾರತೀಯ ಕಾಲಮಾನ ಪ್ರಕಾರ, ಪೂರ್ಣಗ್ರಹಣ ಸಂಜೆ 4.39ರಿಂದ ಶುರುವಾಗಿ ಸಂಜೆ 4.58ಕ್ಕೆ ಕೊನೆಯಗೊಂಡಿದೆ. ಪೋರ್ಟ್ ಬ್ಲೇರ್‌ನಲ್ಲಿ ಸಂಜೆ 5.38ರಿಂದ 45 ನಿಮಿಷ ಕಾಲ, ಪಶ್ಚಿಮ ಬಂಗಾಳದ ಮಾಲ್ಡಾ, ಒಡಿಶಾದ ಪುರಿಯಲ್ಲಿ ಸಂಜೆ 6.21ರ ಹೊತ್ತಿಗೆ 2 ನಿಮಿಷ ಚಂದ್ರ ಗ್ರಹಣ ಗೋಚರಿಸಿದೆ.

    ಏನಾಗುತ್ತೆ ವಾಟ್ಸ್​ಆ್ಯಪ್​, ಫೇಸ್​ಬುಕ್, ಟ್ವಿಟರ್ ಭವಿಷ್ಯ?; ಕೇಂದ್ರ ಸರ್ಕಾರದಿಂದ ಹೊರಬಿತ್ತು ಮತ್ತೊಂದು ಸೂಚನೆ..

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts