More

    ಕ್ರಿಕೆಟ್​ಗಾಗಿ ಚಾಕೊಲೇಟ್​ ಪ್ರೀತಿ ತ್ಯಜಿಸಿದ್ದರು ಮಿಥಾಲಿ ರಾಜ್​!

    ಬೆಂಗಳೂರು: ಪುರುಷರ ಕ್ರಿಕೆಟ್​ನಲ್ಲಿ ಸಚಿನ್​ ತೆಂಡುಲ್ಕರ್​ ಹೇಗೋ, ಅದೇ ರೀತಿ ಮಹಿಳಾ ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್​ ದೊಡ್ಡ ಹೆಸರು. ಸಚಿನ್​ ಅವರಿಗಿಂತ ಬೇಗನೆ ಅಂದರೆ 14ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಮಿಥಾಲಿ ರಾಜ್​ 2 ದಶಕಗಳ ನಂತರವೂ ಕ್ರಿಕೆಟ್​ಗೆ ವಿವಿಧ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಅವರು ಹಲವಾರು ತ್ಯಾಗಗಳನ್ನೂ ಮಾಡಿದ್ದಾರೆ. ಅದರಲ್ಲಿ ಚಾಕೊಲೇಟ್​ ಕೂಡ ಒಂದಾಗಿದೆ ಎಂಬುದು ವಿಶೇಷ!

    ಬಾಲ್ಯದಲ್ಲಿ ಎಲ್ಲರಂತೆ ನಾನು ಚಾಕೊಲೇಟ್​ಗಳನ್ನು ಬಹಳಷ್ಟು ಇಷ್ಟಪಡುತ್ತಿದ್ದೆ. ಆದರೆ ಕ್ರಿಕೆಟ್​ ವೃತ್ತಿಜೀವನಕ್ಕಾಗಿ ನಾನು ಅವುಗಳನ್ನು ತ್ಯಜಿಸಬೇಕಾಯಿತು ಎಂದು 37 ವರ್ಷದ ಮಿಥಾಲಿ ರಾಜ್​ ಹೇಳಿಕೊಂಡಿದ್ದಾರೆ. ಭಾರತ ಪರ 209 ಏಕದಿನ ಮತ್ತು 10 ಟೆಸ್ಟ್​ ಪಂದ್ಯಗಳನ್ನು ಅವರು ಆಡಿದ್ದಾರೆ. 89 ಟಿ20 ಪಂದ್ಯಗಳನ್ನೂ ಆಡಿದ್ದು, ಈಗಾಗಲೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ. ರಾಜಸ್ಥಾನದಲ್ಲಿ ಜನಿಸಿದರೂ, ಆಂಧ್ರಪ್ರದೇಶದಲ್ಲಿ ಬೆಳೆದ ಮಿಥಾಲಿ ರಾಜ್​ ಭರತನಾಟ್ಯ ಕಲಾವಿದೆಯಾಗುವ ಹಂಬಲ ಹೊಂದಿದ್ದರು. ಆದರೆ ಅವರ ತಂದೆ ಕ್ರಿಕೆಟ್​ ಆಟಗಾರ್ತಿಯಾಗುವಂತೆ ಪ್ರೇರೇಪಿಸಿದ್ದರು. ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸವಾಗಿದೆ.

    ಇದನ್ನೂ ಓದಿ:ಶ್ರೀಶಾಂತ್​ ಆಯ್ಕೆ ಮಾಡಿದ ಭಾರತ ಟಿ20 ತಂಡಕ್ಕೆ ಕೊಹ್ಲಿಯಲ್ಲ, ರೋಹಿತ್​ ಶರ್ಮ ನಾಯಕ!

    ಮುಂದಿನ ವರ್ಷ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಿದ್ಧತೆಯಲ್ಲಿರುವ ಮಿಥಾಲಿ ರಾಜ್​ ಪ್ರಶಸ್ತಿ ಗೆಲುವಿನೊಂದಿಗೆ ನಿವೃತ್ತಿ ಹೊಂದುವ ಹಂಬಲದಲ್ಲಿದ್ದಾರೆ. ಮಿಥಾಲಿ ರಾಜ್​ ಅವರ ಜೀವನಾಧರಿತ ‘ಶಭಾಷ್​ ಮಿಥು’ ಸಿನಿಮಾ ಈಗಾಗಲೆ ಚಿತ್ರೀಕರಣ ಆರಂಭಿಸಿದ್ದು, ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ.

    ಅಭಿಮಾನಿಗೆ ಸಹಾಯಹಸ್ತ ಚಾಚಿದ ಟೆನಿಸ್​ ತಾರೆ ಬೌಚಾರ್ಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts