More

    ಸುರಿವ ಮಳೆಯಲ್ಲೇ ರಸ್ತೆಯಲ್ಲಿ ನಿಂತು ಬಸ್​ ಅಡ್ಡಗಟ್ಟಿದ ವಿದ್ಯಾರ್ಥಿನಿಯರು; ಅವರ ಬೇಡಿಕೆ ಅದೊಂದೇ..

    ಕಲಬುರಗಿ: ಭಾರಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆಗಿಳಿದ ವಿದ್ಯಾರ್ಥಿನಿಯರು ಸುರಿಯುವ ಮಳೆಯಲ್ಲೇ ಬಸ್​ವೊಂದನ್ನು ಅಡ್ಡಗಟ್ಟಿ ಘೋಷವಾಕ್ಯಗಳನ್ನು ಕೂಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಪಟ್ಟಣದ ಬಸ್​ ನಿಲ್ದಾಣದಲ್ಲಿ ಈ ಸನ್ನಿವೇಶ ಕಂಡುಬಂದಿತ್ತು.

    ಇವರೆಲ್ಲರೂ ಸೇಡಂ ತಾಲೂಕಿನ ಬೊಂದೆಂಪಲ್ಲಿ, ಖಂಡೆರಾಯನಪಲ್ಲಿ ತಾಂಡಾದ ವಿದ್ಯಾರ್ಥಿನಿಯರು. ತಮ್ಮ ಊರಿಗೆ ಬಸ್​ ಸೌಕರ್ಯ ಇಲ್ಲದ್ದರಿಂದ ಐದಾರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ್ದರಿಂದ ಈ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.

    ಇದನ್ನೂ ಓದಿ: ಐದು ದಿನ ಶವಗಳ ಜತೆಗಿದ್ದ ಎರಡೂವರೆ ವರ್ಷದ ಮಗುವಿಗೆ ಇಂದು ರಕ್ತಪರೀಕ್ಷೆ!; ಒಂದೇ ಕುಟುಂಬದ ಐವರ ಸಾವಿನ ಪ್ರಕರಣ

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷರು ಸೇಡಂ ತಾಲೂಕಿನವರೇ ಆಗಿದ್ದರೂ ನಮ್ಮ ಊರಿಗೆ ಬಸ್ ಸೌಲಭ್ಯ ಕಲ್ಪಿಸಿಲ್ಲ ಎಂದು ರೋಸಿಹೋಗಿರುವ ವಿದ್ಯಾರ್ಥಿನಿಯರು ಹೀಗೆ ಪ್ರತಿಭಟನೆ ನಡೆಸಿ ಬಸ್​ ಸೌಕರ್ಯ ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

    ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ

    ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts