More

    ನೋಡಿ ಈ ತತ್ತಿಚಿತ್ರ; ಇವನದ್ದು ಒಂದು ಮೊಟ್ಟೆಯ ಕಥೆಯಲ್ಲ…

    ನವದೆಹಲಿ: ಲಾಕ್​ಡೌನ್​ನಲ್ಲಿ ಮನೆಯಲ್ಲೇ ಕೂತು ಕೂತು ಬೇಸರಗೊಂಡವರು ಏನೇನೋ ಮಾಡಿದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಇಲ್ಲೊಬ್ಬ ಬಾಲಕ ಕೂಡ ಲಾಕ್​ಡೌನ್​ನಲ್ಲಿ ಸುಮ್ಮನೆ ಕೂತು ಬೋರಾಗಿ ಬೇರೇನೋ ಮಾಡಿ ಗಮನ ಸೆಳೆದಿದ್ದಾನೆ.

    ‘ಕೆಲಸವಿಲ್ಲದ ಬಡಗಿ ಮಗುವಿನ ಅಂಡು ಕೆತ್ತಿದ’ ಎಂಬ ಗಾದೆಯನ್ನು ಈತನ ವಿಷಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು. ಅಂದರೆ ‘ಕೆಲಸವಿಲ್ಲದ ಈ ಹುಡುಗ ಅಂಡ ಕೆತ್ತಿದ’ ಎಂದರೂ ತಪ್ಪೇನಲ್ಲ. ಹೌದು.. ಲಾಕ್​ಡೌನ್​ ಸಮಯದಲ್ಲಿ ಬೇಸರ ಕಳೆಯಲೆಂದು ಈತ ತೋರಿದ್ದ ಸೃಜನಶೀಲತೆಯೇ ಈಗ ಇವನತ್ತ ಜನರು ಗಮನ ಹರಿಸುವಂತೆ ಮಾಡಿದೆ.

    ಇದನ್ನೂ ಓದಿ: ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಏಕೆಂದರೆ ಭಿತ್ತಿಚಿತ್ರದಂತೆ ಈತ ತತ್ತಿಚಿತ್ರವನ್ನು ರಚಿಸಿದ್ದಾನೆ. ಅಂದರೆ ಮೊಟ್ಟೆಯನ್ನು ಬಳಸಿದ ಬಳಿಕ ಅದರ ಚಿಪ್ಪನ್ನು ಎಸೆಯದೇ ಸಂಗ್ರಹಿಸಿಟ್ಟು ಅದರ ಮೇಲೆ ಕಾರ್ಟೂನ್​ ಮತ್ತಿತರ ಕಲಾಕೃತಿಗಳನ್ನು ಬಿಡಿಸಿದ್ದಾನೆ. ತಮಿಳುನಾಡಿನ ಕೊಯಮತ್ತೂರಿನ ಪ್ರಥಮ ಪಿಯುಸಿಯ ಈ ಹುಡುಗ ಸಂಜಯ್, ಲಾಕ್​ಡೌನ್​ ಸಂದರ್ಭದ ಬಿಡುವಿನ ಸಮಯವನ್ನು ಹೀಗೆ ಚಿತ್ರವನ್ನು ಬಿಡಿಸುತ್ತಲೇ ಕಳೆದಿದ್ದಾನೆ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಅಂದಹಾಗೆ ಈತನದ್ದು ಒಂದು ಮೊಟ್ಟೆಯ ಕಥೆಯಲ್ಲ, ಏಕೆಂದರೆ ಈತ ಹೀಗೆ ನೂರಾರು ಮೊಟ್ಟೆಗಳ ಮೇಲೆ ಚಿತ್ರಿಸಿದ್ದಾನೆ. ‘ಮನೆಯಲ್ಲೇ ಕುಳಿತು ಬೇಸರವಾಗುತ್ತಿತ್ತು. ಅದನ್ನು ಹೋಗಲಾಡಿಸಲೆಂದು ಇವನ್ನೆಲ್ಲ ಮಾಡಿದೆ. ನಾನು ಮೊಟ್ಟೆಯನ್ನು ತಿನ್ನುತ್ತಿದ್ದೆ. ಆದರೆ ಅದರ ಚಿಪ್ಪನ್ನು ಎಸೆಯುತ್ತಿರಲಿಲ್ಲ. ಅವುಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದೇನೆ. ಹೀಗೆ ನೂರಕ್ಕೂ ಅಧಿಕ ಮೊಟ್ಟೆಯ ಚಿಪ್ಪುಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದೇನೆ’ ಎಂಬುದಾಗಿ ಈತ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)

    ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

    ವಾರದೊಳಗೇ ಅರ್ಧಕ್ಕರ್ಧ ಕಡಿಮೆ ಆಯ್ತು ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣ

    ಕನ್ನಡಿಗರ ಕ್ಷಮೆ ಕೋರಿದ್ರು ನಿರ್ಮಲಾ ಸೀತಾರಾಮನ್!; ಎಲ್ಲದಕ್ಕೂ ನಾನೊಬ್ಳೇ ಹೊಣೆ ಅಲ್ಲ ಎಂದಿದ್ದೇಕೆ?

    ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts