More

    ಸೀಯಾಳ, ಕಬ್ಬಿನಹಾಲಿಗೆ ಬೇಡಿಕೆ, ಬೇಸಿಗೆ ಧಗೆಗೆ ಹೆಚ್ಚಿದ ದಾಹ ತಂಪು ಪಾನಿಯಗಳಿಗೆ ಮೊರೆ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್

    ಬಿಸಿಲ ಬೇಗೆಯಲ್ಲಿ ಪ್ರಾಣಿ ಪಕ್ಷಿಗಳು ದಾಹ ತೀರಿಸಲು ಪರದಾಟ ನಡೆಸುತ್ತಿದ್ದರೆ ಇತ್ತ ಜನರೂ ಹೈರಾಣಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಬಿಸಿಲ ಬೇಗೆ ಮಿತಿ ಮೀರುತ್ತಿದ್ದಂತೆ ರಸ್ತೆ ಬದಿಯ ತಂಪು ಪಾನೀಯಗಳ ಮಾರಾಟದ ಅಂಗಡಿಗಳು ಹೆಚ್ಚಾಗುತ್ತಿದೆ. ಎಳನೀರು, ಮಜ್ಜಿಗೆ, ತಾಳೆಹಣ್ಣು, ಹಣ್ಣು ಹಂಪಲುಗಳ ಅಂಗಡಿ ಹಾಗೂ ಕಬ್ಬಿನಹಾಲಿಗೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ.
    ಕರೊನಾ ಕಾಲದಿಂದ ಸ್ವಲ್ಪ ತಂಪು ಪಾನೀಯದಿಂದ ದೂರ ಸರಿದಿದ್ದ ಜನ ಬಿಸಿಲ ತಾಪಕ್ಕೆ ಸೋತು ಮತ್ತೆ ತಂಪು ಪಾನೀಯಗಳ ದಾಸರಾಗುತ್ತಿದ್ದಾರೆ.

    ಎಳನೀರಿಗೆ ಹೆಚ್ಚಿದ ಬೇಡಿಕೆ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಉದ್ದಕ್ಕೂ ಸಾಲು ಸಾಲು ಎಳನೀರಿನ ಮಾರಾಟದ ಅಂಗಡಿಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಪ್ರಯಾಣಿಕರು ಬಿಸಿಲ ತಾಪಕ್ಕೆ ಹೆಚ್ಚಾಗಿ ಎಳನೀರನ್ನು ಸೇವಿಸುತ್ತಿರುವುದರಿಂದ ಎಳನೀರಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗುತ್ತಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಿಂದ ತರಿಸಿಕೊಳ್ಳಲಾಗುವ ಎಳನೀರು ಒಂದಕ್ಕೆ 35 ರಿಂದ 40 ರೂಪಾಯಿಗೆ ಮಾರಾಟವಾಗುತ್ತಿದೆ. ದ.ಕ ಹಾಗೂ ಉಡುಪಿಯ ಎಳನೀರು 40ರಿಂದ 45 ರೂಪಾಯಿಗೂ ಮಾರಾಟವಾಗುತ್ತಿದೆ. ಕೆಲವೊಂದು ಕಡೆ 50 ರೂಪಾಯಿಗೂ ಕರಾವಳಿಯ ಎಳನೀರು ಮಾರಾಟವಾಗುತ್ತಿದೆ. ಇನ್ನು ಕಬ್ಬಿನ ಹಾಲಿಗೂ ಭಾರಿ ಬೇಡಿಕೆಯಿದ್ದು ಅಲ್ಲಲ್ಲಿ ಅಂಗಡಿಗಳಿದ್ದು ವ್ಯಾಪಾರವೂ ಜೋರಾಗಿದೆ.

    ಕರಾವಳಿ ಭಾಗದಲ್ಲಿ ಪ್ರತೀ ನಿತ್ಯ 35ರಿಂದ 40 ಡಿಗ್ರಿ ವರೆಗೆ ಉಷ್ಟಾಂಶ ಏರಿಕೆಯಾಗುತ್ತಿದೆ. ಬಿಸಿಲ ಬೇಗೆಗೆ ಜನ ಸಂಕಟವನ್ನು ಅನುಭವಿಸುವಂತಾಗಿದೆ. ಇದರಿಂದ ತಮ್ಮ ದೇಹವನ್ನು ತಂಪಾಗಿಸಲು ಜನ ತಂಪು ಪಾನೀಯವನ್ನು ಹೆಚ್ಚಾಗಿ ಸೇವಿಸುವಂತಾಗಿದೆ.
    ಬಿಸಿಲ ತಾಪ ಏರಿಕೆಯಾಗುತ್ತಿದ್ದು ಇದು ನೇರವಾಗಿ ಆರೋಗ್ಯದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ದೇಹದಲ್ಲಿ ನೀರಿನ ಸತ್ವ ಕಡಿಮೆಯಾಗಿ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಿದೆ. ಈ ಸಂದರ್ಭ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಉತ್ತಮ.
    ಸ್ನೇಹ ಅರುಣ್ ಭಂಡಾರಿ, ಕಿರಿಯ ಪ್ರಯೋಗಶಾಲಾ ತಂತ್ರಜ್ಞೆ

    ಕರಾವಳಿಯಾದ್ಯಂತ ಎಳನೀರಿಗೆ ಹೆಚ್ಚಿನ ಬೇಡಿಕೆಯಿದೆ. ನಿತ್ಯ ತಾಪಮಾನ ಹೆಚ್ಚಾಗುತ್ತಿದ್ದಂತೆ ಎಳನೀರಿಗೂ ಬೇಡಿಕೆ ಹೆಚ್ಚಾಗಿದೆ. ಅದರಂತೆ ಇತರ ಜ್ಯೂಸ್ ಹಾಗೂ ತಂಪು ಪಾನೀಯಗಳ ಅಂಗಡಿಗಳು ರಸ್ತೆ ಇಕ್ಕೆಲಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
    ದಿನೇಶ್ ಪಾಪು ಮುಂಡ್ಕೂರು, ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts