More

    ಹೈದರಾಬಾದ್​ನಲ್ಲಿ ಮತ್ಸ್ಯಕನ್ಯೆ ರೂಪದ ವಿಚಿತ್ರ ಮಗು ಜನನ..!

    ಹೈದರಾಬಾದ್​: ಮಹಿಳೆಯೊಬ್ಬಳು ಮತ್ಸ್ಯಕನ್ಯೆ ರೂಪದ ವಿಚಿತ್ರ ಮಗುವಿಗೆ ಜನ್ಮ ನೀಡಿರುವ ಘಟನೆ ತೆಲಂಗಾಣ ರಾಜಧಾನಿ ಹೈದರಬಾದ್​ನಿಂದ ವರದಿಯಾಗಿದೆ.

    ಸಂಗಾರೆಡ್ಡಿ ಮೂಲದ ತೆಹ್ಸಿನ್​ ಸುಲ್ತಾನಾ (20) ಎಂಬಾಕೆ ಹೆರಿಗೆಗೆಂದು ಮಾರ್ಚ್​ 5ರಂದು ಹೈದರಾಬಾದ್​ನ ಪೆಟ್ಲಬುರುಜು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್​ 10ರಂದು ರಾತ್ರಿ 7 ಗಂಟೆಗೆ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಕಾಲುಗಳು ಒಂದಕ್ಕೊಂದು ಅಂಟಿಕೊಂಡು ಮತ್ಸ್ಯಕನ್ಯೆ ರೂಪದಲ್ಲಿದೆ.

    ಇದನ್ನೂ ಓದಿರಿ: ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್​ಕುಮಾರ್

    ವಿಚಿತ್ರ ಮಗು ಜನಿಸಿದ ಬೆನ್ನಲ್ಲೇ ಆಸ್ಪತ್ರೆಯ ಎಲ್ಲ ವೈದ್ಯರು ಮಗು ಮತ್ತು ಮಹಿಳೆಯನ್ನು ಪರೀಕ್ಷಿಸಿದರು. ಆದಾಗ್ಯ ಮಗು ಹುಟ್ಟಿದ ದಿನವೇ ರಾತ್ರಿ 10 ಗಂಟೆಗೆ ಕೊನೆಯುಸಿರೆಳೆದಿದೆ.

    ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು ಇಂತಹ ಜನನ ತುಂಬಾ ವಿರಳ. ಅನುವಂಶಿಕ ದೋಷದಿಂದಾಗಿ ಇಂತಹ ಜನನಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಪ್ರ್ಯಾಂಕ್​ ಹೆಸರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಭಾರತದ ಯೂಟ್ಯೂಬರ್​ಗಳಿಗೆ ಕಾದಿದೆ ಸಂಕಷ್ಟ!

    ನಿಶ್ಚಿತಾರ್ಥದ ಬೆನ್ನಲ್ಲೇ ಕೈಕೊಟ್ಟ ವರ: ಮದ್ವೆ ಮುನ್ನ ಗೋವಾ ಭೇಟಿಯ ಕರಾಳತೆ ಬಿಚ್ಚಿಟ್ಟ ವಧು!

    ಅಣೆಕಟ್ಟು ಆತಂಕ; ಬ್ರಹ್ಮಪುತ್ರಾ ನದಿಗೆ ಚೀನಾ ಡ್ಯಾಂ ನಿರ್ಮಾಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts