More

    ಸುನೀಲ್​ ಗಾವಸ್ಕರ್​ಗೆ 71ನೇ ಜನ್ಮದಿನದ ಸಂಭ್ರಮ

    ಬೆಂಗಳೂರು: ಭಾರತೀಯ ಕ್ರಿಕೆಟ್​ ಲೋಕದ ಮೊದಲ ಬ್ಯಾಟಿಂಗ್​ ಸೂಪರ್​ಸ್ಟಾರ್​ ಸುನೀಲ್​ ಗಾವಸ್ಕರ್​ ಅವರಿಗೆ ಶುಕ್ರವಾರ 71ನೇ ಜನ್ಮದಿನದ ಸಂಭ್ರಮ. ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿಗೆ ಮುನ್ನ ಜಾಗತಿಕ ಕ್ರೀಡಾಲೋಕದಲ್ಲಿ ಭಾರತದ ಬ್ಯಾಟಿಂಗ್​ನ ಶಕ್ತಿಯನ್ನು ಪರಿಚಯಿಸಿದ್ದ ಗಾವಸ್ಕರ್​, ಸನ್ನಿ ಮತ್ತು ಲಿಟ್ಟಲ್​ ಮಾಸ್ಟರ್​ ಆಗಿ ಖ್ಯಾತಿ ಪಡೆದಿದ್ದರು. ವೀಕ್ಷಕವಿವರಣೆಯ ಮೂಲಕ ವಿಶ್ಲೇಷಕರಾಗಿ ಈಗಲೂ ಕ್ರಿಕೆಟ್​ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

    1949ರ ಜುಲೈ 10ರಂದು ಜನಿಸಿದ ಸುನೀಲ್​ ಗಾವಸ್ಕರ್​, 1971ರಿಂದ 1987ರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 10 ಸಾವಿರ ರನ್​ ದಾಟಿದ ಮೊದಲ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆ ಅವರದು. ಅವರ 34 ಟೆಸ್ಟ್​ ಶತಕಗಳು ಈ ಹಿಂದೆ ವಿಶ್ವದಾಖಲೆಯಾಗಿತ್ತು. ಒಟ್ಟಾರೆ 125 ಟೆಸ್ಟ್​ ಪಂದ್ಯಗಳಲ್ಲಿ 10,122 ರನ್​ ಬಾರಿಸಿದ್ದಾರೆ. 108 ಏಕದಿನ ಪಂದ್ಯಗಳನ್ನು ಆಡಿ ಏಕೈಕ ಶತಕದ ಸಹಿತ 3,092 ರನ್​ ಗಳಿಸಿದ್ದಾರೆ. ಟೆಸ್ಟ್​, ಏಕದಿನದಲ್ಲಿ ತಲಾ ಒಂದೊಂದು ವಿಕೆಟ್​ ಕೂಡ ಗಳಿಸಿದ್ದಾರೆ. 1983ರಲ್ಲಿ ಏಕದಿನ ವಿಶ್ವಕಪ್​ ಜಯಿಸಿ ಭಾರತೀಯ ಕ್ರಿಕೆಟ್​ನ ಚಹರೆಯನ್ನೇ ಬದಲಿಸಿದ ಕಪಿಲ್​ ದೇವ್​ ಬಳಗದಲ್ಲಿ ಸುನೀಲ್​ ಗಾವಸ್ಕರ್​ ಕೂಡ ಆಟಗಾರರಾಗಿದ್ದರು.

    ಇದನ್ನೂ ಓದಿ: ಅಭಿಮಾನಿಗೆ ಸಹಾಯಹಸ್ತ ಚಾಚಿದ ಟೆನಿಸ್​ ತಾರೆ ಬೌಚಾರ್ಡ್​!

    ಟೆಸ್ಟ್​ ಪಂದ್ಯದ ಎರಡೂ ಇನಿಂಗ್ಸ್​ಗಳಲ್ಲಿ ಶತಕ ಸಿಡಿಸಿದ ಸಾಧನೆಯನ್ನು 3 ಬಾರಿ ಮಾಡಿದ ಏಕೈಕ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆ ಈಗಲೂ ಗಾವಸ್ಕರ್​ ಹೆಸರಿನಲ್ಲಿದೆ. ವೇಗದ ಬೌಲಿಂಗ್​ ವಿರುದ್ಧ, ಅದರಲ್ಲೂ ವೆಸ್ಟ್​ ಇಂಡೀಸ್​ನ ಅಪಾಯಕಾರಿ ವೇಗಿಗಳ ವಿರುದ್ಧದ ಪ್ರದರ್ಶಿಸಿದ ಅಮೋಘ ಬ್ಯಾಟಿಂಗ್​ ತಂತ್ರಗಾರಿಕೆಗಾಗಿ ಗಾವಸ್ಕರ್​ ಟೆಸ್ಟ್​ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಾರೆ. ವಿಂಡೀಸ್​ನ ಪ್ರಚಂಡ ವೇಗಿಗಳ ಎದುರು ಅವರು 65.45 ಸರಾಸರಿಯಲ್ಲಿ ರನ್​ ಗಳಿಸಿದ್ದರು ಎಂಬುದು ಗಮನಾರ್ಹ. ಭಾರತ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರೂ, ಅವರ ಸಾರಥ್ಯದಲ್ಲಿ ಹೆಚ್ಚಿನ ಯಶಸ್ಸು ಲಭಿಸಿಲ್ಲ.

    ಪದ್ಮಶ್ರೀ, ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿರುವ ಗಾವಸ್ಕರ್​, ಐಸಿಸಿಯ ಹಾಲ್​ ಆಫ್​ ಫೇಮ್​ಗೂ ಸೇರ್ಪಡೆಗೊಂಡಿದ್ದಾರೆ. ಬಿಸಿಸಿಐನಿಂದ 2012ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಲ್​ ಸಿಕೆ ನಾಯ್ಡು ಪ್ರಶಸ್ತಿಗೆ ಭಾಜನರಾಗಿದ್ದರು.

    ಕ್ರಿಕೆಟ್​ಗಾಗಿ ಚಾಕೊಲೇಟ್​ ಪ್ರೀತಿ ತ್ಯಜಿಸಿದ್ದರು ಮಿಥಾಲಿ ರಾಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts