More

    ಫೈನಲ್ ಬ್ಯಾಚಿನ ವಿದ್ಯಾರ್ಥಿಗಳಿಗೆ ಕರೊನಾ ಸಂಕಷ್ಟ ತಂದೊಡ್ಡಿದ ಸಂಕಟವಿದು…

    ಇಳಿಸಂಜೆಯೊಂದು ಕಳೆದು ಹೋಗುತ್ತಿವೆ. ಮೂರು ವರ್ಷದ ನೆನಪುಗಳು ಒಂದೊಂದಾಗಿ ಎದುರಾಗುತ್ತಿವೆ. ಕ್ಲಾಸು, ಕಾರಿಡಾರ್, ಲೈಬ್ರರಿ, ಕ್ಯಾಂಟೀನ್, ಹಾಸ್ಟೆಲ್, ಗಾರ್ಡನ್, ಗ್ರೌಂಡಿನ ಕಲ್ಲು ಹಾಸಿನ ಮೇಲಿನ ಹರಟೆ ಇತ್ಯಾದಿ. ಎಲ್ಲವೂ ನೆನಪಾಗುತ್ತಿವೆ. ಈ ನೆನಪುಗಳೆಲ್ಲ ಸದಾ ಹಸಿರು…

    ಪದವಿ ಕಾಲೇಜಿನ ದಿನಗಳು ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಬಹುಮುಖ್ಯ ಘಟ್ಟ. ಒಬ್ಬ ವಿದ್ಯಾರ್ಥಿ ಪಾಠದ ಜತೆಗೆ ಪಠ್ಯೇತರವಾಗಿ ಕಲಿತುಕೊಂಡು ಆಳವಾಗಿ ಬೆಳೆಯಲು ಕಾಲೇಜು ವೇದಿಕೆ. (ಇದನ್ನ ಬಳಸಿಕೊಳ್ಳುವುದು ಅವರವರ ಆಸಕ್ತಿಗೆ ಬಿಟ್ಟದ್ದು.) ಹೌದು, ಈ ಮೂರು ವರುಷಗಳಲ್ಲಿ ಹತ್ತು ಹಲವು ಅನುಭವಗಳನ್ನ ಕಾಲೇಜು ಕಲಿಸಿದೆ. ಇದೆಲ್ಲದರ ನಡುವೆ ನಮ್ಮ ಭವಿಷ್ಯವನ್ನ ಭದ್ರವಾಗಿ ಕಟ್ಟಿಕೊಳ್ಳಲೇಬೇಕಿದೆ. ಮತ್ತೊಂದು ಮೆಟ್ಟಿಲು ಹತ್ತಬೇಕಿದೆ. ಇದಕ್ಕೋಸ್ಕರ ಕಾಲೇಜಿನಿಂದ ನಿರ್ಗಮನ ಅನಿವಾರ್ಯ…

    ಶಿಕ್ಷಕರು ಪಾಠ ಮಾಡಿದರು. ಹೆಚ್ಚಾಗಿ ಮೌಲ್ಯಗಳನ್ನ ಹೇಳಿದರು. ಅವರ ಅನುಭವಗಳನ್ನ ಒಂದೊಂದಾಗಿ ತಿಳಿಸಿದರು. ನಾವೊಂದಿಷ್ಟು ಕಲಿತುಕೊಂಡೆವು. ಬರೀ ತರಗತಿಯೊಳಗಿನ ಪಾಠದಿಂದಷ್ಟೇ ಕಲಿತುಕೊಂಡಿರೋ ಕೇಳಿದರೆ ಖಂಡಿತ ಇಲ್ಲ, ಮೂರು ವರ್ಷದ ಈ ಪಯಣದಲ್ಲಿ ಎದುರಾದ ಪ್ರತಿಯೊಂದು ಸನ್ನಿವೇಶವೂ ಕೂಡ ಹೊಸದೊಂದು ಪಾಠವನ್ನ ಕಲಿಸಿದೆ…

    ಇದನ್ನೂ ಓದಿ: ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!

    ಇನ್ನು ಕ್ಲಾಸ್ ಅಂತ ಬಂದ್ರೆ ಕೆಲಹೊತ್ತಿನಲ್ಲಿ ಪಾಠ ಬೋರ್ ಆಗೋದು ಡಿಗ್ರಿ ಸಮಯದಲ್ಲಿ ಸಾಮಾನ್ಯ. ಮತ್ತದೇ ಕ್ಲಾಸ್ ಬಂಕ್, ಕ್ಯಾಂಟೀನಿನಲ್ಲಿ ಹರಟೆ… ಕ್ಲಾಸ್ ಕೇಳೋದಕ್ಕೆ ಇಷ್ಟವಿಲ್ಲದಿದ್ದಾಗ ಪಿಸು ಧ್ವನಿಯಲ್ಲಿ ಮಾತು, ಈ ಸಮಯದಲ್ಲಿ ಬಾಯೊಳಗೆ ಚಾಕ್ಲೆಟ್ ಬಿದ್ದರಂತೂ ಆಹಾ.! ಸ್ವರ್ಗ ಸುಖ. ಇನ್ನು ನಮ್ ಹೀರೊ ಸಿನಿಮಾ ಬಂದಾಗ ಬಂಕ್ ಮಾಡಿ ಥಿಯೇಟರ್ ಕಡೆ ಹೋದ್ದೂ ಇದೆ. ಎಂಟೆಂಡೆನ್ಸ್ ಶಾರ್ಟೇಜ್ ಒಂದೆರಡ್ ಸಲ ಬಂದಿದೆ. ಲೀವ್ ಲೆಟರ್ರಿಗೆಲ್ಲ ಮನೇಲಿ ಸೈನ್ ಹಾಕಿದ್ದು ಒಂದೇ ಸಲ. ಪ್ರತಿರಜೆಗೂ ಹಿಂದಿನ ಬೇಂಚಲ್ಲಿ ಕುಳಿತಿದ್ದವನದ್ದೇ ಸಹಿ…

    ಇಲ್ಲಿ ಕಲಿತ ವಿಷಯಗಳೆಷ್ಟೋ, ಸಣ್ಣ ನಗುವಿನಿಂದ ಹುಟ್ಟಿಕೊಂಡು ಪರಿಚಯವೆಷ್ಟೋ… ಲೆಕ್ಕವಿಲ್ಲ. ಹೇಳುತ್ತಾ ಹೋದರೆ ಮುಗಿಯದಷ್ಟು ಕಥೆಗಳಿವೆ, ನೆನಪುಗಳಿವೆ. ಮತ್ತೆ ಮತ್ತೆ ಬರೆಯಬೇಕು ಎನ್ನುವಷ್ಟು ಘಟನೆಗಳು ಭದ್ರವಾಗಿ ಬಚ್ಚಿಟ್ಟಕೊಂಡಿವೆ…

    ಇದನ್ನೂ ಓದಿ:  ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್​

    ಈ ಮೂರು ವರ್ಷದ ಡಿಗ್ರಿ ಲೈಫಿನ ನೆನಪಿನ ಬುತ್ತಿಯನ್ನು ಹಿಡಿದುಕೊಂಡು ಹೊರಡುತ್ತಿದ್ದೇವೆ. ಬೆಳಗಾದರೆ ಸಾಕು ಅದೇ ಪಾಠ, ಅದೇ ಶೀಕ್ಷಕರು ಅನ್ನುತ್ತಿದ್ದ ನಮಗೆ ಈಗ ಕಾಲೇಜು ಮತ್ತಷ್ಟು ಆಪ್ತವಾಗುತ್ತಿವೆ. ಕಾಲೇಜಿನಿಂದ ಹೊರಡುವ ಸಮಯದಲ್ಲಿ ಮತ್ತಷ್ಟು ಜನರ ಪರಿಚಯ ಆಗುತ್ತಿವೆ. ಇಷ್ಟು ಸಮಯ ಅಕ್ಕಪಕ್ಕದಲ್ಲಿದ್ದವರೆಲ್ಲಾ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಆದರೆ ಇಲ್ಲಿಂದ ಅಗಲಿಕೆ ಅನಿವಾರ್ಯ. ನಗು, ನೆನಪು ಮತ್ತು ಅನುಭವಗಳಷ್ಟೇ ಉಳಿದುಕೊಂಡಿವೆ. ನಗುನಗುತ್ತಾ ಮೊದಲ ದಿನ ಕಾಲೇಜಿಗೆ ಬಂದ ನಾವುಗಳು ಹತ್ತು ಹಲವು ನೆನಪುಗಳೊಂದಿಗೆ ಇಲ್ಲಿಂದ ಮುಂದೆ ಸಾಗುತ್ತಿದ್ದೇವೆ…

    ಕೊರೊನಾ ಕಾರಣದಿಂದ ಕಾಲೇಜಿನಿಂದ ಹೊರಡುವ ಘಳಿಗೆ ತಡವಾಗಿದೆ. ಇನ್ನು ಮುಂದೆ ಹುಡುಗಾಟಗಳಿಗೆ ಬ್ರೇಕ್ ಹಾಕುತ್ತಾ, ಮತ್ತದೇ ನೆನಪುಗಳನ್ನು ಮೆಲುಕು ಹಾಕುತ್ತಾ, ಈ ಮೂರು ವರ್ಷ ನಮ್ಮನ್ನ ತಿದ್ದಿ ತೀಡಿದ ಗುರುಗಳಿಗೆ ವಂದಿಸುತ್ತಾ ನಾವಿನ್ನು ಬರುತ್ತೇವೆ. ಬದುಕೆಂಬುದು ನಿಂತ ನೀರಲ್ಲ. ಅದು ಸದಾ ಹರಿಯುತ್ತಿರಬೇಕು. ಈ ಮೂರು ವರ್ಷ ಸ್ನೇಹದ ಹಸ್ತ ಚಾಚಿದ ಎಲ್ಲರಿಗೂ ಧನ್ಯವಾದಗಳು…. ಪದವಿ ಸಮಯದ ನೆನಪುಗಳು ಸದಾ ಹಸಿರಾಗಿರಲಿ….

    ರಾಮ ಕಿಶನ್ ಕೆ.ವಿ
    ವಿವೇಕಾನಂದ ಕಾಲೇಜು, ಪುತ್ತೂರು.

    ಮಹಾರಾಷ್ಟ್ರ ರಾಜಕಾರಣ: ಬಿಜೆಪಿಯಿಂದ ಹೊರಬಿದ್ದ ಏಕನಾಥ ಖಡ್ಸೆ; 23ರಂದು ಎನ್​ಸಿಪಿ ಸೇರ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts