More

    ದುರಂತದ ನಡುವೆ ಒಂದು ವಿಚಿತ್ರ ಘಟನೆ : ತಾಯಿಯ ಶವ ತರಲು ಒಳಹೋದವಗೆ ಕಾದಿತ್ತು ಆಶ್ಚರ್ಯ !

    ಚಾಮರಾಜನಗರ : ಕರೊನಾ ಪಾಸಿಟೀವ್ ಬಂದ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಮರಾಜನಗರ ತಾಲೂಕಿನ ಲಿಂಗನಪುರ ಗ್ರಾಮದ ಮಂಗಳಮ್ಮ (59) ನಿನ್ನೆ ಇನ್ನೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಬಸವ ರಾಜೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆಗೆ ಆಕ್ಸಿಜನ್ ಕೊರತೆಯಾಗಿದ್ದರಿಂದ ಜಿಲ್ಲಾಸ್ಪತ್ರೆ ಸೇರಿದ್ದರು.

    ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆಯಿಂದಾಗಿ ನಿನ್ನೆ ರಾತ್ರಿ ಹಲವು ರೋಗಿಗಳು ಮೃತಪಟ್ಟಿದ್ದರು. ಅವರೊಂದಿಗೆ ಮಂಗಳಮ್ಮ ಕೂಡ ಸತ್ತಿದ್ದಾರೆಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪ್ಪು ಮಾಹಿತಿ ನೀಡಿದ್ದರು. ಮಾಹಿತಿ ದೊರೆಯುತ್ತಿದ್ದಂತೆ ದುಃಖತಪ್ತರಾದ ಕುಟುಂಬದವರು, ಕಂಗಾಲಾಗಿ ಅಂತ್ಯಸಂಸ್ಕಾರಕ್ಕೆ ಸಿದ್ದರಾದರು. ಗ್ರಾಮದಲ್ಲಿ ಸಮಾಧಿಯನ್ನು ತೆಗೆದು ಶವಸಂಸ್ಕಾರಕ್ಕೂ ಸಿದ್ದತೆ ನಡೆಸಿದರು.

    ಇದನ್ನೂ ಓದಿ: ತಂದೆಯನ್ನು ಕರೊನಾ ಬಲಿ ತೆಗೆದುಕೊಂಡಿತು… ಮೂರೇ ದಿನಗಳಲ್ಲಿ ಕೆಲಸಕ್ಕೆ ಮರಳಿದರು ಈ ವೈದ್ಯ

    ಆದರೆ ಎಷ್ಟು ಹೊತ್ತಾದರೂ ಶವ ನೀಡದ ಕಾರಣ ಒಳ ಹೋಗಿ ನೋಡಿದ ಮಂಗಳಮ್ಮ ಪುತ್ರನಿಗೆ ಆಶ್ಚರ್ಯ ಕಾದಿತ್ತು. ಒಳಗೆ ವೆಂಟಿಲೇಟರ್​​ ಮೇಲೆ ಉಸಿರಾಡುತ್ತಾ ಜೀವಂತವಾಗಿದ್ದ ತಾಯಿಯನ್ನು ಕಂಡು ನಿಟ್ಟುಸಿರು ಬಿಟ್ಟರು. ಬದುಕಿದ್ದರೂ ಸತ್ತಿದ್ದಾರೆ ಎಂದು ಇಲಾಖೆ ಹೇಗೆ ಮಾಹಿತಿ ನೀಡಿತು ಎಂದು ರೋಷಗೊಂಡರು.

    24 ಜನ ಕರೊನಾ ರೋಗಿಗಳು ಸಾವಪ್ಪಿದ ದುರಂತದ ನಡುವೆ ಅದೃಷ್ಟವಶಾತ್ ಬದುಕಿದ ಮಂಗಳಮ್ಮನವರಿಗಾಗಿ ಗ್ರಾಮದಲ್ಲಿ ತೆಗೆದಿದ್ದ ಸಮಾಧಿಗೆ ಗ್ರಾಮಸ್ಥರು ಕೋಳಿ ಹಾಕಿ, ಸಮಾಧಿ ಮುಚ್ಚಿದರು ಎನ್ನಲಾಗಿದೆ.

    ಅಮ್ಮನನ್ನು ಉಳಿಸಲು ಬಾಯಿಂದ ಉಸಿರು ತುಂಬಿದಳು ! ಮನ ಕಲಕುತ್ತೆ ಈ ಘಟನೆ

    ವರುಣ್​ ಚಕ್ರವರ್ತಿ, ಸಂದೀಪ್​ ವಾರಿಯರ್​​ಗೆ ಕರೊನಾ; ಸ್ಕ್ಯಾನ್​ಗೆ ಹೋದಾಗ ಸೋಂಕು ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts