More

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

    ಮೈಸೂರು: ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೇನೂ ಬರವಿಲ್ಲ. ಈಗಾಗಲೇ ಹಲವು ನಟ-ನಟಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಆ ಸಾಲಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸಹ ಸೇರಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರ ಮದುವೆ ಇಂದು ಬೆಳಿಗ್ಗೆ ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮುಗಿದಿದೆ.

    ಇದನ್ನೂ ಓದಿ: ನಿಮ್ಮ ಸಮಸ್ಯೆ ಏನೆಂದು ಹೇಳದೆ ನಿಂದಿಸಬೇಡಿ: ಟ್ರೋಲರ್​ಗಳ ಬಗ್ಗೆ ರಶ್ಮಿಕಾ ಅಸಮಾಧಾನ

    ವಸಿಷ್ಠ ಮತ್ತು ಹರಿಪ್ರಿಯಾ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕಳೆದ ವರ್ಷದ ಕೊನೆಯಲ್ಲಿ ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ, ನಿಶ್ಚಿತಾರ್ಥ ಮಾಡಿಕೊಂಡು, ಸದ್ಯದಲ್ಲೇ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.

    ಅದರಂತೆ ಇಂದು ಸ್ಮಾರ್ಥ ಸಂಪ್ರದಾಯದಂತೆ ಮದುವೆ ನಡೆದಿದೆ. ಬೆಳಿಗ್ಗೆ 8 ಗಂಟೆಯಿಂದ ಮದುವೆ ಶಾಸ್ತ್ರಗಳು ಶುರುವಾಗಿದ್ದು, 9.50 ರಿಂದ 10 .45 ರವರೆಗಿನ ಮೀನ ಲಗ್ನದಲ್ಲಿ ಮದುವೆ ನಡೆದಿದೆ.

    ಇದನ್ನೂ ಓದಿ: VIDEO | ‘ಐ ಲವ್​ ಯೂ ಪೆಪ್ಸಿ’ ಎನ್ನುತ್ತಲೇ ಸರ್​ಪ್ರೈಸ್​ ಕೊಟ್ಟ ಯಶ್; ಇನ್ಮುಂದೆ ರಾಕಿಂಗ್ ಸ್ಟಾರ್ ಪೆಪ್ಸಿ ಕಂಪೆನಿಯ ರಾಯಭಾರಿ

    ಈ ಮದುವೆಯು ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆದಿದೆ. ಚಿತ್ರರಂಗದಿಂದ ಶಿವರಾಜಕುಮಾರ್​ ಮತ್ತು ಡಾಲಿ ಧನಂಜಯ್ ಈ ಮದುವೆಯಲ್ಲಿ ಭಾಗವಹಿಸಿ ವಸಿಷ್ಠ ಮತ್ತು ಹರಿಪ್ರಿಯಾ ಅವರಿಗೆ ಶುಭ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts