More

    ಶ್ರೀಶಾಂತ್​ ಆಯ್ಕೆ ಮಾಡಿದ ಭಾರತ ಟಿ20 ತಂಡಕ್ಕೆ ಕೊಹ್ಲಿಯಲ್ಲ, ರೋಹಿತ್​ ಶರ್ಮ ನಾಯಕ!

    ಬೆಂಗಳೂರು: ಭಾರತೀಯ ಕ್ರಿಕೆಟ್​ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡಿರುವ ನಡುವೆ ವಿವಿಧ ಹಾಲಿ-ಮಾಜಿ ಕ್ರಿಕೆಟಿಗರು ತಮ್ಮ ಕನಸಿನ ತಂಡಗಳನ್ನು ಆಯ್ಕೆ ಮಾಡುತ್ತ ಸಮಯ ಕಳೆಯುತ್ತಿದ್ದಾರೆ. ಈ ಸಾಲಿಗೆ ಈಗ ಎಸ್​. ಶ್ರೀಶಾಂತ್​ ಕೂಡ ಸೇರ್ಪಡೆಗೊಂಡಿದ್ದಾರೆ. ಐಪಿಎಲ್​ ಸ್ಪಾಟ್​ ಫಿಕ್ಸಿಂಗ್​ ಪ್ರಕರಣದ 7 ವರ್ಷಗಳ ನಿಷೇಧ ಶಿಕ್ಷೆಯನ್ನು ಸೆಪ್ಟೆಂಬರ್​ನಲ್ಲಿ ಮುಗಿಸಿ ಮುಂದಿನ ದೇಶೀಯ ಕ್ರಿಕೆಟ್​ ಋತುವಿನ ಮೂಲಕ ಮರಳುವ ಹಂಬಲದಲ್ಲಿರುವ ಕೇರಳದ ವೇಗಿ ಶ್ರೀಶಾಂತ್​, ತಮ್ಮ ಆಯ್ಕೆಯ ಭಾರತದ ಸಾರ್ವಕಾಲಿಕ ಟಿ20 ತಂಡವನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಅವರು ಹಾಲಿ ನಾಯಕ ವಿರಾಟ್​ ಕೊಹ್ಲಿ ಅಥವಾ ಟಿ20 ವಿಶ್ವಕಪ್​ ವಿಜೇತ ಮಾಜಿ ನಾಯಕ ಎಂಎಸ್​ ಧೋನಿ ಅವರನ್ನಾಗಲಿ ನಾಯಕರನ್ನಾಗಿ ಹೆಸರಿಲ್ಲ ಎಂಬುದು ಅಚ್ಚರಿಯ ಅಂಶವಾಗಿದೆ.

    ಸಂದರ್ಶನವೊಂದರ ವೇಳೆ ಭಾರತದ ಟಿ20 ತಂಡವನ್ನು ಹೆಸರಿಸಿರುವ 37 ವರ್ಷದ ಶ್ರೀಶಾಂತ್, ಮುಂಬೈ ಬ್ಯಾಟ್ಸ್​ಮನ್​ ರೋಹಿತ್​ ಶರ್ಮ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕೊಹ್ಲಿ ಬಗ್ಗೆ ಅಪಾರವಾದ ಗೌರವವಿದ್ದರೂ, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ ಉತ್ತಮ ಯಶಸ್ಸು ಕಂಡಿರುವ ರೋಹಿತ್​ ಶರ್ಮ ಅವರೇ ಟಿ20 ತಂಡಕ್ಕೆ ನಾಯಕರಾಗುವುದು ಸೂಕ್ತ ಎಂದಿದ್ದಾರೆ. ತಂಡದ ಆರಂಭಿಕರನ್ನಾಗಿ ರೋಹಿತ್​ ಶರ್ಮ ಮತ್ತು ಶಿಖರ್​ ಧವನ್​ ಅವರನ್ನು ಆಯ್ಕೆ ಮಾಡಿದ್ದರೆ, ವಿರಾಟ್​ ಕೊಹ್ಲಿಗೆ ವನ್​ಡೌನ್​ ಬ್ಯಾಟ್ಸ್​ಮನ್​ ಸ್ಥಾನ ನೀಡಿದ್ದಾರೆ.

    ಇದನ್ನೂ ಓದಿ: ಏಷ್ಯಾಕಪ್ ರದ್ದು, ಗಂಗೂಲಿ ಘೋಷಣೆ

    ಎಡಗೈ ಆಟಗಾರ ಸುರೇಶ್​ ರೈನಾ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀಶಾಂತ್​, ಕನ್ನಡಿಗ ಕೆಎಲ್​ ರಾಹುಲ್​ಗೂ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಎಂಎಸ್​ ಧೋನಿ ತಂಡದ ವಿಕೆಟ್​ ಕೀಪರ್​ ಆಗಿದ್ದಾರೆ. ತಮಗೂ ತಂಡದಲ್ಲಿ ಸ್ಥಾನ ನೀಡಿರುವ ಅವರು ಮತ್ತೋರ್ವ ವೇಗದ ಬೌಲರ್​ ಆಗಿ ಜಸ್​ಪ್ರೀತ್​ ಬುಮ್ರಾ ಅವರನ್ನು ಆರಿಸಿದ್ದಾರೆ. ಆಲ್ರೌಂಡರ್​ಗಳಾಗಿ ಹಾರ್ದಿಕ್​ ಪಾಂಡ್ಯ ಮತ್ತು ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದಾರೆ. ಚೈನಾಮನ್​ ಬೌಲರ್​ ಕುಲದೀಪ್​ ಯಾದವ್​ ತಂಡದಲ್ಲಿರುವ ಏಕೈಕ ತಜ್ಱ ಸ್ಪಿನ್​ ಬೌಲರ್ ಆಗಿದ್ದಾರೆ.

    ಶ್ರೀಶಾಂತ್​ ಆಯ್ಕೆ ಮಾಡಿದ ಭಾರತದ ಟಿ20 ತಂಡ: ರೋಹಿತ್​ ಶರ್ಮ (ನಾಯಕ), ಶಿಖರ್​ ಧವನ್​, ವಿರಾಟ್​ ಕೊಹ್ಲಿ, ಸುರೇಶ್​ ರೈನಾ, ಕೆಎಲ್​ ರಾಹುಲ್​, ಎಂಎಸ್​ ಧೋನಿ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಎಸ್​. ಶ್ರೀಶಾಂತ್​.

    PHOTOS| ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಪುತ್ರಿಯ ಮೊದಲ ಚಿತ್ರ, ಹೆಸರು ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts