More

    ಕೆ.ಎಲ್​. ರಾಹುಲ್​ಗೆ ಮಾವ ಸುನೀಲ್​ ಶೆಟ್ಟಿ ಕೊಟ್ಟ ಗಿಫ್ಟ್​ ಏನು ಗೊತ್ತಾ?

    ಮುಂಬೈ: ಇತ್ತೀಚೆಗಷ್ಟೇ ಖ್ಯಾತ ಕ್ರಿಕೆಟಿಗ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆ ಖಂಡಾಲಾದಲ್ಲಿ ನಡೆದಿದೆ. ಈ ಮದುವೆಯಲ್ಲಿ ಬಾಲಿವುಡ್​ನ ಸಾಕಷ್ಟು ಸೆಲೆಬ್ರಿಟಿಗಳ ಜತೆಗೆ, ಭಾರತೀಯ ಕ್ರಿಕೆಟ್​ ತಂಡದ ಹಲವು ಆಟಗಾರರು ಹಾಜರಿದ್ದು, ರಾಹುಲ್​ ಮತ್ತು ಅಥಿಯಾಗೆ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಬಾಯ್ಕಾಟ್ ಬಗ್ಗೆ ನಟಿ ಕರೀನಾ ಕಪೂರ್ ಮಾತು

    ಇದೀಗ ಈ ದಂಪತಿಗೆ ಯಾರ್ಯಾರು, ಏನೇನು ಗಿಫ್ಟ್​ಗಳನ್ನು ಕೊಟ್ಟಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆದಿದೆ. ಮೂಲಗಳ ಪ್ರಕಾರ, ಈ ದಂಪತಿಗೆ ದುಬಾರಿ ಗಿಫ್ಟ್​ಗಳ ಸುರಿಮಳೆಯೇ ಆಗಿದೆಯಂತೆ. ಕ್ರಿಕೇಟ್, ಸಿನಿಮಾ ಎರಡು ಕ್ಷೇತ್ರಗಳಿಂದ ಸ್ಟಾರ್ ಜೋಡಿಗೆ ಐಷಾರಾಮಿ ಉಡುಗೊರೆಗಳು ಸಿಕ್ಕಿವೆಯಂತೆ.

    ಅದರಲ್ಲೂ ರಾಹುಲ್​ ಮಾವ ಮತ್ತು ಅಥಿಯಾ ಅವರ ತಂದೆ ಸುನೀಲ್​ ಶೆಟ್ಟಿ 50 ಕೋಟಿ ಮೌಲ್ಯದ ದುಬಾರಿ ಫ್ಲಾಟ್​ ನೀಡಿ, ಹೊಸ ಜೋಡಿಗೆ ಆಶೀರ್ವಾದ ಮಾಡಿದ್ದಾರಂತೆ.

    ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬದಂದು ಕಬ್ಜ; ಬಿಡುಗಡೆ ದಿನಾಂಕ ಘೋಷಣೆ

    ಇನ್ನು, ಬಾಲಿವುಡ್​ ನಟ ಸಲ್ಮಾನ್ ಖಾನ್, ಆಥಿಯಾಗೆ 1.6 ಕೋಟಿ ರೂ. ಮೌಲ್ಯದ AUDI ಕಾರ್ ಗಿಫ್ಟ್ ಕೊಟ್ಟಿದ್ದಾರಂತೆ. ಜಾಕಿ ಶ್ರಾಫ್ ಮತ್ತು ಅರ್ಜುನ್ ಕಪೂರ್ ದುಬಾರಿ ಮೌಲ್ಯದ ವಾಚ್ ಮತ್ತು ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದಾರಂತೆ. ಇನ್ನು, ರಾಹುಲ್​ಗೆ ಧೋನಿ ಕಡೆಯಿಂದ 80 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ ಬೈಕ್ ಗಿಫ್ಟ್ಟ್ ಸಿಕ್ಕರೆ, ವಿರಾಟ್​ ಕೋಹ್ಲಿ ದಂಪತಿಯು 2.70 ಕೋಟಿ ರೂ. ಮೊತ್ತದ ಬಿ.ಎಂ.ಡಬ್ಲ್ಯು ಕಾರ್ ಗಿಫ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts