More

    ಪ್ರಾದೇಶಿಕ ವಿಮಾನ ಸಂಚಾರ ಮತ್ತೆ ಶುರು; ಲಾಕ್​ಡೌನ್​ ಕಾರಣಕ್ಕೆ ಅಲ್ಲಲ್ಲೇ ಸಿಲುಕಿದ್ದ ವಿದ್ಯಾರ್ಥಿಗಳು, ವಲಸಿಗರೇ ಮೊದಲ ವಿಮಾನದ ಪ್ರಯಾಣಿಕರು

    ನವದೆಹಲಿ: ಕರೊನಾ ಸೋಂಕಿನ ಕಾರಣಕ್ಕೆ ದೇಶಾದ್ಯಂತ ವಾರಗಳ ಕಾಲ ರದ್ದುಗೊಂಡಿದ್ದ ವಿಮಾನ ಸಂಚಾರ ಮತ್ತೆ ಶುರುವಾಗಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲೂ ಮೊದಲ ವಿಮಾನದಲ್ಲಿ ಅಲ್ಲಲ್ಲೇ ಸಿಲುಕಿದ್ದ ವಿದ್ಯಾರ್ಥಿಗಳು, ವಲಸಿಗರೇ ಪ್ರಯಾಣಿಕರು. ದೆಹಲಿ, ಬೆಂಗಳೂರು, ಮುಂಬೈ ಸೇರಿ ಬಹುತೇಕ ನಿಲ್ದಾಣಗಳಲ್ಲಿ ವಲಸಿಗರು, ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿತ್ತು.

    ಇದನ್ನೂ ಓದಿ:  ವಿಮಾನ ಸಂಚಾರ ಪುನಾರಂಭ; ಲಾಕ್​ಡೌನ್ ಬಳಿಕ ಮೊದಲ ಬಾರಿಗೆ ವೈಮಾನಿಕ ಸೇವೆ ಶುರು, ಹಲವು ರಾಜ್ಯಗಳ ಆಕ್ಷೇಪ

    ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳ್ಳಂಬೆಳಗ್ಗೆ ಮೊದಲ ವಿಮಾನಕ್ಕೆ ಹೊರಡಲು ಆಗಮಿಸಿದ ನೂರಾರು ಜನ ತಮ್ಮ ಸ್ವಂತ ಊರುಗಳಿಗೆ, ಉದ್ಯೋಗ ಸ್ಥಳಗಳಿಗೆ ತೆರಳುವುದಕ್ಕೆ ಕಾತರರಾಗಿದ್ದ ದೃಶ್ಯ ಕಂಡುಬಂತು. ಬಹುತೇಕ ಎರಡು ತಿಂಗಳ ನಂತರ ವಿಮಾನ ಯಾನ ಮತ್ತೆ ಶುರುವಾದ ಕಾರಣ ಎಲ್ಲರ ಮುಖದಲ್ಲೂ ಕಳವಳ ಕಾಣುತ್ತಿತ್ತು. ವಿಮಾನ ಪ್ರಯಾಣಕ್ಕೆ ಹೊರಟವರ ಪೈಕಿ ಅರೆಸೇನಾ ಸಿಬ್ಬಂದಿ, ಸೇನಾ ಸಿಬ್ಬಂದಿ, ವಿದ್ಯಾರ್ಥಿಗಳು, ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇವರಲ್ಲಿ ಬಹುತೇಕರಿಗೆ ವಿಶೇಷ ರೈಲುಗಳ ಟಿಕೆಟ್​ ಸಿಗದೆ ಇದ್ದ ಕಾರಣ ವಿಮಾನ ಯಾನಕ್ಕೆ ಮುಂದಾದವರು.

    ಇದನ್ನೂ ಓದಿ:  ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?

    ದೆಹಲಿಯಿಂದ ಡೆಹ್ರಾಡೂನಿಗೆ ರೈಲಿನಲ್ಲಿ ಹೋಗೋಣ ಎಂದರೆ ಟಿಕೆಟ್ ಸಿಗುತ್ತಿಲ್ಲ. ಅಂತಾರಾಜ್ಯ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ನಾನು ಇಲ್ಲಿ ಪಿಜಿಯಲ್ಲಿ ಉಳಿದುಕೊಂಡಿದ್ದೇನೆ. ನನ್ನ ಅಪ್ಪ, ಅಮ್ಮ ಊರಲಿದ್ದು ಬಹಳ ಚಿಂತಿತರಾಗಿದ್ದಾರೆ. ಹೀಗಾಗಿ ಈಗ 5,500 ರೂಪಾಯಿ ಖರ್ಚು ಮಾಡಿಕೊಂಡು ವಿಮಾನದಲ್ಲಿ ಊರಿಗೆ ಹಿಂತಿರುಗುತ್ತಿದ್ದೇನೆ ಎಂದು ವಿದ್ಯಾರ್ಥಿ ಸಂದೀಪ್ ಸಿಂಗ್​(19) ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಪಟನಾ ಮೂಲದ ಮೆಕಾನಿಕಲ್ ಇಂಜಿನಿಯರ್ ಆಮೀರ್ ಅಫ್ಜಲ್​, ದೆಹಲಿಗೆ ಮಾರ್ಚ್​ 23ಕ್ಕೆ ಕಚೇರಿ ಕೆಲಸಕ್ಕಾಗಿ ಆಗಮಿಸಿದ್ದೆ. ಲಾಕ್​ಡೌನ್ ಕಾರಣಕ್ಕೆ ಇಲ್ಲೇ ಸಿಲುಕಿಕೊಂಡಿದ್ದೆ. ಈಗ ಈದ್ ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರ ಜತೆ ಆಚರಿಸುವುದಕ್ಕಾಗಿ ವಿಮಾನದ ಮೂಲಕ ಊರಿಗೆ ಹೋಗುತ್ತಿದ್ದೇನೆ. ನಾನು ಮಹಿಪಾಲ್ ಪುರದಲ್ಲಿ ಸಹೋದ್ಯೋಗಿ ಜತೆಗೆ ಹೋಟೆಲ್ ರೂಮಿನಲ್ಲಿ ತಂಗಿದ್ದೆ ಇಷ್ಟುದಿನ. ಅವರು ದಿನವೊಂದರ 900 ರೂಪಾಯಿ ಬಾಡಿಗೆ ತೆಗೆದುಕೊಳ್ಳುತ್ತಿದ್ದರು. ಕಡಿಮೆ ಸಂಖ್ಯೆಯ ರೈಲು ಸಂಚರಿಸುತ್ತಿರುವ ಕಾರಣ ಟಿಕೆಟ್ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ವಿರೋಧ

    ಆದಾಗ್ಯೂ, ಪಶ್ಚಿಮ ಬಂಗಾಳಕ್ಕೆ ಇನ್ನೂ ವಿಮಾನ ಯಾನ ಶುರುವಾಗಿಲ್ಲ. ಆ ರಾಜ್ಯ ಇನ್ನೂ ಇದಕ್ಕೆ ಅನುಮತಿ ನೀಡದ ಕಾರಣ ಕೋಲ್ಕತ ಹೋಗಲು ಬಯಸಿದ್ದವರಿಗೆ ಸದ್ಯ ನಿರಾಸೆಯಾಗಿದೆ. ವಿಮಾನ ಯಾನಕ್ಕೆ ಟಿಕೆಟ್ ಮುಂಗಡ ಕಾಯ್ದಿರಿಸಿಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರದಲ್ಲಿ ಈ ವಿಷಯ ತಿಳಿದ ಕಾರಣ ಅನೇಕರು ಅಸಮಾಧಾನವನ್ನೂ ಹೊರಹಾಕಿದ್ದಾರೆ. (ಏಜೆನ್ಸೀಸ್)

    ದಿಟ್ಟ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಜಯಂತಿ ಇಂದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts