More

    ‘ಶುಗರ್​ಲೆಸ್’ ಚಿತ್ರೀಕರಣ ಮುಕ್ತಾಯ … ಗೆಟಪ್​ ಬದಲಿಸಿದ ಪೃಥ್ವಿ

    ಬೆಂಗಳೂರು: ಲಾಕ್​ಡೌನ್​ ನಂತರ ಪ್ರಾರಂಭವಾದ ಸಿನಿಮಾಗಳ ಪೈಕಿ ಕೆಲವು ಸಿನಿಮಾಗಳು ಸದ್ದಿಲ್ಲದೆ ಮುಗಿದಿವೆ ಮತ್ತು ಇನ್ನೂ ಕೆಲವು ಸಿನಿಮಾಗಳು ಮುಕ್ತಾಯದ ಹಂತಕ್ಕೆ ಬಂದಿವೆ. ಮುಗಿದಿರುವ ಚಿತ್ರಗಳ ಸಾಲಿಗೆ ಇದೀಗ ‘ಶುಗರ್​ಲೆಸ್​’ ಸಹ ಸೇರಿಕೊಂಡಿದೆ.

    ಇದನ್ನೂ ಓದಿ: ‘ಶುಗರ್​ಲೆಸ್​’ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತವಾಯ್ತು …

    ಈ ಹಿಂದೆ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನು ನಿರ್ಮಿಸಿದ್ದ ಶಶಿಧರ ಕೆ.ಎಂ, ಮೊದಲ ಬಾರಿಗೆ ಕಥೆ ಬರೆದು ನಿರ್ದೇಶಿಸಿರುವ ಚಿತ್ರ ‘ಶುಗರ್​ಲೆಸ್​’. ಬರೀ ಕಥೆ ಮತ್ತು ನಿರ್ದೇಶನವಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯೂ ಅವರದ್ದೇ. ಈ ಚಿತ್ರಕ್ಕೆ ನಲವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಇದೀಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿದೆ.

    ಇದೀಗ ಚಿತ್ರೀಕರಣ ಮುಗಿದಿರುವ ಹಿನ್ನೆಲೆಯಲ್ಲಿ ನಟ ಪೃಥ್ವಿ ಅಂಬರ್​ ತಮ್ಮ ಗೆಟಪ್​ ಬದಲಿಸಿದ್ದಾರೆ. ಈ ಚಿತ್ರದಲ್ಲಿ ಬೇರೆ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ, ಈ ಚಿತ್ರದ ಚಿತ್ರೀಕರಣವನ್ನು ಮುಗಿಸಿ, ‘ಶಿವಪ್ಪ’ ಚಿತ್ರಕ್ಕಾಗಿ ಇನ್ನೊಂದು ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ‘ಶಿವಪ್ಪ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ‘ಅಗ್ನಿಪ್ರವ’ ಚಿತ್ರಕ್ಕೆ ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್ ಕ್ಲಾಪ್

    ಡಯಾಬಿಟಿಸ್​ ಇರುವ ವ್ಯಕ್ತಿಯೊಬ್ಬ ಅನುಭವಿಸುವ ಸಮಸ್ಯೆಗಳನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರದಲ್ಲಿ ಪೃಥ್ವಿಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್​​ ನಟಿಸಿದ್ದು, ಮಿಕ್ಕಂತೆ ದತ್ತಣ್ಣ, ರಾಕ್​ಲೈನ್​ ಸುಧಾಕರ್​ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಲವಿತ್​ ಛಾಯಾಗ್ರಹಣ ಮಾಡಿದ್ದು, ಅನೂಪ್​ ಸೀಳಿನ್​ ಸಂಗೀತ ಸಂಯೋಜಿಸಿದ್ದಾರೆ.

    ಕೀರ್ತಿ ಸುರೇಶ್​ ಮೊದಲ ತೆಲುಗು ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts